ನಮ್ಮದು ಆಚಾರ ಪ್ರಧಾನ ಧರ್ಮ

Ours is a religion of ritual.
ತಂಗಡಗಿಯ ಹಡಪದ ಅಪ್ಪಣ್ಣದೇವರ ಮಹಾ ಸಂಸ್ಥಾನಮಠದಲ್ಲಿ ಪ್ರಾರಂಭಗೊಂಡಿರುವ ಮೂರು ದಿನಗಳ ಧರ್ಮದರ್ಶಿಗಳ ಕಾರ್ಯಾಗಾರದ ಸಾನ್ನಿಧ್ಯವಹಿಸಿದ್ದ ಜಗದ್ಗುರು ಡಾ.ಗುರುಮಹಾಂತ ಸ್ವಾಮೀಜಿ ಮಾತನಾಡಿದರು. ಅನ್ನದಾನ ಭಾರತಿ ಅಪ್ಪಣ್ಣ ಸ್ವಾಮೀಜಿ, ಎಂ.ಎಸ್​.ನಾವಿ, ಡಾ.ಬಾಬುರಾಯಣ್ಣ ಧನ್ನೂರ, ಪ್ರಕಾಶ ಹಡಪದ ಇನ್ನಿತರರಿದ್ದರು.
Published on

ತಂಗಡಗಿ: ಕಾರ್ಯಾಗಾರ ಶಿಣ ಕೊಡುವಂಥದ್ದು. ಇಲ್ಲಿ ವಿಚಾರಗಳ ಜೊತೆ ಆಚಾರ, ಆಚರಣೆಗಳನ್ನೂ ಕಲಿತುಕೊಂಡು ಹೋಗಬೇಕಾಗುತ್ತದೆ. ನಮ್ಮದು ಆಚಾರ ಪ್ರಧಾನ ಧರ್ಮವಾಗಿರುವುದರಿಂದ ಮಠಗಳು ಬೆಳೆಯಬೇಕು ಎಂದು ಎಂದು ಇಳಕಲ್ಲನ ವಿಜಯಮಹಾಂತ ಮಠದ ಜಗದ್ಗುರು ಡಾ.ಗುರುಮಹಾಂತ ಸ್ವಾಮೀಜಿ ಹೇಳಿದರು.

ತಂಗಡಗಿ ಹೊರವಲಯದಲ್ಲಿರುವ ಹಡಪದ ಅಪ್ಪಣ್ಣದೇವರ ಮಹಾಸಂಸ್ಥಾನಮಠದಲ್ಲಿ ಶುಕ್ರವಾರ ಪ್ರಾರಂಭಗೊಂಡ ಮೂರು ದಿನಗಳ ಧರ್ಮದರ್ಶಿಗಳ ಕಾರ್ಯಾಗಾರದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಅವರು, ಇದೊಂದು ಅಪರೂಪದ, ಅವಶ್ಯವಾದ ಕಾರ್ಯಾಗಾರ. ಇದು ಧರ್ಮದರ್ಶಿಗಳ ಜವಾವ್ದಾರಿಗಳ ಬಗ್ಗೆ ಅರಿವು ಮೂಡಿಸುತ್ತದೆ. ಸಂಸ್ಥಾನಮಠ ಬೆಳೆಸುವುದರಿಂದ ಸಮಾಜ ಬೆಳೆಯುತ್ತದೆ. ಸಮಾಜ ಬೆಳೆದರೆ ವ್ಯಕ್ತಿ ಬೆಳೆಯುತ್ತಾನೆ. ಇದು ಆ ಸಮಾಜಕ್ಕೂ ಗೌರವ ತಂದುಕೊಡುವಂಥದ್ದು. ಸಿದ್ಧಗಂಗಾ, ಆದಿಚುಂಚನಗಿರಿ, ಸಿರಿಗೆರೆ ಮಠಗಳು ಇದಕ್ಕೆ ಉದಾಹರಣೆಯಾಗಿವೆ ಎಂದರು.

ಹಡಪದ ನೌಕರರ ಸಂದ ರಾಜ್ಯಾಧ್ಯ ಪ್ರಕಾಶ ಹಡಪದ ಮಾತನಾಡಿ, ಧರ್ಮದರ್ಶಿಗಳ ಸಹಿತ ಸಮಾಜದ ಪ್ರತಿಯೊಬ್ಬರೂ ಮಠಕ್ಕೆ ಕೊಡುಗೆಯಾಗಬೇಕು. ಧರ್ಮದರ್ಶಿಗಳು ಸೈನಿಕರಿದ್ದಂತೆ. 15&20 ವರ್ಷಗಳ ಹಿಂದೆ ಇದ್ದ ಸಮಾಜಕ್ಕೂ ಈಗಿನ ಸಮಾಜಕ್ಕೂ ಸಾಕಷ್ಟು ಬದಲಾವಣೆ ಆಗಿದೆ. ಸಮಾಜದ ಶ್ರೀಗಳು ಇದಕ್ಕೆ ಕಾರಣ ಎಂದರು.

ನೇತೃತ್ವ್ವ ವಹಿಸಿದ್ದ ಶ್ರೀಮಠದ ಪೀಠಾಧಿಪತಿ ಅನ್ನದಾನ ಭಾರತಿ ಅಪ್ಪಣ್ಣ ಸ್ವಾಮೀಜಿ ಮಾತನಾಡಿ, ಈ ಕಾರ್ಯಾಗಾರದ ಪರಿಕಲ್ಪನೆ ವಿನೂತನವಾದದ್ದು. ನಮ್ಮ ಉದ್ದೇಶ ಸಲವಾದರೆ ಕಾರ್ಯಾಗಾರದ ಶ್ರಮ ಸಾರ್ಥಕವಾಗುತ್ತದೆ. ಶ್ರೀಮಠ, ಸಮಾಜ ಬೆಳೆಸಲು ಎಲ್ಲರೂ ಒಗ್ಗೂಡಿ ಕೆಲಸ ಮಾಡಬೇಕು ಎಂದರು.

ಕಲಬುರಗಿ ವಿಶ್ವವಿದ್ಯಾಲಯದ ಹಡಪದ ಅಪ್ಪಣ್ಣ ಅಧ್ಯಯನ ಪೀಠದ ನಿರ್ದೇಶಕ ಡಾ.ಬಾಬುರಾಯಣ್ಣ ಎಂ.ಧನ್ನೂರ ಉಪನ್ಯಾಸ ನೀಡಿದರು. ಮಠದ ಪ್ರಧಾನ ಕಾರ್ಯದರ್ಶಿ ಸಿ.ಎ್​.ನಾವಿ ಮಾತನಾಡಿದರು. ಕಾರ್ಯಾಧ್ಯ ಎಂ.ಎಸ್​.ನಾವಿ ಮುಧೋಳ ಅಧ್ಯತೆ ವಹಿಸಿದ್ದರು. ಬಸವರಾಜ ಮಾಗಿ ಇಳಕಲ್ಲ, ಚಂದ್ರಶೇಖರ ಅಮಲಿಹಾಳ ಸಿಂದಗಿ, ಮಲ್ಲಿಕಾರ್ಜುನ ಹಡಪದ ಬೆಂಗಳೂರು, ಮಹಾಂತೇಶ ಮೂಲಿಮನಿ ಕಲಕೇರಿ, ನಾಗಪ್ಪ ಹಡಪದ ಸೂಳಿಭಾವಿ, ದ್ಯಾಮಣ್ಣ ಮಾದಿನೂರ ಕೊಪ್ಪಳ, ಭೀಮಪ್ಪ ಹಡಪದ ರಾಂಪೂರ, ಮಠದ ಕಾರ್ಯದರ್ಶಿ ಹಣಮಂತ್ರಾಯ ಗುಡದಿನ್ನಿ ಪಾಲ್ಗೊಂಡಿದ್ದರು.

ಉದ್ಘಾಟನೆ ನಂತರ ಧಾರವಾಡದ ಧರ್ಮದರ್ಶಿ ಈರಣ್ಣ ಚಿಕ್ಕಬೆಳ್ಳಿಕಟ್ಟಿ ಅವರ ಅಧ್ಯತೆಯಲ್ಲಿ ಧರ್ಮದರ್ಶಿಗಳ ದೂರದೃಷ್ಟಿ ಹಾಗೂ ಮೌಲ್ಯಗಳು ವಿಷಯ ಕುರಿತು ಬೀಳಗಿಯ ಸರ್ಕಾರಿ ಪ್ರೌಢಶಾಲೆ ಶಿಕ ಪ್ರಕಾಶ ಹಡಪದ, ರಾಮದುರ್ಗದ ನಿವೃತ್ತ್ತ ಪ್ರಚಾರ್ಯ ಬಿ.ಬಿ.ವಂದಾಲ ಅವರ ಅಧ್ಯತೆಯಲ್ಲಿ ಧರ್ಮದರ್ಶಿಗಳು ಹಾಗೂ ಜವಾಬ್ದಾರಿಗಳು ವಿಷಯ ಕುರಿತು ಬಾಗಲಕೋಟೆಯ ಎಸ್​ಎಸ್​ವೈ ಕೇಂದ್ರದ ಪ್ರಧಾನಾಚಾರ್ಯ ಸುರೇಶ ಉತ್ತರಕರ, ಸಿಂಧನೂರನ ನಿವೃತ್ತ ಶಿಣಾಧಿಕಾರಿ ಎಚ್​.ಜಿ.ಹಂಪಣ್ಣವರ ಅಧ್ಯತೆಯಲ್ಲಿ ಧರ್ಮದರ್ಶಿಗಳ ಜೀವನ ಮೌಲ್ಯ ಮತ್ತು ವ್ಯಕ್ತಿತ್ವ ವಿಕಸನ ವಿಷಯ ಕುರಿತು ಶಂಕರಪುರ ಸರ್ಕಾರಿ ಪ್ರೌಢಶಾಲೆ ಶಿಕ ಶಿವಾಜಿ ಪಾಟೀಲ ಉಪನ್ಯಾಸ ನೀಡಿದರು.

ಬಸವರಾಜ ಬಂಡರಗಲ್ಲ ಕಾರ್ಯಕ್ರಮ ನಿರ್ವಹಿಸಿದರು. ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ 75ಕ್ಕೂ ಹೆಚ್ಚು ಮಠಗಳ ಧರ್ಮದರ್ಶಿಗಳು ಕಾರ್ಯಾಗಾರದಲ್ಲಿ ಭಾಗವಹಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net