ವೀರಭದ್ರೇಶ್ವರ ಜಾತ್ರಾಹೋತ್ಸವ ಪ್ರಾರಂಭ

Veerabhadreshwara fair begins
ಹೊರ್ತಿ ವೀರಭದ್ರೇಶ್ವರ
Published on

ಹೊರ್ತಿ: ಏಳಗಿ ಪಿಎಚ್​ ಗ್ರಾಮದಲ್ಲಿ ಪ್ರತಿ ಮೂರು ವರ್ಷಕ್ಕೊಮ್ಮೆ ನಡೆಯಲಿರುವ ಶ್ರೀ ವೀರಭದ್ರೇಶ್ವರ ಜಾತ್ರೆ ಮೇ 17ರಿಂದ 19ರ ವರೆಗೆ ನಡೆಯಲಿದೆ.

17ರಂದು ನಸುಕಿನಜಾವ 4ಕ್ಕೆ ರುದ್ರಾಭಿಷೇಕ, ಬೆಳಗ್ಗೆ 10ಕ್ಕೆ ಮಹಾದೇವಗೌಡ ಪಾಟೀಲರ ಮನೆಯಿಂದ ಮಹಿಳೆಯರ ಕುಂಭಮೇಳದೊಂದಿಗೆ ಕಲಶದ ಮೆರವಣಿಗೆ ಹನುಮಾನ ಮಂದಿರಕ್ಕೆ ಆಗಮಿಸಿದ ಬಳಿಕ ಕಲಶಾರೋಹಣ ಕಾರ್ಯಕ್ರಮ ನಡೆಯಲಿದೆ. ಜೈನಾಪುರದ ರೇಣುಕ ಶಿವಯೋಗಿ ಶಿವಾಚಾರ್ಯರು ಕಾರ್ಯಕ್ರಮ ನೆರವೇರಿಸಿ ಆಶೀರ್ವಚನ ನೀಡಲಿದ್ದಾರೆ. ಸಂಜೆ 4ಕ್ಕೆ ಮೊಸರು ಗಡಿಗೆ ಒಡೆಯುವ ಕಾರ್ಯಕ್ರಮ 5.30ಕ್ಕೆ ಧರ್ಮ ಸಭೆ, ರಾತ್ರಿ 10ಕ್ಕೆ ಗದಗ ಜಿಲ್ಲೆಯ ಕೊಣ್ಣೂರಿನ ಜೈಕಿಸಾನ್​ ಕಲಾ ತಂಡದಿಂದ ಸಾಂಸತಿಕ ಕಾರ್ಯಕ್ರಮಗಳು ನಡೆಯಲಿವೆ.

18 ರಂದು ಬೆಳಗ್ಗೆ ವೀರಭದ್ರೇಶ್ವರ ಗದ್ದುಗೆಗೆ ರುದ್ರಾಭಿಷೇಕ, ಸಹಸ್ರ ಬಿಲ್ವಾರ್ಚನೆ, ಬೆಳಗ್ಗೆ 10ಕ್ಕೆ ಕಲಶಾರೋಹಣ, ಮಧ್ಯಾಹ್ನ 12ಕ್ಕೆ ಎಲೆ ಪೂಜೆ ಕಾರ್ಯಕ್ರಮ ನಡೆಯಲಿದೆ. ಬಳಿಕ ಮಣಕಲಗಿ ಗ್ರಾಮದ ದ್ಯಾಮಗಂಗಾ ದೇವಿ ಹಾಗೂ ವೀರಭದ್ರೇಶ್ವರ ದೇವರು ಪಲ್ಲಕ್ಕಿಗಳ ಭೇಟಿ ಕಾರ್ಯಕ್ರಮ ನಡೆಯಲಿದೆ. ಕಾಶೀ ವೇಷಧಾರಿ ಪುರವಂತರೊಂದಿಗೆ ನಂದಿ ಧ್ವಜ ಮೆರವಣಿಗೆ, ಮಧ್ಯಾಹ್ನ 2ಕ್ಕೆೆ ಹರದೇಶಿ&ನಾಗೇಶಿ ಗೀಗಿ ಪದ, ಸಂಜೆ 4ಕ್ಕೆ ಅಗ್ನಿ ಕುಂಡ ತೆಗೆವುದು, ರಾತ್ರಿ 10ಕ್ಕೆ ಪವಿತ್ರ ಅಗ್ನಿ ಹೊತ್ತಿಸುವ ಕಾರ್ಯಕ್ರಮ ನಡೆಯಲಿದೆ.

19 ರಂದು 11ಕ್ಕೆ ಬಂಡಯ್ಯ ಶರಣಯ್ಯ ಹಿರೇಮಠ ಅವರಿಂದ ಅಗ್ನಿ ಶಾಂತಗೊಳಿಸುವುದರೊಂದಿಗೆ ಪಲ್ಲಕ್ಕಿ ಹಾಗೂ ನಂದಿ ಧ್ವಜಗಳೊಂದಿಗೆ ದೇವರ ಅಗ್ನಿ ಪ್ರವೇಶ, ಮಧ್ಯಾಹ್ನ 12ರಿಂದ 5ರ ವರೆಗೆ ಡೊಳ್ಳಿನ ಪದಗಳು ನಡೆಯಲಿವೆ. ರಾತ್ರಿ 10.30ಕ್ಕೆ ಹಾಸ್ಯಕಲಾವಿದ ವಿಠ್ಠಲ ಚಿಕ್ಕಲಗುಂಡಿ ಮತ್ತು ತಂಡದಿಂದ "ಕರಿ ಮಣಿ ಮಾಲಿಕ ನೀನಲ್ಲ' ಸಾಮಾಜಿಕ ನಾಟಕ ನಡೆಯಲಿದೆ. ಭಕ್ತರಿಗೆ ನಿತ್ಯ ಮಹಾಪ್ರಸಾದ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಜಾತ್ರಾ ಕಮಿಟಿ ಮೇಲುಸ್ತುವಾರಿ ಅಶೋಕ ತಂಬ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net