

ಮುದ್ದೇಬಿಹಾಳ: ಸಮಸಮಾಜದ ಹರಿಕಾರ ಬಸವಣ್ಣನವರ ಜಯಂತಿಯಂದೇ ಜನಗಣತಿಯೊಂದಿಗೆ ಜಾತಿಗಣತಿ ನಡೆಸುವ ರ್ನಿಣಯವನ್ನು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕ್ಯಾಬಿನೆಟ್ ಸ್ವೀಕರಿಸಿರುವುದು ಐತಿಹಾಸಿಕ ಟನೆಯಾಗಿದೆ. ಇದನ್ನು ದೇಶದ ಸಮಸ್ತ ಹಿಂದು ಸಮಾಜ ಸ್ವಾಗತಿಸುತ್ತದೆ ಎಂದು ಬಿಜೆಪಿ ರೈತ ಮೋರ್ಚಾ ರಾಜ್ಯಾಧ್ಯ ಎ.ಎಸ್.ಪಾಟೀಲ ನಡಹಳ್ಳಿ ಹೇಳಿದರು.
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆರ್ಥಿಕ, ಸಾಮಾಜಿಕ, ಶೈಣಿಕ ಅಸಮಾನತೆ ತೊಡೆದುಹಾಕಲು, ಹಿಂದುಳಿದ ಸಮಾಜದಲ್ಲಿನ ಅಶಕ್ತರನ್ನು ಸಶಕ್ತರನ್ನಾಗಿಸಲು ವೈಜ್ಞಾನಿಕ, ಸಂವಿಧಾನದ ಕಾನೂನಾತ್ಮಕ ಮನ್ನಣೆ ಹೊಂದಿರುವ ಗಣತಿ ಬಲ ತುಂಬಲಿದೆ. ಜಾತಿಗಣತಿಗೆ ತಮ್ಮ ಸಮೀೆ ಆಧಾರವಾಗಿಟ್ಟುಕೊಳ್ಳುವಂತೆ ಸಿಎಂ ಸಿದ್ದರಾಮಯ್ಯ ಹೇಳಿರುವುದು ಹಾಸ್ಯಾಸ್ಪದ ಎಂದರು.
2011ರ ಜನಗಣತಿಯಲ್ಲಿ ಜಾತಿ ಸೇರ್ಪಡೆಯ ಸಾಮಾಜಿಕ, ಶೈಣಿಕ, ಆರ್ಥಿಕ ದತ್ತಾಂಶವನ್ನು ಪ್ರಧಾನಿ ಮನಮೋಹನ್ಸಿಂಗ್ ನೇತೃತ್ವದ ಆಗಿನ ಕಾಂಗ್ರೆಸ್ ಸರ್ಕಾರ ಬಹಿರಂಗಗೊಳಿಸದಿರುವುದು ಹಿಂದು ಸಮಾಜ, ಹಿಂದುಳಿದ ವರ್ಗದವರಿಗೆ ಮಾಡಿರುವ ದೊಡ್ಡ ದ್ರೋಹ. ಪ್ರಧಾನಿಗಳಾಗಿದ್ದ ಜವಾಹರಲಾಲ ನೆಹರು, ಇಂದಿರಾಗಾಂಧಿ, ರಾಜೀವ್ಗಾಂಧಿ ಜಾತಿಗಣತಿ ವಿರೋಧಿಸಿದ್ದರು. ಕಾಂಗ್ರೆಸ್ಸಿನದ್ದು ಜಾತಿ ವ್ಯವಸ್ಥೆಯ ಲಾಭಕ್ಕಾಗಿ ಉಪಜಾತಿಗಳ ಸಮೀೆ ನೆಪದಲ್ಲಿ ಹಿಂದುಗಳ ಮಧ್ಯೆ ಒಡಕುಂಟು ಮಾಡುವ, ತುಷ್ಟೀಕರಣದ ಕುತಂತ್ರ ರಾಜಕೀಯ ನೀತಿ ಎಂದು ಜರಿದರು.
ವಿ.ಪಿ.ಸಿಂಗ್ ಪ್ರಧಾನಿಯಾಗಿದ್ದಾಗ ಮಂಡಲ್ ಆಯೋಗ ಅಸ್ತಿತ್ವಕ್ಕೆ ಬಂದು ಹಿಂದುಳಿದವರಿಗೆ ನ್ಯಾಯ ಕೊಡಿಸುವ ಕೆಲಸವಾಗಿತ್ತು. ಸಿಂಗ್ ಅವರ ನಂತರ ಮೋದಿ ಅವಧಿಯಲ್ಲಿ ಕಾನೂನುಬದ್ದ ಗೌರವ ಸಿಕ್ಕಿದೆ ಎಂದರು.
ಮಂಡಲ ಅಧ್ಯ ಜಗದೀಶ ಪಂಪಣ್ಣವರ್, ಕಾರ್ಯದರ್ಶಿ ಸಂಜು ಬಾಗೇವಾಡಿ, ಮುಖಂಡರಾದ ಮುನ್ನಾಧಣಿ ನಾಡಗೌಡ, ಎಂ.ಆರ್.ನಾಡಗೌಡ, ಕೆಂಚಪ್ಪ ಬಿರಾದಾರ, ಪ್ರಭು ಕಡಿ, ಸೋಮನಗೌಡ ಬಿರಾದಾರ, ಎಂ.ಆರ್.ಪಾಟೀಲ ವಕೀಲರು, ಹರೀಶ ನಾಟೀಕಾರ, ಶಂಕರಗೌಡ ಶಿವಣಗಿ, ರಾಜಶೇಖರ ಹೊಳಿ, ಶೇಖರ ಢವಳಗಿ, ಅಶೋಕ ರಾಠೋಡ ಇತರರು ಇದ್ದರು.