

ಢವಳಗಿ: ಮುದ್ದೇಬಿಹಾಳ ತಾಲೂಕಿನ ಬಸರಕೋಡದ ಪವಾಡ ಬಸವೇಶ್ವರರ ರಥೋತ್ಸವ ಸೋಮವಾರ ಸಂಜೆ ಅಪ್ಟಾ ಭಕ್ತರ ಸಮ್ಮುಖದಲ್ಲಿ ನೆರವೇರಿತು.
ರೂಡಗಿ ಗ್ರಾಮದ ದೈವ ಮಂಡಳಿಯಿಂದ ತೇರಿನ ಮಿಣಿ(ಹಗ್ಗ)ದ ಮೆರವಣಿ ಮೂಲಕ ಮೂರಲಿಂಗನ ದೇವಸ್ಥಾನದಿಂದ ಕಳಸದೊಂದಿಗೆ ಪವಾಡ ಬಸವೇಶ್ವರರ ದೇವಸ್ಥಾನಕ್ಕೆ ಬರಮಾಡಿಕೊಳ್ಳಲಾಯಿತು.
ಶ್ರೀಪರುತಯ್ಯ ಸ್ವಾಮಿಗಳು ಮತ್ತು ಕಮಿಟಿ ಅಧ್ಯ ಕೆ.ವೈ. ಬಿರಾದಾರ ಮತ್ತು ಎಂ.ಆರ್. ನಾಡಗೌಡರ, ಎಸ್.ಬಿ. ನಾಡಗೌಡರ ಸೇರಿದಂತೆ ಪ್ರಮುಖರು ರಥೋತ್ಸವಕ್ಕೆ ಚಾಲನೆ ನೀಡಿದರು. ಮುದ್ದೇಬಿಹಾಳ ಶಾಸಕ ಸಿ.ಎಸ್. ನಾಡಗೌಡ ಅಪ್ಪಾಜಿ ಪವಾಡ ಬಸವೇಶ್ವರರ ದರ್ಶನ ಪಡೆದರು. ಜಾತ್ರಾ ಸಮಿತಿ ಅಧ್ಯ ಕರನಂದೆಪ್ಪ ಬಿರಾದಾರ, ಬಿ.ಬಿ.ಸಜ್ಜನ, ಎಸ್.ಬಿ ಮೇಟಿ, ಎಸ್.ವೈ. ಸೂಳಿಬಾವಿ, ಎಸ್.ಎಸ್. ಹಂಡರಗಲ್ಲ, ಬಿ.ಎಸ್. ಬೈಲಗೊಂಡ, ಬಿ.ಜಿ. ರೂಡಗಿ ಹಾಗೂ ಭಕ್ತರು ಪಾಲ್ಗೊಂಡಿದ್ದರು.