ವಸಂತ ಧಾರ್ಮಿಕ ಶಿಬಿರಕ್ಕೆ ಚಾಲನೆ

Spring religious camp kicks off
ವಿಜಯಪುರದ ಕೃಷ್ಣ ವಾದಿರಾಜ ಮಠದಲ್ಲಿ ವಸಂತ ಧಾರ್ಮಿಕ ಶಿಬಿರಕ್ಕೆ ಮಂಗಳವಾರ ಚಾಲನೆ ನೀಡಲಾಯಿತು. ಮಠದ ಕಾರ್ಯದರ್ಶಿ ಪ್ರಕಾಶ ಅಕ್ಕಲಕೋಟ, ಪಂ.ಶ್ರೀನಿಧಿಆಚಾರ್ಯ, ವಿಕಾಸ ಪದಕಿ, ಪಂ.ವಾಸುದೇವಾಚಾರ್ಯ ಅಗ್ನಿಹೋತ್ರಿ ಇದ್ದರು.
Published on

ವಿಜಯಪುರ: ಅಖಿಲ ಭಾರತ ಮಧ್ವ ಮಹಮಂಡಲ ಹಾಗೂ ಶ್ರೀಕೃಷ್ಣ್ಣ ವಾದಿರಾಜ ಮಠದ ಸಯೋಗದಲ್ಲಿ ಹಮ್ಮಿಕೊಂಡಿರುವ ವಸಂತ ಧಾರ್ಮಿಕ ಶಿಣ ಶಿಬಿರಕ್ಕೆ ಮಂಗಳವಾರ ಚಾಲನೆ ನೀಡಲಾಯಿತು.

ಕೃಷ್ಣ ವಾದಿರಾಜ ಮಠದ ಕಾರ್ಯದರ್ಶಿ ಪ್ರಕಾಶ ಅಕ್ಕಲಕೋಟ ಮಾತನಾಡಿ, ಪೇಜಾವರ ಮಠದ ಶ್ರೀ ವಿಶ್ವ ಪ್ರಸನ್ನ ತೀರ್ಥರ ಸಂಕಲ್ಪದಂತೆ ಮಕ್ಕಳಲ್ಲಿ ಧಾರ್ಮಿಕ ಪ್ರಜ್ಞೆ ಮೂಡಿಸುವುದು ಹಾಗೂ ಉತ್ತಮ ಸಂಸ್ಕಾರ ನೀಡುವ ಉದ್ದೇಶದಿಂದ ಈ ಶಿಬಿರವನ್ನು ಆಯೋಜಿಸಲಾಗಿದ್ದು, ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದರು.

ಪಂ. ಶ್ರೀನಿಧಿ ಆಚಾರ್ಯರು ಅಧ್ಯಕ್ಷತೆ ವಹಿಸಿದ್ದರು. ಖಜಾಂಚಿ ಅಶೋಕರಾವ, ಸದಸ್ಯ ವಿಕಾಸ ಪದಕಿ, ವ್ಯವಸ್ಥಾಪಕ ಪಂ.ವಾಸುದೇವಾಚಾರ್ಯ ಅಗ್ನಿಹೋತ್ರಿ, ಅರ್ಚಕ ಸಮೀರಾಚಾರ್ಯ ಪಾಟೀಲ ಉಪಸ್ಥಿತರಿದ್ದರು. ಅನಿತಾ ಪದಕಿ ತಂಡದವರು ಪ್ರಾರ್ಥಿಸಿದರು.

28ರ ವರೆಗೆ ಈ ಶಿಬಿರದ ನಡೆಯಲಿದ್ದು, ಬೆಳಗ್ಗೆ 10ರಿಂದ ಮಧ್ಯಾಹ್ನ 12ರ ವರೆಗೆ ಹಾಗೂ ಮಧ್ಯಾಹ್ನ 2ರಿಂದ 4.30ರ ವರೆಗೆ ಸಂಧ್ಯಾವಂಧನೆ, ನಿತ್ಯ ಪಠಣ ಸ್ಥೋತ್ರಗಳು, ಹರಿಕಥಾಮೃತಸಾರ ಸೇರಿ ವಿವಿಧ ಚಟುವಟಿಕೆಗಳು ನಡೆಯಲಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net