ಕಾಂಗ್ರೆಸ್​ ಮಹಿಳಾ ಟಕದ ಪ್ರಧಾನ ಕಾರ್ಯದರ್ಶಿ ಪ್ರತಿಭಾ ರಾಜಿನಾಮೆ

Congress Women's Wing General Secretary Pratibha resigns
ಮುದ್ದೇಬಿಹಾಳದಲ್ಲಿ ಪ್ರತಿಭಾ ಅಂಗಡಗೇರಿ ಅವರು ಶಾಸಕ ಸಿ.ಎಸ್​.ನಾಡಗೌಡರಿಗೆ ರಾಜೀನಾಮೆಪತ್ರ ಸಲ್ಲಿಸಿದರು. ಮಹಿಬೂಬ ಗೊಳಸಂಗಿ ಇದ್ದರು.
Published on

ಮುದ್ದೇಬಿಹಾಳ: ತಾಲೂಕು ಕಾಂಗ್ರೆಸ್​ ಮಹಿಳಾ ಟಕದ ಪ್ರಧಾನ ಕಾರ್ಯದರ್ಶಿ ಪ್ರತಿಭಾ ರುದ್ರಗೌಡ ಅಂಗಡಗೇರಿ ಅವರು ಕಾಂಗ್ರೆಸ್​ ಪದ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ.

ಬುಧವಾರ ಬೆಳಗ್ಗೆ ಹುಡ್ಕೋದ ಹಸಿರು ತೋರಣ ಗಾರ್ಡನ್​ನಲ್ಲಿ ಪುರಸಭೆ ವತಿಯಿಂದ ಏರ್ಪಡಿಸಿದ್ದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಶಾಸಕ ಸಿ.ಎಸ್​.ನಾಡಗೌಡರ ಬಳಿ ತೆರಳಿ ರಾಜೀನಾಮೆ ಪತ್ರ ಸಲ್ಲಿಸಿದರು.

ಪುರಸಭೆ ಮುಖ್ಯಾಧಿಕಾರಿ, ಸಿಬ್ಬಂದಿ ಯಾವುದೇ ಕೆಲಸ ಕಾರ್ಯಗಳನ್ನು ಸರಿಯಾಗಿ ನಿರ್ವಹಿಸುತ್ತಿಲ್ಲ. ನಿಖರವಾದ ಮಾಹಿತಿ ಕೊಡುತ್ತಿಲ್ಲ. ಈ ಕುರಿತು ಹಲವು ಬಾರಿ ನಿಮ್ಮ (ಶಾಸಕರ) ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ಇದರಿಂದ ನೊಂದು ಸ್ವ ಇಚ್ಚೆಯಿಂದ ಪದ ಸದಸ್ಯತ್ವಕ್ಕೆ ರಾಜೀನಾಮೆ ನೀಡುತ್ತಿರುವುದಾಗಿ ಪತ್ರದಲ್ಲಿ ತಿಳಿಸಿದ್ದಾರೆ.

ಪುರಸಭೆ ಅಧ್ಯ ಮಹಿಬೂಬ ಗೊಳಸಂಗಿ, ಸ್ಥಾಯಿ ಸಮಿತಿ ಅಧ್ಯ ಯಲ್ಲಪ್ಪ ನಾಯ್ಕಮಕ್ಕಳ, ಉಪಾಧ್ಯೆ ಪ್ರೀತಿ ದೇಗಿನಾಳ, ಕಾಂಗ್ರೆಸ್​ನ ಪುರಸಭೆ ಸದಸ್ಯರು, ಹಸಿರು ತೋರಣ ಬಳಗದ ಪದಾಧಿಕಾರಿಗಳು, ಸದಸ್ಯರು, ಸಾರ್ವಜನಿಕರು ಇದ್ದರು.

5 ವರ್ಷಗಳ ಹಿಂದೆ ಪುರಸಭೆಗೆ ಚುನಾವಣೆ ನಡೆದಾಗ ಜೆಡಿಎಸ್​ ಪದಿಂದ ಆಯ್ಕೆಯಾಗಿದ್ದ ಪ್ರತಿಭಾ ಅವರು ತಮ್ಮ ಹತ್ತಿರದ ಬಂಧುಗಳೂ ಆಗಿರುವ ನಾಡಗೌಡರಿಗೆ ಬೆಂಬಲ ಸೂಚಿಸಿ ಕಾಂಗ್ರೆಸ್​ ಸೇರ್ಪಡೆಗೊಂಡರು. ನಂತರ ಪುರಸಭೆಯ ಮೊದಲ ಅವಧಿಗೆ ಅಧ್ಯರಾಗಿ ಆಯ್ಕೆಯಾಗಿ ಕಾರ್ಯನಿರ್ವಹಿಸಿದ್ದರು. ನಾಡಗೌಡರ ಆಪ್ತ ಬಳಗದಲ್ಲಿದ್ದ ಪ್ರತಿಭಾ ಅವರ ರಾಜೀನಾಮೆ ಪದ ಆಂತರಿಕ ವಲಯದಲ್ಲಿ ಸಂಚಲನ ಮೂಡಿಸಿದ್ದು, ಸಾಕಷ್ಟು ಚರ್ಚೆಗೆ ಅವಕಾಶ ಮಾಡಿಕೊಟ್ಟಿದೆ. ಶಾಸಕರಿಗೆ ಪತ್ರ ಸಲ್ಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಹಿಂದೆಯೂ ರಾಜೀನಾಮೆ ಪ್ರಸ್ತಾಪ ಇಡಲಾಗಿತ್ತು.

ಪುರಸಭೆಯಲ್ಲಿ ವ್ಯವಸ್ಥೆ ಸರಿ ಹೋಗುವ ನಿರೀೆ ಇತ್ತು. ಆದರೆ ಸಮಸ್ಯೆಯನ್ನು ಬಗೆಹರಿಸಲು ಗಂಭೀರವಾಗಿ ಪ್ರಯತ್ನಿಸದಿರುವುದರಿಂದ ನೊಂದು ರಾಜೀನಾಮೆ ನೀಡಿದ್ದೇನೆ. ಪದ ಬ್ಲಾಕ್​ ಅಧ್ಯರು ಸೇರಿ ಸಂಬಂಧಿಸಿದವರೆಲ್ಲರಿಗೂ ರಾಜೀನಾಮೆ ಪತ್ರ ಕಳಿಸುತ್ತೇನೆ. ಪದ ಎಲ್ಲ ಚಟುವಟಿಕೆಗಳಿಂದ ತಟಸ್ಥಳಾಗಿ ಉಳಿಯುತ್ತೇನೆ ಎಂದು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net