ಸಮಸ್ಯೆಗೆ ಪರಿಹಾರಕಂಡುಕೊಳ್ಳಬೇಕು

The problem needs to be solved.
ರಾಷ್ಟ್ರೀಯ ಸುರತಾ ಸಪ್ತಾಹ ಅಂಗವಾಗಿ ತಾಳಿಕೋಟೆಯ ಎಸ್​.ಕೆ. ಕಾಲೇಜಿನಲ್ಲಿ ಅಗ್ನಿ ಶಾಮಕದಳದ ಸಿಬ್ಬಂದಿ ಕಲ್ಪಿತ ಪ್ರದರ್ಶನ ನೀಡಿದರು.
Published on

ತಾಳಿಕೋಟೆ: ಸಮಸ್ಯೆಉದ್ಭವಿಸಿದಾಗ ಭಯಪಡಬಾರದು, ಪರಿಹಾರ ಹುಡುಕಬೇಕೆಂದು ಅಗ್ನಿಶಾಮಕ ದಳದ ಅಧಿಕಾರಿ ಅ-ಧಿಕಾರಿ ಪ್ರಭು ಸಣ್ಣಕ್ಕಿ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ಪಟ್ಟಣದ ಎಸ್​.ಕೆ. ಕಲಾ, ವಾಣಿಜ್ಯ ಹಾಗೂ ವಿಜ್ಞಾನ ಮಹಾವಿದ್ಯಾಲಯದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ರಾಷ್ಟ್ರೀಯ ಸುರತಾ ಸಪ್ತಾಹ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ತುರ್ತು ಬೆಂಕಿ ತಗುಲಿದಾಗ ಭಯಪಡದೇ ಬೆಂಕಿ ನಂದಿಸುವ ಕುರಿತು ಪರಿಹಾರ ಹುಡುಕಬೇಕು. ಧೈರ್ಯದಿಂದ ಮುನ್ನುಗ್ಗಿದಾಗ ಸಮಸ್ಯೆಗೆ ಪರಿಹಾರ ಸಿಗಲು ಸಾಧ್ಯ ಎಂದರು.

ಅಧ್ಯತೆ ವಹಿಸಿದ್ದ ಪ್ರಾಚಾರ್ಯ ಡಾ.ಡಿ.ಬಿ. ಮೂಗಡ್ಲಿಮಠ ಮಾತನಾಡಿದರು.

ಅಗ್ನಿಶಾಮಕ ದಳದ ಸಿಬ್ಬಂದಿ ಹುಸೇನಸಾಬ ಬುರಾನಗೋಳ, ವಿರೇಶ ಹಂಡಗಲ್ಲ, ಮಲ್ಲಿಕಾರ್ಜುನ ಪಾಟೀಲ, ಶಂಕರಗೌಡ ನರಸಲಗಿ, ಶರಣು ಹೂಗಾರ, ಪ್ರಾಧ್ಯಾಪಕ ಡಾ. ದೀಪಾ ಮಾಳಗೆ, ಡಾ. ಅನಿಲಕುಮಾರ ಆಲಾಳಮಠ, ರಮೇಶ ಜಾಧವ, ಸ್ನೇಹಾ ನಾವದಗಿ, ಈರಮ್ಮ ಲಕ್ಕಪ್ಪಗೋಳ, ಕೆ.ಬಿ. ದೇಸಾಯಿ ಉಪಸ್ಥಿತರಿದ್ದರು.

ಡಾ. ಅಜಯ ಅಬ್ಬಾರ ಸ್ವಾಗತಿಸಿದರು. ಡಾ. ಅಶೋಕ ರಾಠೋಡ ವಂದಿಸಿದರು. ಡಾ.ಆರ್​.ವಿ. ಮಿಸ್ಕಿನ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net