13ರಂದು ವಿಜಯಪುರಕ್ಕೆ ಶಂಕರ ಮಠದ ಶ್ರೀಗಳು

The monks of Shankara Math will visit Vijayapura on the 13th.
ಶ್ರೀ ವಿಧುಶೇಖರ ಭಾರತಿ ಸ್ವಾಮೀಜಿ
Published on

ವಿಜಯಪುರ: ಶ್ರೀ ಜಗದ್ಗುರು ಶಂಕರಾಚಾರ್ಯ ಮಹಾ ಸಂಸ್ಥಾನ ಶಾರದಾ ಶೃಂಗೇರಿ ಪೀಠದ ಶ್ರೀ ವಿಧುಶೇಖರ ಭಾರತಿ ಸ್ವಾಮೀಜಿ ಮಾ.13ರಂದು ನಗರಕ್ಕೆ ಆಗಮಿಸಲಿದ್ದಾರೆ.

ನಗರದಲ್ಲಿನ ಶಂಕರ ಮಠದ ಹನ್ನೊಂದನೆ ವಾರ್ಷಿಕೋತ್ಸವ ನಿಮಿತ್ತ ಶ್ರೀಗಳ ಮಾರ್ಗದರ್ಶನದಲ್ಲಿ ಮಾ.7ರಿಂದ 15ರ ವರಿಗೆ ವಿವಿಧ ಧಾರ್ಮಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

7ರಂದು ಸಂಜೆ 6ಕ್ಕೆ ನಾದಬ್ರಹ್ಮ ಸಂಗೀತ ಕಾರ್ಯಕ್ರಮ. 8ರಂದು ಸಂಜೆ 6ಕ್ಕೆ ಕಲಬುರಗಿ ಗಂಗೋತ್ರಿ ವೇದ ಪಾಠ ಶಾಲೆಯ ಯೋಗೇಶ ಭಟ್ಟ ಜೋಶಿ ಅವರಿಂದ ಉಪನ್ಯಾಸ, 9ರಂದು ಬೆಳಗ್ಗೆ ಗುರುಚರಿತ್ರೆ ಸಪ್ತಾಹ ಪಾರಾಯಣ, ಸಂಜೆ 6ಕ್ಕೆ ಸ್ತೋತ್ರ ತ್ರಿವೇಣಿ ಸಮರ್ಪಣೆ, ಹೊಸಪೇಟೆಯ ಶ್ರೀ ಶಿವಾನಂದ ಭಾರತಿ ಚಿಂತಾಮಣಿ ಸ್ವಾಮೀಜಿ ಪ್ರವಚನ ನೀಡುವರು. 10ರಿಂದ 12ರ ವರಿಗೆೆ ಪ್ರತಿ ದಿನ ಸಂಜೆ 6ಕ್ಕೆ ಶಿರಳಗಿ ರಾಜಾರಾಮಾಶ್ರಮದ ಶ್ರೀ ಬ್ರಹ್ಮಾನಂದ ಭಾರತಿ ಸ್ವಾಮಿಗಳಿಂದ ಪ್ರವಚನ ನಡೆಯಲಿದೆ.

11ರಂದು ಬೆಳಗ್ಗೆ 7ಕ್ಕೆ ಗಣಹೋಮ, ಚತುರ್ವೇದ ಹಾಗೂ ಸುಂದರಕಾಂಡ ಪಾರಾಯಣ, 12ರಂದು ಬೆಳಗ್ಗೆ 7ಕ್ಕೆ ಪವಮಾನ ಹೋಮ ಹಮ್ಮಿಕೊಳ್ಳಲಾಗಿದೆ.

13ರಂದು ಬೆಳಗ್ಗೆ 7ಕ್ಕೆ ರುದ್ರಹೋಮ, ಸಂಜೆ 5.30ಕ್ಕೆ ಶ್ರೀ ವಿಧುಶೇಖರ ಭಾರತಿ ಸ್ವಾಮಿಗಳ ಪುರಪ್ರವೇಶ, ನಂತರ ರಜತಗಿರಿ ಹನುಮಾನ ಮಂದಿರದಿಂದ ಶಂಕರ ಮಠದವರಿಗೆ ಶ್ರೀಗಳ ಶೋಭಾಯಾತ್ರೆ ನಡೆಯಲಿದೆ. ರಾತ್ರಿ 7ಕ್ಕೆ ಶ್ರೀಗಳ ಧೂಳಿ ಪಾದಪೂಜೆ, ಗೌರವ ಸಮರ್ಪಣೆ, ನಂತರ ಶ್ರೀಗಳಿಂದ ಆಶೀರ್ವಚನ. ಶಾರದಾ ಚಂದ್ರಮೌಳೀಶ್ವರ ಪೂಜೆ, ಭಕ್ತರಿಗೆ ಪ್ರಸಾದ ವಿತರಣೆ ನಡೆಯಲಿದೆ.

14ರಂದು ಬೆಳಗ್ಗೆ 8.30ಕ್ಕೆ ಸೌರ ಹೋಮ, ಸಂಜೆ 5.30ಕ್ಕೆ ಚೇತನ ಚಕ್ರವರ್ತಿ ಹಾಗೂ ಸಂಗಡಿಗರಿಂದ ಸಂಗೀತ ಕಾರ್ಯಕ್ರಮ. ರಾತ್ರಿ 8.30ಕ್ಕೆ ಶ್ರೀಗಳಿಂದ ಶಾದರಾ ಚಂದ್ರಮೌಳೀಶ್ವರ ಪೂಜೆ ನಂತರ ಪ್ರಸಾದ ವಿತರೆಣೆ ಜರಗುವುದು.

15ರಂದು ಬೆಳಗ್ಗೆ 8.30ಕ್ಕೆ ಚಂಡಿ ಹೋಮ ನಂತರ ಶ್ರೀಗಳಿಂದ ಶ್ರೀ ಗಣೇಶ, ಶಾರದಾ ಚಂದ್ರಮೌಳೀಶ್ವರ ಮೂರ್ತಿಗೆ ಮಹಾಭಿಷೇಕ ನಂತರ ಹೋಮ ಪೂರ್ಣಾಹುತಿ, ದತ್ತಪಾದುಕಾ ಪ್ರತಿಷ್ಠಾಪನೆ, ಸುವರ್ಣಭಾರತಿ ಭವನದ ಶಿಲನ್ಯಾಸ ಕಾರ್ಯಕ್ರಮ, ಬೆಳಗ್ಗೆ 10.30ಕ್ಕೆ ಶ್ರೀಗಳಿಂದ ಮಂತ್ರಾಕ್ಷತೆ, ಮಧ್ಯಾಹ್ನ 12.30ಕ್ಕೆ ಮಹಾ ಪ್ರಸಾದ, ಸಂಜೆ 5ಕ್ಕೆ ಗುರುವಂದನ ಕಾರ್ಯಕ್ರಮ, ಶ್ರೀಗಳಿಂದ ಅನುಗ್ರಹ ಸಂದೇಶ ಜರುಗಲಿದೆ ಎಂದು ಶಂಕರ ಮಠ ವಿಜಯಪುರ ಶಾಖೆ ಅಧ್ಯಕ್ಷರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net