ನಾಯಕತ್ವ ಗುಣಕ್ಕೆ ನಲಿಕಲಿ ಪ್ರೇರಕ ಶಕ್ತಿ

The driving force behind leadership qualities is Nalikali.
ಗೊಳಸಂಗಿಯ ಸರ್ಕಾರಿ ಕನ್ನಡ ಗಂಡು ಮಕ್ಕಳ ಮಾದರಿ ಪ್ರಾಥಮಿಕ ಶಾಲೆಯ ವಾರ್ಷಿಕೋತ್ಸವವನ್ನು ಗಣ್ಯರು ಉದ್ಘಾಟಿಸಿದರು. ಶಿಕ ಎಚ್​.ಡಿ.ನದ್​ಾ, ಶೇಖರ ದಳವಾಯಿ, ದಯಾನಂದ ಹೆಬ್ಬಾಳ, ಕುಮಾರಗೌಡ ಪಾಟೀಲ ಇದ್ದರು.
Published on

ಗೊಳಸಂಗಿ: ನಾಯಕತ್ವಕ್ಕೆ ಬೇಕಾಗುವ ಗುಣ ಲಣಗಳು ಪ್ರಾಥಮಿಕ ಶಾಲೆಯಲ್ಲಿ ಮಕ್ಕಳಿಗೆ ನಲಿಕಲಿಯಿಂದ ಸಿಗುತ್ತದೆ ಎಂದು ಶಿಕ ಎಚ್​.ಡಿ.ನದ್​ಾ ಹೇಳಿದರು.

ಸರ್ಕಾರಿ ಕನ್ನಡ ಗಂಡು ಮಕ್ಕಳ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಿದ್ದ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭದಲ್ಲಿ ಪ್ರಾಸ್ತಾವಿಕ ಮಾತನಾಡಿದರು.

ಮಕ್ಕಳು ಪ್ರಾಥಮಿಕ ಹಂತದ 1 ರಿಂದ 4 ನೇ ತರಗತಿಯಲ್ಲಿರುವಾಗ ನಲಿಯುತ್ತ ಕಲಿತು, 5 ರಿಂದ 7 ನೇ ತರಗತಿವರೆಗೆ ಕಲಿಯುತ್ತ ನಲಿಯುವುದನ್ನು ಶಿಣ ತರು ಕಂಡುಕೊಂಡ ಹೊಸ ಅನುಭವ. ಬಾಲ್ಯದಲ್ಲಿ ಮಕ್ಕಳು ಆಟವಾಡುತ್ತ ಪಾಠ ಕಲಿಯಬೇಕು. ಇದರಿಂದ ಅರ ಮಕ್ಕಳ ಅಂತರಾಳವನ್ನು ಮುಟ್ಟುವುದು ನಿಶ್ಚಿತ ಎಂದರು.

ಎಸ್​ಡಿಎಂಸಿ ಅಧ್ಯ ಗೋಪಾಲ ದಳವಾಯಿ ಅಧ್ಯತೆ ವಹಿಸಿದ್ದರು. ಡಿಸಿಸಿ ಬ್ಯಾಂಕ್​ ನಿರ್ದೇಶಕ ಶೇಖರ ದಳವಾಯಿ, ಎಸ್​ಡಿಎಂಸಿ ಮಾಜಿ ಸದಸ್ಯ ಡಾ.ಎಂ.ಎಸ್​.ಮೇಟಿ, ಪಿಎಲ್​ಡಿ ಬ್ಯಾಂಕ್​ ನಿರ್ದೇಶಕ ದಯಾನಂದ ಹೆಬ್ಬಾಳ, ಪಿಕೆಪಿಎಸ್​ ಉಪಾಧ್ಯ ಸುದೇಶ ದಳವಾಯಿ, ಪ್ರಮುಖರಾದ ಕುಮಾರಗೌಡ ಪಾಟೀಲ, ಬಿ.ಎಸ್​.ಮೇಟಿ, ಜಗದೀಶ ಹಟ್ಟಿ, ಸಂಗಮೇಶ ಗುಳೇದಗುಡ್ಡ, ಸುರೇಶ ಕನಮುಚನಾಳ, ಸದಾಶಿವ ಚಿಮ್ಮಲಗಿ, ಪೂರ್ಣಿಮಾ ಕಂಬಳಶೆಟ್ಟಿ, ನೀಲಮ್ಮ ಹೆಳವರ ಪಾಲ್ಗೊಂಡಿದ್ದರು.

ಮುಖ್ಯಗುರು ಬಿ.ಐ.ಚಲ್ಮಿ ಸ್ವಾಗತಿಸಿದರು. ಶಿಕ ಎಂ.ಬಿ.ಬಳಮಕರ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net