ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ

The crown of the lord is not given until he becomes the slave of the master.
ಮುದ್ದೇಬಿಹಾಳದಲ್ಲಿ ಶರಣ ಸಾಹಿತ್ಯ ಪರಿಷತ್​ನಿಂದ ನಡೆದ ದತ್ತಿ ಕಾರ್ಯಕ್ರಮದಲ್ಲಿ ಸಾಧಕ ವಿದ್ಯಾರ್ಥಿಗಳಾದ ಮಿಸ್ಬಾ ಬಾಗಲಕೋಟ, ಸ್ವಪ್ನಾ ಮುರಾಳರನ್ನು ಸತ್ಕರಿಸಲಾಯಿತು.
Published on

ಮುದ್ದೇಬಿಹಾಳ: ಪ್ರತಿಯೊಬ್ಬ ಸಾಧಕನಿಗೆ ಒಬ್ಬ ಗುರು ಮಾರ್ಗದರ್ಶಕನಾಗಿರುತ್ತಾನೆ. ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ ಎಂಬ ದಾಸರ ಅನುಭವದ ನುಡಿಗಳನ್ನು ಎಲ್ಲರೂ ಅರ್ಥೈಸಿಕೊಂಡು ಮುನ್ನಡೆಯಬೇಕೆಂದು ನಿವೃತ್ತ ಮುಖ್ಯಾಧ್ಯಾಪಕ ವಿಠ್ಠಲ ಗಡ್ಡಿ ಹೇಳಿದರು.

ಇಲ್ಲಿನ ಹೇಮರಡ್ಡಿ ಮಲ್ಲಮ್ಮ ಮಂಗಲ ಕಾರ್ಯಾಲಯದಲ್ಲಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್​ನ ತಾಲೂಕು ಟಕ, ಮೊರಾರ್ಜಿ ದೇಸಾಯಿ ಅಲ್ಪಸಂಖ್ಯಾತರ ವಸತಿ ಶಾಲೆ&ನಂ 2 ಆಶ್ರಯದಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ಲಿಂ.ಸಾಯಿಬಾಬಾಗೌಡ ಗಂಗನಗೌಡ ಪಾಟೀಲ ಸ್ಮರಣಾರ್ಥ ದತ್ತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಜನಪದ ಸಾಹಿತ್ಯವು ಜನರ ಬದುಕಿನ ಸಾಹಿತ್ಯವಾಗಿದ್ದು, ಆದರ್ಶ ತತ್ವಗಳನ್ನು ಪ್ರತಿಪಾದಿಸುತ್ತದೆ ಎಂದರು.

ಶಸಾಪ ಅಧ್ಯ ಬಸವರಾಜ ನಾಲತವಾಡ ಅಧ್ಯತೆ ವಹಿಸಿ ಶೃಂಗಾರಗೌಡ ಜೀವನ, ಸಾಧನೆ ಕುರಿತು ಮಾತನಾಡಿ, ಅವರು ತಮ್ಮನ್ನು ಸಮಾಜಕ್ಕೆ ಅರ್ಪಿಸಿಕೊಂಡ ಮುದ್ದೇಬಿಹಾಳದ ಸಾಂಸತಿಕ ರಾಯಭಾರಿಯಾಗಿದ್ದರು ಎಂದರು.

ತಾಲೂಕು ಗುತ್ತಿಗೆದಾರರ ಸಂದ ಅಧ್ಯ ಸುರೇಶಗೌಡ ಪಾಟೀಲ ಇಂಗಳಗೇರಿ ಉದ್ಘಾಟಿಸಿದರು. ವಸತಿ ಶಾಲೆಯ ಸಾಧಕ ವಿದ್ಯಾರ್ಥಿಗಳಾದ ಮಿಸ್ಬಾ ಬಾಗಲಕೋಟ, ಸಪ್ನಾ ಮುರಾಳ ಹಾಗೂ ದತ್ತಿ ದಾನಿ ಶಾಂತಾ ಪಾಟೀಲ, ಗೌರಿಶಂಕರ ಪುರಾಣಿಕಮಠ ಅವರನ್ನು ಸನ್ಮಾನಿಸಲಾಯಿತು.

ಸಿ.ಜಿ. ನಾಗರಾಳ, ದಿ ಕರ್ನಾಟಕ ಕೋ ಆಪ್​ ಬ್ಯಾಂಕ್​ ನಿರ್ದೇಶಕ ಸತೀಶಕುಮಾರ ಓಸ್ವಾಲ್​, ಜಾನಪದ ಮತ್ತು ಸಾಂಸತಿಕ ಪರಿಷತ್​ನ ಜಿಲ್ಲಾಧ್ಯ ಅಬ್ದುಲ್​ರಹೆಮಾನ ಬಿದರಕುಂದಿ, ಕನ್ನಡ ಜಾನಪದ ಪರಿಷತ್​ನ ತಾಲೂಕು ಅಧ್ಯ ಎ.ಆರ್​. ಮುಲ್ಲಾ, ವಸತಿ ಶಾಲೆಯ ಪ್ರಾಂಶುಪಾಲ ಖೇಮು ರಾಠೋಡ, ಪ್ರಭು ಕಡಿ, ಬಸನಗೌಡ ಪಾಟೀಲ, ಬಾಪುಗೌಡ ಪಾಟೀಲ ಆಲೂರ, ಪಂಡಿತ ಪಂಚಾರಿ ಗವಾಯಿಗಳ ಸಂಗೀತ ಶಾಲೆಯ ಪ್ರಾಂಶುಪಾಲ ಸಂಗಮೇಶ ಶಿವಣಗಿ, ಮಹಾಲಿಂಗಪ್ಪ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net