ಶಂಕರರು ಹಿಂದು ಧರ್ಮದ ಪುನರುತ್ಥಾರಕರು

Shankara is the reviver of Hinduism.
ವಿಜಯಪುರದ ಶಂಕರ ಮಠದಲ್ಲಿ ಶಂಕರಾಚಾರ್ಯ ಮಹಾ ಸಂಸ್ಥಾನ ಶಾರದಾ ಶೃಂಗೇರಿ ಪೀಠದ ಶ್ರೀ ವಿಧುಶೇಖರಭಾರತಿ ಸ್ವಾಮೀಜಿ ಭಕ್ತರಿಗೆ ಮಂತ್ರಾಕ್ಷತೆ ನೀಡಿ ಆಶೀರ್ವದಿಸಿದರು.
Published on

ವಿಜಯಪುರ: ಅನ್ಯಧರ್ಮಿಗಳ ದಬ್ಬಾಳಿಕೆಯಿಂದ ಭಾರತದಲ್ಲಿ ಹಿಂದು ಧರ್ಮ ನಲುಗಿಹೋಗಿದ್ದ ಸಂದರ್ಭದಲ್ಲಿ ಶ್ರೀ ಶಂಕರಾಚಾರ್ಯರು ಅವತರಿಸಿ ಧರ್ಮವನ್ನು ರಸಿದ್ದಾರೆ ಎಂದು ಶ್ರೀ ಜಗದ್ಗುರು ಶಂಕರಾಚಾರ್ಯ ಮಹಾ ಸಂಸ್ಥಾನ ಶಾರದಾ ಶೃಂಗೇರಿ ಪೀಠದ ಶ್ರೀ ವಿಧುಶೇಖರಭಾರತಿ ಸ್ವಾಮೀಜಿ ಅಭಿಮತ ವ್ಯಕ್ತಪಡಿಸಿದರು.

ನಗರದಲ್ಲಿನ ಶಂಕರ ಮಠದ ಹನ್ನೊಂದನೇ ವಾರ್ಷಿಕೋತ್ಸವ ನಿಮಿತ್ತ ಸುವರ್ಣ ಭವನಕ್ಕೆ ಶನಿವಾರ ಶಿಲನ್ಯಾಸ ನೆರವೇರಿಸಿ ಆಶೀರ್ವಚನ ನೀಡಿದ ಶ್ರೀಗಳು, ಶಂಕರಾಚಾರ್ಯರು ಭರತಖಂಡದಲ್ಲಿ ಪರ್ಯಟನ ಮಾಡಿ ದೇಶದ ನಾಲ್ಕು ದಿಕ್ಕುಗಳಲ್ಲಿ ಶಕ್ತಿ ಪೀಠಗಳನ್ನು ಸ್ಥಾಪಿಸುವ ಮೂಲಕ ಹಿಂದು ಧರ್ಮವನ್ನು ರಸುವ ಕಾರ್ಯ ಮಾಡಿದ್ದಾರೆ ಎಂದು ಪ್ರತಿಪಾದಿಸಿದರು.

ಯುವಕರು ದುಶ್ಚಟಕ್ಕೆ ಬಲಿಯಾಗಿ ಜೀವನ ಹಾಳು ಮಾಡಿಕೊಳ್ಳಬೇಡಿ, ಸನ್ಮಾರ್ಗದಲ್ಲಿ ಸಾಗಿ ಸತಜೆಗಾಳಗಿ ಭವ್ಯ ಭಾರತದ ಕೀರ್ತಿ ಬೆಳಗಿಸಬೇಕು. ಯುವ ಶಕ್ತಿ ಮನಸ್ಸು ಮಾಡಿದರೆ ಭಾರತವನ್ನು ವಿಶ್ವಗುರುವನ್ನಾಗಿ ಮಾಡಬಹುದು. ದೇಶದ ಆಚಾರ, ವಿಚಾರ, ಸಂಸ್ಕಾರಗಳನ್ನು ಅಳವಡಿಸಿಕೊಂಡು ಉತ್ತಮ ಜೀವನ ಸಾಗಿಸಬೇಕು ಎಂದು ಸಲಹೆ ನೀಡಿದರು.

ಮಾ.14ರಂದು ಬೆಳಗ್ಗೆ ಸೌರ ಹೋಮ, ಚೇತನ ಚಕ್ರವರ್ತಿ ಹಾಗೂ ಸಂಗಡಿಗರಿಂದ ಸಂಗೀತ ಕಾರ್ಯಕ್ರಮ. ಶ್ರೀಗಳಿಂದ ಶಾದರಾ ಚಂದ್ರಮೌಳೀಶ್ವರ ಪೂಜೆ ನಂತರ ಪ್ರಸಾದ ವಿತರೆಣೆ ಜರುಗಿತು.

15ರಂದು ಬೆಳಗ್ಗೆ ಚಂಡಿ ಹೋಮ ನಂತರ ಶ್ರೀಗಳಿಂದ ಶ್ರೀಗಣೇಶ, ಶಾರದಾ ಚಂದ್ರಮೌಳೀಶ್ವರ ಮೂರ್ತಿಗೆ ಮಹಾಭಿಷೇಕ ನಂತರ ಹೋಮ ಪೂರ್ಣಾಹುತಿ, ದತ್ತಪಾದುಕಾ ಪ್ರತಿಷ್ಠಾಪನೆ, ನಂತರ ಶ್ರೀಗಳು ಸುವರ್ಣಭಾರತಿ ಭವನಕ್ಕೆ ಶಿಲನ್ಯಾಸ ನೆರವೇರಿಸಿದರು. ಶ್ರೀಗಳಿಂದ ಮಂತ್ರಾಕ್ಷತೆ, ಮಧ್ಯಾಹ್ನ ಮಹಾ ಪ್ರಸಾದ, ಸಂಜೆ ಗುರುವಂದನ ಕಾರ್ಯಕ್ರಮ ನಡೆಯಿತು. ನಂತರ ಶ್ರೀಗಳು ಅನುಗ್ರಹ ಸಂದೇಶ ನೀಡಿದರು.

ವಿಜಯ ಜೋಶಿ, ಪ್ರಕಾಶ ಅಕ್ಕಲಕೋಟ, ವಿಕಾಸ ಪದಕಿ, ರಾಕೇಶ್​ ಕುಲಕರ್ಣಿ, ಅಪ್ಪಣ್ಣ ಗಾಯಿ, ಪಂ.ಪ್ರಸನ್ನಚಾರ್ಯ ಕಟ್ಟಿ, ಶಂಕರ ಮಠದ ಅಧ್ಯ ಮಹೇಶ ದೇಶಪಾಂಡೆ, ಶ್ರೀಹರಿ ಗೊಳಸಂಗಿ, ಶ್ರೀನಿವಾಸ ಬೆಟಗೇರಿ, ರಂಗಭಟ್ಟ ಜೋಶಿ, ಸೋಮಯಾಜಿ, ಕೃಷ್ಣ ಭಟ್ಟ ಗಲಗಲಿ, ಕಿರಣ ಇನಾಮದಾರ, ಮುಕುಂದ ಕುಲಕರ್ಣಿ, ಗಿರೀಶ ಅಕ್ಕಲಕೋಟ, ಅರುಣ ಸೋಲಾಪುರಕರ, ದತ್ತಾ ಜೋಶಿ, ವಲ್ಲಭ ಮನಗೂಳಿ, ಅಶೋಕ ಕಾರಜೋಳ ಹಾಗೂ ವಿಪ್ರ ಸಮಾಜದ ಪ್ರಮುಖರು, ಮಹಿಳೆಯರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net