ರೇಣುಕಾಚಾರ್ಯ ಜಯಂತಿ

Renukacharya Jayanti
ನಾಲತವಾಡದಲ್ಲಿ ಜಂಗಮ ಸಮುದಾಯದಿಂದ ಆಚರಿಸಿದ ರೇಣುಕಾಚಾರ್ಯ ಜಯಂತಿಯಲ್ಲಿ ಪಾಲ್ಗೊಂಡಿದ್ದ ಭಕ್ತರು.
Published on

ನಾಲತವಾಡ: ಪಟ್ಟಣದಲ್ಲಿ ಜಂಗಮ ಸಮುದಾಯದಿಂದ ಶ್ರೀ ರೇಣುಕಾಚಾರ್ಯರ ಜಯಂತಿ ಆಚರಿಸಲಾಯಿತು.

ಲೊಟಗೇರಿಯ ಗುರುಮೂರ್ತಿ ಕಣಕಾಲಮಠ ಮಾತನಾಡಿ, ಜಗದ್ಗುರು ರೇಣುಕಾಚಾರ್ಯರ ಜೀವನ ಮತ್ತು ತತ್ವ್ವಗಳು ಶಿವಪುರಾಣ, ಬಸವಪುರಾಣ ಮತ್ತು ಇತರ ಶೈವ ಪುರಾಣಗಳಲ್ಲಿ ವಿವರಿಸಲಾಗಿದೆ. ರೇಣುಕಾಚಾರ್ಯರು ಶೈವ ತತ್ವ್ವಶಾಸ್ತ್ರವನ್ನು ಜನಸಾಮಾನ್ಯರಿಗೆ ಪರಿಚಯಿಸಿ, ಅದನ್ನು ಜೀವನದ ಭಾಗವನ್ನಾಗಿ ಮಾಡಿದ ಮಹಾನ್​ ವ್ಯಕ್ತಿ ಎಂದು ತಿಳಿಸಿದರು.

ರೇಣುಕಾಚಾರ್ಯರ ಭಾವಚಿತ್ರ ಉಚಿತ ವಿತರಿಸಿದ ರುದ್ರಯ್ಯ ರೇವಣಕಿಮಠ ಅವರನ್ನು ಸನ್ಮಾನಿಸಲಾಯಿತು.

ಶಿವಪುತ್ರಯ್ಯ ಸ್ಥಾವರಮಠ, ಮಹಾಂತೇಶ ಮೆನೆದಾಳಮಠ, ಮಲ್ಲಯ್ಯ ತಾಳಿಕೋಟಿಮಠ, ಮಲ್ಲಯ್ಯ ಸ್ಥಾವರಮಠ, ವಿಶ್ವೇಶ್ವರಯ್ಯ ಕಣಕಾಲಮಠ, ಮಂಜುನಾಥ ಗಣಾಚಾರಿ, ಮಲ್ಲಯ್ಯ ಹಿರೇಮಠ, ಶಿವಯ್ಯ ವಿರಕ್ತಮಠ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net