

ತಾಳಿಕೋಟೆ: ಪ್ರತಿಯೊಬ್ಬರ ಜೀವನದಲ್ಲಿ ಧರ್ಮವೇ ಬದುಕಾಗಬೇಕು. ಅದರ ತತ್ವಗಳನ್ನು ನಮ್ಮ ಪ್ರತಿಣವೂ ಅಳವಡಿಸಿಕೊಂಡರೆ ಮಾತ್ರ ಧರ್ಮ ರಕ್ಷಣೆ ಸಾಧ್ಯ ಎಂದು ಪ್ರವಚನಕಾರ ಶರಣಸೋಮನಾಳದ ಮಹಾದೇವಯ್ಯ ಶಾಸ್ತ್ರಿ ಹೇಳಿದರು.
ಪಟ್ಟಣದ ಶರಣಮುತ್ಯಾ ಮಠದ ಆವರಣದಲ್ಲಿ ಶನಿವಾರ ಪವಾಡ ಬಸವೇಶ್ವರ ಪುರಾಣ ಹೇಳಿದ ಅವರು, ತೋರಿಕೆಗಾಗಿ ಧರ್ಮ ಆಚರಣೆ ಮಾಡಬಾರದು. ಪ್ರತಿಣವೂ ಧರ್ಮದ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದರು.
ಬಸವಣ್ಣನವರು ಹಾಗೂ ಪವಾಡ ಬಸವೇಶ್ವರರಾಗಲಿ ಸಮಾಜದಲ್ಲಿ ಬದುಕಿ ಒಳ್ಳೆಯ ವಿಚಾರಗಳನ್ನು ಹೇಳಿದ್ದಾರೆ. ಆಸ್ತಿ, ಸಂಪತ್ತನ್ನು ನೋಡಿ ನಾವು ಗೆಳೆತನ ಮಾಡುತ್ತೇವೆ. ಶರಣರು ಹಾಗಲ್ಲ ಎಲ್ಲರನ್ನೂ ಸಮಾನರಾಗಿ ಕಂಡಿದ್ದಾರೆ ಎಂದರು.
ವೃದ್ಧರು, ಮಕ್ಕಳು ಹಾಗೂ ನಿರ್ಗತಿಕರ ಮೇಲೆ ದಯೆ ಇರಬೇಕು. ಯುವಜನತೆ ಇಂದು ಪಾಶ್ಚಾತ್ಯ ಸಂಸತಿಗೆ ಮಾರು ಹೋಗಿ ನಮ್ಮ ಭವ್ಯ ಪರಂಪರೆ ಮರೆಯುತ್ತಿರುವುದು ಕಳವಳಕಾರಿ ಸಂಗತಿ. ವಿದೇಶಿಗರು ನಮ್ಮ ಸಂಸತಿ ಅಳವಡಿಸಿಕೊಂಡು ಜೀವನ ಸಾರ್ಥಕ ಪಡಿಸಿಕೊಳ್ಳುತ್ತಿದ್ದಾರೆ. ಆದರೆ ನಾವು ಹಾಳು ಪದ್ಧತಿ ಅನುಸರಿಸುತ್ತ ಜೀವನ ಹಾಳು ಮಾಡಿಕೊಳ್ಳುತ್ತಿದ್ದೇವೆ ಎಂದರು.
ಶರಣರ ಮಠದ ಬಸಣ್ಣ ಶರಣಮುತ್ಯಾ, ಶರಣಪ್ಪ ಮುತ್ಯಾ, ಸಿದ್ದನಗೌಡ ಪೊಲೀಸ್ಪಾಟೀಲ, ಕಾಶಿಬಾಯಿ ಅಮ್ಮ, ಆನಂದ ಶರಣರು, ಸಂಗಮೇಶ ಶರಣರು, ಕಾಶಿರಾಯ ದೇಸಾಯಿ, ಗುರುಮೂರ್ತಿ ಹಿರೇಮಠ, ಮಹಾದೇವಿ ಹಾವಿನಾಳ, ಮಲ್ಲಣ್ಣ ಶರಣರು, ಭೀಮಣ್ಣ ಇಂಗಳಗಿ, ಗುರು ಶರಣರು, ಸಿದ್ದಣ್ಣ ಶರಣರ, ಶಾಂತಗೌಡ ಬಿರಾದಾರ, ನಿಂಗನಗೌಡ ಪಾಟೀಲ, ಶ್ರೀಕಾಂತ ಬಿರಾದಾರ, ಮಲ್ಲಣ್ಣ ಇಂಗಳಗಿ, ಗುರುಮೂರ್ತಿ ಹಿರೇಮಠ, ಸಾಹಿಲ್ ಮುರಾಳ ಉಪಸ್ಥಿತರಿದ್ದರು.
ರಾಜು ಗುಬ್ಬೇವಾಡ, ಬಸನಗೌಡ ಬಿರಾದಾರ ಸಂಗೀತ ಸೇವೆ ಸಲ್ಲಿಸಿದರು. ಶರಣಗೌಡ ಪೊಲೀಸ್ಪಾಟೀಲ ಸ್ವಾಗತಿಸಿದರು. ಈರಣ್ಣ ಶರಣರು ನಿರೂಪಿಸಿದರು.