ಹಲಗೆ ಸ್ಪರ್ಧೆ

New ProjectOutrage over release of water to Telangana
ಬಸವನಬಾಗೇವಾಡಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಬಸವ ಸಮಿತಿ ಅಧ್ಯ ಈರಣ್ಣ ಪಟ್ಟಣಶೆಟ್ಟಿ ಮಾತನಾಡಿದರು.ಬಸವರಾಜ ಹಾರಿವಾಳ, ಶೇಖರಗೌಡ ಪಾಟೀಲ, ಸಂಕನಗೌಡ ಪಾಟೀಲ ಇತರರಿದ್ದರು.
Published on

ಬಸವನಬಾಗೇವಾಡಿ: ಪಟ್ಟಣದಲ್ಲಿ ಹೋಳಿ ಹಬ್ಬದ ನಿಮಿತ್ತ ಬಸವೇಶ್ವರ ಸೇವಾ ಸಮಿತಿಯಿಂದ 12 ರಂದು ಸಂಜೆ 4ಕ್ಕೆ ಹಲಗೆ ಬಾರಿಸುವ ಸ್ಪರ್ಧೆ ಆಯೋಜಿಸಲಾಗಿದೆ ಎಂದು ಸಮಿತಿ ಅಧ್ಯ ಈರಣ್ಣ ಪಟ್ಟಣಶೆಟ್ಟಿ ಹಾಗೂ ನಿವೃತ್ತ್ತ ಶಿಕ ಎಂ.ಜಿ. ಆದಿಗೊಂಡ ಹೇಳಿದರು.

ಪಟ್ಟಣದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹೋಳಿ ಹಬ್ಬ ದೇಶದ ವಿವಿಧೆಡೆ ಅತ್ಯಂತ ಸಡಗರ ಸಂಭ್ರಮದಿಂದ ಆಚರಿಸಲಾಗುತ್ತಿದೆ. ಹಿಂದುಗಳ ಪವಿತ್ರ ಹಬ್ಬವಾಗಿದೆ ಎಂದು ತಿಳಿಸಿದರು.

ಬಸವೇಶ್ವರ ವೃತ್ತದಲ್ಲಿ ರಂಗ ಪಂಚಮಿ ಮಾ.19ರಂದು ಬೆಳಗ್ಗೆ 10ಕ್ಕೆ ಬಣ್ಣದಾಟ ಆರಂಭಿಸಿ ಬೃಹತ್​ ಮೆರವಣಿಗೆಯಲ್ಲಿ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ರಂಗಿನಾಟವಾಡಲು ನಿರ್ಧರಿಸಲಾಗಿದ್ದು ಪಟ್ಟಣದ ಜನತೆ ಸಹಕರಿಸುವಂತೆ ಅವರು ಮನವಿ ಮಾಡಿದರು.

ಮುಖಂಡರಾದ ಬಸವರಾಜ ಹಾರಿವಾಳ, ಶೇಖರಗೌಡ ಪಾಟೀಲ, ಸಂಕನಗೌಡ ಪಾಟೀಲ, ಶೇಖರ ಗೊಳಸಂಗಿ, ಸುರೇಶಗೌಡ ಪಾಟೀಲ, ರವಿ ರಾಠೋಡ, ಭರತಕುಮಾರ ಅಗರವಾಲ, ಸಂಗಣ್ಣ ಕಲ್ಲೂರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net