

ಕೊಲ್ಹಾರ : ವಚನಗಳ ಸಾರ ಅರಿತು ಜೀವಿಸಿದಾಗ ಬದುಕು ಬಂಗಾರವಾಗುತ್ತದೆ ಎಂದು ಪ್ರಗತಿಪರ ಚಿಂತಕ ಚಿನ್ನಪ್ಪ ಗಿಡ್ಡಪ್ಪಗೋಳ ಹೇಳಿದರು.
ಪಟ್ಟಣದ ಕೆಜಿಎಸ್ ಶಾಲೆಯ ಆವರಣದಲ್ಲಿ ಶರಣ ಸಾಹಿತ್ಯ ಪರಿಷತ್ ಶನಿವಾರ ಆಯೋಜಿಸಿದ್ದ ದತ್ತಿ ಉಪನ್ಯಾಸ ಹಾಗೂ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಮಾತನಾಡಿದರು.ಸಾನಿಧ್ಯ ವಹಿಸಿದ್ದ ದಿಗಂಬರೇಶ್ವರ ಮಠದ ಶ್ರೀ ಕಲ್ಲಿನಾಥ ದೇವರು ಮಾತನಾಡಿ, ಸಮಾಜದಲ್ಲಿ ಶರಣರ ಆದರ್ಶ ತತ್ವಗಳನ್ನು ಮೈಗೂಡಿಸಿಕೊಳ್ಳಬೇಕು ಎಂದರು.
ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಅಧ್ಯ ಜಂಬುನಾಥ ಕಂಚ್ಯಾಣಿ, ಸುನಂದಾಬಾಯಿ ಗಿಡ್ಡಪ್ಪಗೋಳ, ಪುಂಡಲೀಕ ಬೆಳ್ಳುಬ್ಬಿ, ನಾಗರಾಜ ಬನಸೋಡೆ, ರೂಪಾ ಸುರೇಶ ಗಿಡ್ಡಪ್ಪಗೋಳ ಇದ್ದರು.
ತಾಲೂಕು ಶರಣ ಸಾಹಿತ್ಯ ಪರಿಷತ್ತಿನ ನೂತನ ಪದಾಧಿಕಾರಿಗ ಪದಗ್ರಹಣ ನಡೆಯಿತು.