ಮಹಿಳೆಯರು ಕೃಷಿಯತ್ತ ಚಿತ್ತ ಹರಿಸಲಿ

Let women focus on agriculture
ಹೊರ್ತಿ ಗ್ರಾಮದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಜಲಾನಯನ ಯಾತ್ರೆಗೆ ಚಾಲನೆ ನೀಡಿದರು.
Published on

ಹೊರ್ತಿ: ಎಲ್ಲ ಕ್ಷೇತ್ರಗಳಲ್ಲಿ ಗಮನಾರ್ಹ ಸಾಧನೆ ಮಾಡುತ್ತಿರುವ ಮಹಿಳೆಯರು ಕೃಷಿ ಕ್ಷೇತ್ರದತ್ತ ಚಿತ್ತ ಹರಿಸುವುದು ಅಗತ್ಯವಾಗಿದೆ ಎಂದು ಗ್ರಾಮ ಪಂಚಾಯಿತಿ ಅಧ್ಯೆ ಜಯಶ್ರೀ ಭೋಸಗಿ ಹೇಳಿದರು.

ಹೊರ್ತಿಯಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿ ಜಲಾನಯನ ಯಾತ್ರೆಗೆ ಚಾಲನೆ ನೀಡಿ ಮಾತನಾಡಿದ ಅವರು, ಮಹಿಳೆಯರು ಕೃಷಿ ಮತ್ತು ಹೈನುಗಾರಿಕೆ ಕ್ಷೇತ್ರಗಳನ್ನು ಅಭಿವೃದ್ಧಿಪಡಿಸಬೇಕು ಎಂದು ಸಲಹೆ ನೀಡಿದರು.

ಎಸ್​.ಟಿ. ಪಾಟೀಲ ಮಾತನಾಡಿ, ರೈತ ಹೊಲದಲ್ಲಿನ ಮಣ್ಣು ಸಂರಕ್ಷಣೆೆಯತ್ತ ಗಮನ ಹರಿಸಬೇಕು. ಅತಿಯಾದ ಗೊಬ್ಬರ ಬಳಕೆಯಿಂದ ಭೂಮಿ ಹಾಳಾಗುತ್ತಿದೆ. ಮಣ್ಣಿನ ಲವತ್ತದೆ ಹಾಳಾದರೆ ಮನುಷ್ಯರ ಆರೋಗ್ಯದ ಮೇಲೆ ಮಾರಕ ಪರಿಣಾಮ ಬೀರುತ್ತದೆ ಎಂದರು.

ಜನಜಾಗೃತಿ ಯಾತ್ರೆಯು ಗ್ರಾಮದ ಶ್ರೀ ರೇವಣ ಸಿದ್ಧೇಶ್ವರ ದೇವಸ್ಥಾನದಿಂದ ಪ್ರಮುಖ ರಸ್ತೆಯಲ್ಲಿ ಸಂಚರಿಸಿತು. ಕುಂಭ ಮೇಳ ಹಾಗೂ ಕಲಾ ತಂಡಗಳು ಮೆರವಣೆಗೆಗೆ ಮೆರಗು ತಂದವು.

ಉಪ ಕೃಷಿ ಅಧಿಕಾರಿ ಚಂದ್ರಕಾಂತ ಪವಾರ, ಸಹಾಯಕ ಕೃಷಿ ಅಧಿಕಾರಿ ಮಹದೇವಪ್ಪ ಏವೂರ, ಪಿಕೆಪಿಎಸ್​ ಸಿಇಒ ಅಣ್ಣಪ್ಪ ಪೂಜಾರಿ, ರೇವಣಸಿದ್ಧಯ್ಯ ಹಿರೇಮಠ, ಡಿ.ಎಚ್​. ಪ್ರಭು, ಗಂಗಯ್ಯ ಹಿರೇಮಠ, ರಾಜು ವಡ್ಡರ, ರೇವಣಸಿದ್ಧ ತೇಲಿ, ಹುಸೇನಸಾಬ ಹತ್ತರಕಿಹಾಳ, ಚಂದ್ರಕಲಾ ಮಸಳಿಕೇರಿ, ಸಂಗೀತಾ ರಾಠೋಡ, ಶ್ರೀಶೈಲ ಭೋಸಗಿ, ಪವನ ಕುಲಕರ್ಣಿ, ಮೈಬೂಬ ಇಂಡಿ ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net