ಪ್ರಸಾದ ನಿಲಯಕ್ಕೆ ಭೂಮಿಪೂಜೆ 18 ರಂದು

Groundbreaking ceremony for Prasad Nilayam on the 18th
ಇಂಡಿ ಶಾಂತೇಶ್ವರ ಮಂಗಲ ಕಾರ್ಯಾಲಯದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಅಭಿನವ ಮುರುಘೇಂದ್ರ ಶ್ರೀಗಳು ಮಾತನಾಡಿದರು.
Published on

ಇಂಡಿ: ಮುರುಘೇಂದ್ರ ಶ್ರೀಗಳ ಜನ್ಮದಿನ ಮತ್ತು ಬಡ ಮಕ್ಕಳ ಉಚಿತ ಪ್ರಸಾದ ನಿಲಯಕ್ಕೆ ಭೂಮಿಪೂಜೆ ಕಾರ್ಯಕ್ರಮ ಮಾ. 18 ರಂದು ಸಂಜೆ 4 ಗಂಟೆಗೆ ನೆರವೇರಲಿದೆ ಎಂದು ಅಭಿನವ ಮುರುಂದ್ರ ಶ್ರೀಗಳು ಹೇಳಿದರು.

ಪಟ್ಟಣದ ಶಾಂತೇಶ್ವರ ಮಂಗಲ ಕಾರ್ಯಾಲಯದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಾಗಲೇ ಉಚಿತ ಪ್ರಸಾದ ನಿಲಯಕ್ಕೆ ಸರ್ಕಾರದಿಂದ 50 ಲ ರೂ. ಅನುದಾನ ಬಿಡುಗಡೆಯಾಗಿದೆ ಎಂದರು.

ಅಂದು ಸಂಜೆ 6ಗಂಟೆಗೆ ಧರ್ಮಸಭೆ ನಡೆಯಲಿದ್ದು, ಗೋಳಸಾರ, ಅರ್ಜುಣಗಿ, ರೋಡಗಿ ಶ್ರೀಗಳು ಸೇರಿ ತಾಲೂಕಿನ ವಿವಿಧ ಮಠಾಧೀಶರು, ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ, ಸಂಸದ ರಮೇಶ ಜಿಗಜಿಣಗಿ, ಅಪ್ಪು ಪಟ್ಟಣಶೆಟ್ಟಿ ಮತ್ತಿತರರು ಉಪಸ್ಥಿತರಿರುವರು.

ಕಾಸುಗೌಡ ಬಿರಾದಾರ ಮಾತನಾಡಿ, ಮುರುಘೇಂದ್ರ ಶ್ರೀಗಳನ್ನು ರುದ್ರಾಕ್ಷಿಯಿಂದ ತುಲಾಭಾರ ಸೇವೆ ನಡೆಸಲಾಗುವುದು. ಅಲ್ಲದೆ, ಭಕ್ತರಿಗೆ ರುದ್ರಾಕ್ಷಿ ವಿತರಿಸಲಾಗುವುದು ಎಂದು ತಿಳಿಸಿದರು.

ಉದ್ದಿಮೆದಾರ ಅನೀಲ ಪ್ರಸಾದ ಏಳಗಿ, ಶಿವಾನಂದ ತಾಂಬೆ, ಸತೀಶ ಕಕ್ಕಳಮೇಲಿ, ರಾಮಸಿಂಗ್​ ಕನ್ನೊಳ್ಳಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net