ದುಷ್ಕರ್ಮಿಗಳಿಗೆ ಕಠಿಣ ಶಿವಿಧಿಸಿ

Give the criminals a tough time.
ಮುದ್ದೇಬಿಹಾಳದಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಯುವ ರ್ಜನೆ ಮುಖಂಡರು ಶಿರಸ್ತೆದಾರ ಎಂ.ಎ. ಬಾಗೇವಾಡಿ ಅವರಿಗೆ ಮನವಿ ಸಲ್ಲಿಸಿದರು.
Published on

ಮುದ್ದೇಬಿಹಾಳ: ಬಾದಾಮಿ ತಾಲೂಕು ಉಗಲವಾಟದಲ್ಲಿ ಕುರಿಗಾಯಿ ಶರಣಪ್ಪ ಜುಮ್ಮನಕಟ್ಟಿ ಅವರನ್ನು ಹತ್ಯೆಗೈದ ದುಷ್ಕರ್ಮಿಗಳಿಗೆ ಕಠಿಣ ಶಿೆ ವಿಧಿಸುವಂತೆ ಮತ್ತು ಕರ್ನಾಟಕ ರಾಜ್ಯ ಕುರಿಗಾಯಿಗಳ ಹಿತರಣಾ (ರಣೆ ಮತ್ತು ದೌರ್ಜನ್ಯ ತಡೆ) ಕಾಯ್ದೆ ಜಾರಿಗೊಳಿಸುವಂತೆ ಆಗ್ರಹಿಸಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಯುವ ರ್ಜನೆ ಪದಾಧಿಕಾರಿಗಳು ತಹಸೀಲ್ದಾರ್​ ಕಚೇರಿಯ ಶಿರಸ್ತೆದಾರ ಎಂ.ಎ.ಬಾಗೇವಾಡಿ ಅವರಿಗೆ ಗುರುವಾರ ಮನವಿ ಸಲ್ಲಿಸಿದರು.

ರೈತ, ಶೋಷಿತ, ಹಿಂದುಳಿದ ಸಮುದಾಯಗಳವರು ಕುರಿಗಾರಿಕೆ, ಪಶು ಸಂಗೋಪನೆ ಮೂಲಕ ಕುಟುಂಬದ ಆರ್ಥಿಕ ಪರಿಸ್ಥಿತಿ ನಿಭಾಯಿಸುತ್ತ ಸಾಂಪ್ರದಾಯಿಕ ಕಸುಬು ಮಾಡಿಕೊಂಡಿದ್ದಾರೆ. ಬೆಟ್ಟ ಗುಡ್ಡಗಳಲ್ಲಿ ಇವರ ನಿತ್ಯದ ಕಾಯಕ ನಡೆಯುತ್ತದೆ. ಬಡವರ ಪಾಲಿಗಂತೂ ಈ ಕಾಯಕ ವರದಾನವಾಗಿದೆ. ರಾಜ್ಯದಲ್ಲಿ ಕುರಿಗಾರರ ಮೇಲೆ ನಿರಂತರ ದೌರ್ಜನ್ಯ ನಡೆಯುತ್ತಿವೆ. ಮಾ.9ರಂದು ಉಗಲವಾಟದಲ್ಲಿ ನಡೆದ ಹತ್ಯೆ ಇದಕ್ಕೊಂದು ಉದಾಹರಣೆ. ದುಷ್ಕರ್ಮಿಗಳಿಗೆ ಕಠಿಣ ಶಿೆ ಮಾತ್ರವಲ್ಲದೆ ಮೃತನ ಕುಟುಂಬಕ್ಕೆ 20 ಲ ರೂ. ಆರ್ಥಿಕ ನೆರವು ನೀಡಬೇಕು.

2022ರಲ್ಲಿ ಧಾರವಾಡ ಜಿಲ್ಲೆಯ ಕುಂದಗೋಳದಲ್ಲಿ ಕುರಿಗಾಯಿ ಲಕ್ಷಿ$್ಮ ಕಳ್ಳಿಮನಿಯನ್ನು ಅತ್ಯಾಚಾರ ಮಾಡಿ ಕೊಲೆ ಮಾಡಿದ್ದು, ಬೀದರ್​ ಜಿಲ್ಲೆಯ ಬಸವ ಕಲ್ಯಾಣ ತಾಲೂಕಿನಲ್ಲಿ ಕುರಿಗಾಯಿ ಪ್ರಭು ಮೇತ್ರೆ ಎಂಬಾತನ ಕೊಲೆ ಮಾಡಿದ್ದು ಸೇರಿ ಹಲವು ನಿದರ್ಶನಗಳು ನಮ್ಮೆದುರಿಗಿವೆ. ಅರಣ್ಯ ಇಲಾಖೆಯವರಿಂದಲೂ ಕರಿಗಾಯಿಗಳು ಶೋಷಣೆ, ಕಿರುಕುಳ, ದೌರ್ಜನ್ಯಕ್ಕೆ ಒಳಗಾಗುತ್ತಿದ್ದಾರೆ. ಕುರಿಗಾಯಿಗಳ ಮೂಲ ಹಕ್ಕನ್ನೇ ಕಸಿದುಕೊಳ್ಳುವ ಪ್ರಯತ್ನಗಳು ನಡೆಯುತ್ತಿವೆ. ಇದನ್ನು ತಡೆಗಟ್ಟಬೇಕು ಎಂದು ಮನವಿಯಲ್ಲಿ ಕೋರಲಾಗಿದೆ.

ಸಂಟನೆ ಅಧ್ಯ ಮುತ್ತು ಟಕ್ಕಳಕಿ, ಪ್ರಮುಖರಾದ ಅನೀಲ ವಾಲಿಕಾರ, ಜುಮ್ಮಣ್ಣ ಹೊಕ್ರಾಣಿ, ಮಾಳಿಂಗರಾಯ ಯರಝರಿ, ಶಿವು ವನಕ್ಯಾಳ, ಮುತ್ತು ನಾಡಗೌಡ, ದೇವು ವಾಲಿಕಾರ, ಪರಶುರಾಮ ವರ್ತೂರ, ದೇವೇಂದ್ರ ಹೊಸಮನಿ, ಮಂಜು ಕುಂಟೋಜಿ, ಚಂದ್ರು ಹಾದಿಮನಿ, ರು ಸ್ವಾಮಿ, ಶಂಕ್ರಯ್ಯ ತುಪ್ಪದ, ಮಲ್ಲಿ ಹಿರೇಕುರುಬರ, ನಿಂಗು ಬಂಡೆಪ್ಪನಹಳ್ಳಿ, ಗೋಪಿ ಗೊಲ್ಲರ, ಬಸವರಾಜ ಹೆಳವರ, ಚನ್ನಬಸಪ್ಪ ಬಿರಾದಾರ, ಲಕ್ಷ$್ಮಣ ಬಿಸಿರೊಟ್ಟಿ, ಬಸವರಾಜ ಹೆಳವರ, ದ್ಯಾಮಣ್ಣ ಶಿವಪುರ, ಹಣಮಂತ ಖ್ಯಾತನಡೋಣಿ, ರವಿ ಮೇಟಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net