

ಹೂವಿನಹಿಪ್ಪರಗಿ: ರೈತರ ಸಮಸ್ಯೆಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ಹೋರಾಟ ಮಾಡುವುದಕ್ಕೆ ರೈತ ಸಂಟನೆ ಇರಬೇಕೆ ಹೊರತು ಉಪಜೀವನ ಸಾಗಿಸಲು ಅಲ್ಲ ಎಂದು ಅಖಂಡ ಕರ್ನಾಟಕ ರೈತ ಸಂದ ಪ್ರಧಾನ ಕಾರ್ಯದರ್ಶಿ ಅರವಿಂದ ಕುಲಕರ್ಣಿ ಹೇಳಿದರು.
ಬಸವನಬಾಗೇವಾಡಿ ತಾಲೂಕಿನ ಕನ್ನಾಳ ಗ್ರಾಮದ ಮಾರುತಿ ದೇವಸ್ಥಾನದ ಆವರಣದಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ಗ್ರಾಮ ಟಕ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ಅನ್ನ ಬೆಳೆದು ದೇಶಕ್ಕೆ ಕೊಡುವ ಅನ್ನದಾತರ ಪರಿಸ್ಥಿತಿ ಬಿಗಡಾಯಿಸಿದ್ದು, ಅನ್ನದಾತರ ನೆರವಿಗೆ ಇಂದಿನ ಸರ್ಕಾರಗಳು ಧಾವಿಸುತ್ತಿಲ್ಲ ಎಂದು ಅವರು ಕಳವಳ ವ್ಯಕ್ತಪಡಿಸಿದರು.
ರೈತರು ಬೆಳೆದ ಬೆಳೆಗಳಿಗೆ ಬೆಂಬಲ ಬೆಲೆ ನಿಗದಿಪಡಿಸಬೇಕು ಮತ್ತು ವಿಜಯಪುರ&ಬಾಗಲಕೋಟೆ ಅವಳಿ ಜಿಲ್ಲೆಗೆ ನೀರು ಹಂಚಿಕೆಯಲ್ಲಿ ಅನ್ಯಾಯವಾಗಿದ್ದನ್ನು ಸರಿಪಡಿಸಬೇಕು ಎಂದರು.
ವಿಠ್ಠಲ ಬಿರಾದಾರ ಮಾತನಾಡಿ, ಆಲಮಟ್ಟಿ ಅಣೆಕಟ್ಟೆ ನಿರ್ಮಾಣಕ್ಕೆ ಜಿಲ್ಲೆಯ ಜನತೆ ಲಾಂತರ ಎಕರೆ ಜಮೀನು, ಮನೆ ಮಠಗಳನ್ನು ತ್ಯಾಗ ಮಾಡಿದ್ದಾರೆ. ಆದರೆ ನಮಗೆ ಅಗತ್ಯವಿದ್ದ ಸಂದರ್ಭದಲ್ಲಿ ನೀರು ಕೊಡದೆ ನೆರೆ ರಾಜ್ಯಕ್ಕೆ ನೀರು ಬಿಡುತ್ತಿರುವುದು ಯಾವ ನ್ಯಾಯ ಎಂದು ಪ್ರಶ್ನಿಸಿದರು.
ಬಸವನಬಾಗೇವಾಡಿ ತಾಲೂಕಾಧ್ಯ ಉಮೇಶ ವಾಲಿಕಾರ, ಹಣಮಂತ ಕಲಬುರ್ಕಿ, ತಾಳಿಕೋಟೆ ತಾಲೂಕಾಧ್ಯ ಬಾಲಪ್ಪಗೌಡ ಲಿಂಗದಳ್ಳಿ, ರಾಮನಗೌಡ ಹಾದಿಮನಿ, ಹಣಮಂತ್ರಾಯ ಗುಣಕಿ, ಮಲಿಗೆಪ್ಪ ಸಾಸನೂರ, ಲಾಲಸಾಬ ಹಳ್ಳೂರ, ಸಂಗಪ್ಪ ಬಳಿಗಾರ, ಶ್ರೀಶೈಲ ಸಾಸನೂರ, ಬಸವರಾಜ ನಾಗರೆಡಿ,್ಡ ಬಸನಗೌಡ ಪಾಟೀಲ, ಶಿವಶರಣ ನಾಗರೆಡ್ಡಿ, ಚಂದ್ರಶೇಖರ ಹೊಸೂರ, ಶಿವಶರಣ ಹೂಗಾರ, ಗುರಪ್ಪಗೌಡ ಪಾಟೀಲ, ಗುರುಲಿಂಗಯ್ಯ ತೆಗ್ಗಿನಮಠ, ಮಡಿವಾಳಪ್ಪ ನಾಗರೆಡಿ,್ಡ ಮಾರುತಿ ಮೆಲಿನಮನಿ, ಹಣಮಂತ ವಾಲಿಕಾರ ಪಾಲ್ಗೊಂಡಿದ್ದರು.