ಹಕ್ಕಿ ಜ್ವರ ರೋಗಕ್ಕೆ ಆತಂಕಬೇಡ

Don't worry about bird flu.
ಇಂಡಿ ಕಂದಾಯ ಉಪ ವಿಭಾಗಾಧಿಕಾರಿಗಳ ಸಭಾಭವನದಲ್ಲಿ ಹಕ್ಕಿಜ್ವರ ಕುರಿತು ಕರಪತ್ರವನ್ನು ಎಸಿ ವಿನಯ ಪಾಟೀಲ ಬಿಡುಗಡೆ ಗೊಳಿಸಿದರು.ಡಾ. ಪ್ರಕಾಶ ಮಿರ್ಜಿ,ಡಾ.ರವಿಕಾಂತ ಬಿರಾದಾರ, ಡಾ. ರಾಜಶೇಖರ ಕಾರಜೋಳ, ಡಾ.ಸಂಜೀವಕುಮಾರ ಲಾಳಸಂಗಿ ಇದ್ದರು.
Published on

ಇಂಡಿ: ಹಕ್ಕಿ ಜ್ವರ ಪಗಳಿಗೆ ಹರಡುವ ಕಾಯಿಲೆಯಾಗಿದ್ದು, ಮನುಷ್ಯರಿಂದ ಮನುಷ್ಯರಿಗೆ ಹರಡುವ ಸಾಂಕ್ರಾಮಿಕ ರೋಗವಲ್ಲ. ಸಾರ್ವಜನಿಕರು ಆತಂಕ ಪಡುವ ಅಗತ್ಯವಿಲ್ಲ ಎಂದು ಕಂದಾಯ ಉಪವಿಭಾಗಾಧಿಕಾರಿ ವಿನಯ ಪಾಟೀಲ ಹೇಳಿದರು.

ಕಂದಾಯ ಉಪ ವಿಭಾಗಾಧಿಕಾರಿಗಳ ಸಭಾಭವನದಲ್ಲಿ ಇತ್ತೀಚೆಗೆ ಹಕ್ಕಿಜ್ವರ ಕುರಿತು ಜಾಗೃತಿ ಮೂಡಿಸುವ ಕರಪತ್ರ ಬಿಡುಗಡೆಗೊಳಿಸಿ ಮಾತನಾಡಿದರು.

ಹಿರಿಯ ಪಶು ವೈದ್ಯಾಧಿಕಾರಿ ಡಾ.ರಾಜಕುಮಾರ ಅಡಕಿ ಮಾತನಾಡಿ, ತಾಲೂಕಿನಲ್ಲಿ ಹತ್ತು ಸಾವಿರ ಕೋಳಿಗಳು ಇವೆ. ಸಾವಿರ ಕೋಳಿಯ ನಾಲ್ಕು, 500 ಕೋಳಿಯ 10, ನೂರು ಕೋಳಿಯ 40, ಐವತ್ತು ಕೋಳಿಯ 30 ಾಮ್​ರ್ಗಳಿವೆ. ಮರಣ ಹೊಂದಿದ ಕೋಳಿಗಳ ವೈಜ್ಞಾನಿಕವಾಗಿ ವಿಲೇವಾರಿ ಮಾಡಲಾಗುತ್ತಿದೆ. ಕೋಳಿಗಳಿಗೆ ಶೀತ ಜ್ವರ ಕಂಡುಬಂದರೆ ಅಂಥ ಕೋಳಿ ಸಾಕಾಣಿಕೆ ಕೇಂದ್ರವನ್ನು ರ್ನಿಬಂಧಿತ ಪ್ರದೇಶವೆಂದು ೂಷಿಸಿ ಸಾರ್ವಜನಿಕರ ಪ್ರವೇಶ ನಿಷೇಶಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.

ತಾಲೂಕು ಹಕ್ಕಿ ಜ್ವರದ ನೋಡಲ್​ ಅಧಿಕಾರಿ ಡಾ. ಪ್ರಕಾಶ ಮಿರ್ಜಿ ಮಾತನಾಡಿ, ತಾಲೂಕಿನಲ್ಲಿ ಕೋಳಿ ಶೀತ ಜ್ವರದ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಗ್ರಾ.ಪಂ ಅಭಿವೃದ್ಧಿ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ. ಕೋಳಿಗಲ್ಲಿ ಅಸಹಜ ಸಾವು ಕಂಡು ಬಂದಲ್ಲಿ ತಣವೇ ಪಶು ಪಾಲನಾ ಇಲಾಖೆಗೆ ತಿಳಿಸುವಂತೆ ಕೋಳಿ ಸಾಕಾಣಿಕೆ ಕೇಂದ್ರಗಳ ಮಾಲೀಕರಿಗೆ ಸೂಚಿಸಲಾಗಿದೆ. ಹಾಗೂ ಗ್ರಾ.ಪಂ ವ್ಯಾಪ್ತಿಯಲ್ಲಿ ಬರುವ ಕೋಳಿ ಮಾಂಸ ಮತ್ತು ಮೊಟ್ಟೆ ಮಾರಾಟ ಅಂಗಡಿಗಳಲ್ಲಿ ಉತ್ಪಾದನೆಯಾಗುವ ತ್ಯಾಜಗಳನ್ನು ಸೂಕ್ತ ರೀತಿಯಲ್ಲಿ ವಿಲೇವಾರಿ ಮಾಡುವಂತೆ ಸೂಚಿಸಲಾಗಿದೆ ಎಂದು ಅಡಕಿ ಹೇಳಿದರು.

ಪಶು ವೈದ್ಯಾಧಿಕಾರಿಗಳಾದ ಡಾ.ಲಕ್ಷಿ$್ಮಶ ಕಟ್ಟಿಮನಿ, ಡಾ.ರವಿಕಾಂತ ಬಿರಾದಾರ, ಡಾ. ರಾಜಶೇಖರ ಕಾರಜೋಳ, ಡಾ.ಸಂಜೀವಕುಮಾರ ಲಾಳಸಂಗಿ, ಡಾ.ವಿನಯ ಜಂಬಗಿ, ಡಾ. ಪ್ರಶಾಂತ ಬೆಳ್ಳುಂಡಗಿ, ಡಾ. ಆಶಾರಾಣಿ ದಶವಂತ, ಸಿಬ್ಬಂದಿಗಳಾದ ರಾಮಣ್ಣ ಉಪ್ಪಾರ, ರಮೇಶ ನರಳೆ, ಜಾವೇದ ಬಾಗವಾನ, ಪುಂಡಲೀಕ ಕೂಡಗಿ, ವಿಶ್ವನಾಥ ಮೋಕಲಾಜಿ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net