

ಇಂಡಿ: ಹೋಳಿ ಮತ್ತು ರಂಜಾನ್ ಹಬ್ಬವನ್ನು ಸೌಹಾರ್ದತೆಯಿಂದ ಆಚರಿಸಬೇಕೆಂದು ಸಿ.ಪಿ.ಐ. ಪ್ರದಿಪ ಬಿಸೆ ಹೇಳಿದರು.
ಪಟ್ಟಣದ ಶಹರ ಪೊಲೀಸ್ ಠಾಣೆಯಲ್ಲಿ ಹೋಳಿ ಮತ್ತು ರಂಜಾನ್ ಶಾಂತಿ ಸಭೆಯಲ್ಲಿ ಅವರು ಮಾತನಾಡಿದರು.
ಹಿಂದಿನಿಂದಲೂ ಎಲ್ಲರೂ ಏಕತೆಯಿಂದ ಹೋಳಿ ಮತ್ತು ರಂಜಾನ್ ಆಚರಿಸುವ ಪರಂಪರೆ ನಡೆದುಕೊಂಡು ಬಂದಿದ್ದು, ಅದನ್ನು ಮುಂದಿನ ಪೀಳಿಗೆಗೂ ಪರಿಚಯಿಸಬೇಕು ಎಂದರು.
ಪುರಸಭೆ ಅಧ್ಯ ಲಿಂಬಾಜಿ ರಾಠೋಡ, ಮಾಜಿ ಅಧ್ಯ ಯಮನಾಜಿ ಸಾಳುಂಕೆ, ಸದಸ್ಯ ದೇವೆಂದ್ರ ಕುಂಬಾರ, ಕರವೇ ಅಧ್ಯ ಬಾಳು ಮುಳಜಿ, ಅಯ್ಯೂಬ್ ನಾಟಿಕಾರ, ರೈಸ್ ಅಷ್ಟೆಕರ, ಪ್ರಾಧ್ಯಾಪಕ ವಿಜು ರಾಠೋಡ, ಚಂದ್ರಶೇಖರ ಹೊಸಮನಿ, ಸಿದ್ದು ಕಟ್ಟಿಮನಿ, ಪರಶುರಾಮ ಭಾವಿಕಟ್ಟಿ, ಯಲ್ಲಪ್ಪ ಬಂಡೆನವರ, ಅಮರ ಬಾಸುತಕರ, ಶ್ರೀಧರ ತ್ರಿ, ರಸೂಲ ಮಾಶ್ಯಾಳಕರ ಉಪಸ್ಥಿತರಿದ್ದರು.
ಪುರಸಭೆ ವತಿಯಿಂದ ಸಿಪಿಐ ಪ್ರದಿಪ ಬಿಸೆ ಅವರನ್ನು ಸನ್ಮಾನಿಸಲಾಯಿತು.