ಹೊಳಿ ಹಬ್ಬಕ್ಕೆ ಸಂಭ್ರಮದ ತೆರೆ

A festive curtain for the Holi festival
ಬಸವನ ಬಾಗೇವಾಡಿ ಪಟ್ಟಣದ ಬಸವೇಶ್ವರ ವೃತ್ತದಲ್ಲಿ ರಂಗಿನಾಟದಲ್ಲಿ ಪಾಲ್ಗೊಂಡಿರುವ ಜನಸ್ತೋಮ.
Published on

ಬಸವನಬಾಗೇವಾಡಿ : ಪಟ್ಟಣದಲ್ಲಿ ಬಸವೇಶ್ವರ ಸೇವಾ ಸಮಿತಿ ನೇತೃತ್ವದಲ್ಲಿ ರಂಗಪಂಚಮಿ ನಿಮಿತ್ತ ಪಟ್ಟಣದಲ್ಲಿ ಬುಧವಾರ ಸಂಭ್ರಮದಿಂದ ಬಣ್ಣವಾಡಿದರು.

ಪಟ್ಟಣದ ಬಸವೇಶ್ವರ ವೃತ್ತದಲ್ಲಿ ವಿರಕ್ತಮಠದ ಸಿದ್ಧಲಿಂಗ ಶ್ರೀಗಳು ಹಾಗೂ ಹಿರೇಮಠದ ಪದ್ಮರಾಜ ಒಡೆಯರ ಶಿವಪ್ರಕಾಶ ಶಿವಾಚಾರ್ಯರ ನೇತೃತ್ವದಲ್ಲಿ ಬಸವೇಶ್ವರ ಅಶ್ವಾರೂಢ ಪುತ್ಥಳಿಗೆ ಮಾಲಾರ್ಪಣೆ ಮಾಡಿ, ಓಕುಳಿ ಆಚರಣೆಗೆ ಚಾಲನೆ ನೀಡಲಾಯಿತು.

ಟ್ರ್ಯಾಕ್ಟರ್​ನಲ್ಲಿ ಬ್ಯಾರಲ್​ನಲ್ಲಿನ ಬಣ್ಣ ತುಂಬಿಕೊಂಡು ನೆರೆದ ಜನರ ಮೇಲೆ ಎರಚುತ್ತ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು. ಪರಸ್ಪರ ಬಣ್ಣ ಹಚ್ಚುವ ಮೂಲಕ ಸಂಭ್ರಮಿಸಿದರು.

ಮೆರವಣಿಗೆಯಲ್ಲಿ ಹಿರಿಯರು ಹಲಗೆ (ತಮಟೆ) ನಾದಕ್ಕೆ ಹೆಜ್ಜೆ ಹಾಕಿದರೇ ಯುವಕರು ಡಿಜೆ ಸೌಂಡ್​ಗೆ ಕುಣಿದು ಕುಪ್ಪಳಿಸಿ ಬಣ್ಣದಾಟದ ವೈಭವ ಹೆಚ್ಚಿಸಿದರು. ಪಟ್ಟಣದ ಬಸವಜನ್ಮ ಸ್ಮಾರಕ ಮುಂಭಾಗದ ರಸ್ತೆಯಲ್ಲಿ ರಾಷ್ಟ್ರೀಯ ಬಸವ ಸೈನ್ಯ ಸಂಟನೆ ರೈನ್​ ಡಾನ್ಸ್​ ವ್ಯವಸ್ಥೆ ಮಾಡಿತ್ತು.

ಬಸವೇಶ್ವರ ಸೇವಾ ಸಮಿತಿ ಅಧ್ಯ ಈರಣ್ಣ ಪಟ್ಟಣಶೆಟ್ಟಿ, ಮುಖಂಡರಾದ ಬಸವರಾಜ ಹಾರಿವಾಳ, ಲೋಕನಾಥ ಅಗರವಾಲ, ಸಂಗನಗೌಡ ಚಿಕ್ಕೊಂಡ, ರವಿ ಪಟ್ಟಣಶೆಟ್ಟಿ, ಶೇಖನಗೌಡ ಪಾಟೀಲ್​, ಸಂಕನಗೌಡ ಪಾಟೀಲ್​, ಶೇಖರ ಗೊಳಸಂಗಿ, ಸಂಗಮೇಶ ಓಲೇಕಾರ, ಭರತ ಅಗರವಾಲ, ಬಸವರಾಜ ಗೊಳಸಂಗಿ, ಡಾ. ಬಸವರಾಜ ಕೋಟಿ, ಶಂಕರಗೌಡ ಬಿರಾದಾರ, ಎಂ.ಜಿ. ಆದಿಗೊಂಡ, ಬಿ.ಕೆ. ಕಲ್ಲೂರ, ಅಶೋಕ ಹಾರಿವಾಳ, ರವಿ ರಾಠೋಡ, ದಯಾನಂದ ಜಾಲಗೇರಿ, ಸಂಗಯ್ಯ ಕಾಳಹಸ್ತೇಶ್ವರಮಠ, ಗುರಲಿಂಗ ಬಸರಕೋಡ, ಜಟ್ಟಿಂಗರಾಯ ಮಾಲಗಾರ, ಅಶೋಕ ಗುಳೇದ, ಪ್ರವಿಣ ಪೂಜಾರಿ ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net