ತಾಳಿಕೋಟೆಯಲ್ಲಿ ಬಣ್ಣದ ಸಂಭ್ರಮ

A celebration of colors in Talikote
Published on

ತಾಳಿಕೋಟೆ: ಪಟ್ಟಣದಲ್ಲಿ ಹೋಳಿ ನಿಮಿತ್ತ ಕಾಮದಹನ ಮಾಡುವ ಮೂಲಕ ಸ್ನೇಹಿತ, ಹಿತೈಷಿಗಳಿಗೆ ಬಣ್ಣ ಹಚ್ಚುವುದರೊಂದಿಗೆ ಮೊದಲ ದಿನದ ರಂಗಿನಾಟಕ್ಕೆ ಯುವಕರು ಚಾಲನೆ ನೀಡಿದರು.

ಯುವಕರು ಹೆಣ್ಣು ಮಕ್ಕಳ ಉಡುಪು ತೊಟ್ಟು ನಡುರಸ್ತೆಯಲ್ಲಿ ಹಲಗೆ ಮಜಲಿಗೆ ತಕ್ಕಂತೆ ಕುಣಿದು ಗಮನಸೆಳೆದರು. ಎಪಿಎಂಸಿ ಬಸವೇಶ್ವರ ಮಾರ್ಕೆಟ್​ ಯಾರ್ಡ್​ನಲ್ಲಿ ಪ್ರತಿಷ್ಠಾಪಿಸಲಾದ ರತಿ ಮನ್ಮಥರ ಮೂರ್ತಿ ಮುಂದೆ ಯುವಕರು ಸೀರೆ ಕುಪ್ಪಸ ತೊಟ್ಟು ಕುಣಿದು ಕುಪ್ಪಳಿಸಿದರು.

ವಿವಿಧ ಬಡಾವಣೆಗಳಲ್ಲಿ ಮಹಿಳೆಯರೂ ಬಣ್ಣದಾಟದಲ್ಲಿ ಪಾಲ್ಗೊಂಡು ಅಕ್ಕ ಪಕ್ಕದ ಮನೆಯ ಮಹಿಳೆಯರಿಗೆ ಬಣ್ಣ ಎರಚಿ ಸಂಭ್ರಮಿಸಿದರು.

ವಾಹನದಲ್ಲಿ ಬಣ್ಣ ತುಂಬಿದ ಬ್ಯಾರಲ್​ಗಳನ್ನಿಟ್ಟು ಹಲಗೆ ಮಜಲುಗಳೊಂದಿಗೆ ದಾರಿಯೂದ್ದಕ್ಕೂ ಸಂಚರಿಸಿ ಬಣ್ಣ ಎರಚಿದರು. ಬಜಾರ ಬಸವೇಶ್ವರ ದೇವಸ್ಥಾನಕ್ಕೆ ತೆರಳಿ ಮಹಾಪೂಜೆ ಸಲ್ಲಿಸಿದರು.

ಕೆಮಿಕಲ್​ ಮಿಶ್ರಿತ ಬಣ್ಣಕ್ಕೆ ಹೆದರಿ ಊರು ಬಿಟ್ಟ ಜನ:

ಈ ಮೊದಲು ಹೋಳಿ ಹುಣ್ಣಿಮೆ ಎಂದರೆ ಯುವಕರಿಗೆ ಎಲ್ಲಿಲ್ಲದ ಹುಮ್ಮಸ್ಸು ಇತ್ತು ಆದರೆ, ಇತ್ತೀಚಿನ ದಿನಗಳಲ್ಲಿ ಬಣ್ಣದಲ್ಲಿ ಕೆಮಿಕಲ್​ ಮಿಶ್ರಿತಗೊಳ್ಳುತ್ತಿದೆ. ಕೆಮಿಕಲ್​ ಮಿಶ್ರಿತ ಬಣ್ಣದಿಂದ ಚರ್ಮಕ್ಕೆ ಅಪಾಯಕಾರಿ ಎಂಬುದನ್ನು ಅರಿತು ಕೆಲವರು ಬಣ್ಣದ ದಿನ ತಮ್ಮೂರು ಬಿಟ್ಟು ಪ್ರೇಕ್ಷಣಿಯ ಸ್ಥಳಗಳಾದ ಗೋವಾ, ಪುಣೆ, ಧರ್ಮಸ್ಥಳ, ಅಯೋಧ್ಯೆ ಸೇರಿ ವಿವಿಧೆಡೆ ತೆರಳುತ್ತಿರುವುದು ಕಂಡು ಬರುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net