

ವಿಜಯಪುರ : ಅಖಿಲ ಭಾರತ ನಾಗರಿಕ ಸೇವಾ ರಾಷ್ಟ್ರಮಟ್ಟದ ಹಾಕಿ ಸ್ಪರ್ಧೆ 2024&25ನೇ ಸಾಲಿನ ಕರ್ನಾಟಕ ರಾಜ್ಯ ತಂಡ ನಿಯೋಜಿಸಲಾಗಿದ್ದು, ನಗರದ ಯುಜಿಎಚ್ಪಿಎಸ್ ನಂ. 5 ಶಾಲೆಯ ಸಹ ಶಿಕ, ಜಿಲ್ಲಾ ಸರ್ಕಾರಿ ನೌಕರರ ಸಂದ ಜಿಲ್ಲಾ ಖಜಾಂಚಿ ಹಾಗೂ ಜಿಒಸಿಸಿ ಬ್ಯಾಂಕಿನ ನಿರ್ದೇಶಕ ಸೈಯ್ಯದ ಜುಬೇರ ಕೆರೂರ ಆಯ್ಕೆಯಾಗಿದ್ದಾರೆ.
ರಾಜ್ಯಮಟ್ಟದ ನೌಕರರ ಕ್ರೀಡಾಕೂಟದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಇವರು ರಾಷ್ಟ್ರಮಟ್ಟದ ಹಾಕಿ ತಂಡಕ್ಕೆ ಆಯ್ಕೆಯಾಗಿದ್ದಾರೆ. ಆಂಧ್ರಪ್ರದೇಶದ ಕಾಕಿನಾಡ ನಗರದ ಅಸ್ಟ್ರೊ ರ್ಟ್ ಹಾಕಿ ಡಿಎಸ್ಎ ಮೈದಾನದಲ್ಲಿ ಫೆ. 15 ರಿಂದ ಫೆ. 28 ವರೆಗೆ ನಡೆಯಲಿರುವ ರಾಷ್ಟ್ರಮಟ್ಟದ ಹಾಕಿ ಪಂದ್ಯಾವಳಿಯಲ್ಲಿ ಭಾಗವಹಿಸಲಿದ್ದಾರೆ.
ರಾಜ್ಯದ ತಂಡವು ಹಾಕಿ ಪಂದ್ಯದಲ್ಲಿ ಜಯಶಾಲಿಯಾಗಲಿ ಎಂದು ೇತ್ರ ಶಿಣಾಧಿಕಾರಿ ಬಸವರಾಜ ತಳವಾರ, ನೌಕರರ ಸಂದ ಜಿಲ್ಲಾಧ್ಯ ಸುರೇಶ ಶಡಶ್ಯಾಳ, ಕಾರ್ಯದರ್ಶಿ ರಾಜಶೇಖರ ದೈವಾಡಿ, ಪ್ರೌಢ ಶಾಲಾ ಶಿಕರ ಸಂದ ಜಿಲ್ಲಾಧ್ಯ ಶಿವರಾಜ ಬಿರಾದಾರ, ಬಿ.ಟಿ. ಗೌಡರ, ವಿಜಯಕುಮಾರ ಹತ್ತಿ, ಗಂಗಾಧರ ಜೇವೂರ, ನೀಜು ಮೇಲಿನಕೇರಿ, ಅಜೀಜ ಅರಳಿಮಟ್ಟಿ, ಮಾಹಾಂತೇಶ ಪಾಟೀಲ, ಅರವಿಂದ ಹೂಗಾರ, ಬಿ.ಎಸ್. ಮಜ್ಜಗಿ, ಚನ್ನಯ್ಯ ಮಠಪತಿ ಇತರರು ಶುಭ ಹಾರೈಸಿದ್ದಾರೆ.