ಉಡಿ ತುಂಬುವ ಕಾರ್ಯಕ್ರಮ ನಾಳೆ

Udi filling program is tomorrow
ಮಲ್ಲಿಕಾರ್ಜುನ ಸ್ವಾಮೀಜಿ
Published on

ತಾಳಿಕೋಟೆ: ತಾಲೂಕಿನ ಪಡೇಕನೂರದಲ್ಲಿ ದಾಸೋಹ ವಿರಕ್ತಮಠದ ಜಾತ್ರೆ ನಿಮಿತ್ತ ಉಡಿ ತುಂಬುವ ಕಾರ್ಯಕ್ರಮ ಫೆ.24ರಂದು ಜರುಗಲಿದೆ ಎಂದು ದಾಸೋಹ ವಿರಕ್ತಮಠದ ಪೀಠಾಧಿಪತಿ ಮಲ್ಲಿಕಾರ್ಜುನ ಸ್ವಾಮೀಜಿ ತಿಳಿಸಿದ್ದಾರೆ.

ರಾಮಲಿಂಗ ಶ್ರೀಗಳು ನೇತೃತ್ವ ವಹಿಸುವರು. ಕೃಷಿ ಉತ್ಪನ್ನ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಉದ್ಘಾಟಿಸುವರು. ಶಾಸಕ ಸಿ.ಎಸ್​.ನಾಡಗೌಡ(ಅಪ್ಪಾಜಿ) ಅಧ್ಯಕ್ಷತೆ ವಹಿಸುವರು. ಬ್ಲಾಕ್​ ಕಾಂಗ್ರೆಸ್​ ಅಧ್ಯ ಗುರಣ್ಣ ತಾರನಾಳ, ಶಕುಂತಲಾ ಕೋಳೂರ, ಸೋಮನಗೌಡ ಕೋಳೂರ, ಪ್ರಾಧ್ಯಾಪಕ ಡಾ.ಬಸವರಾಜ ಅಸ್ಕಿ, ಸಿದ್ದಣ್ಣ ಜಾಲಿಕಟ್ಟಿ, ಸಿದ್ದನಗೌಡ ಅಸ್ಕಿ, ಆಶಾ ಬಾಬಣ್ಣವರ ಉಪಸ್ಥಿತರಿರುವರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net