

ಆಲಮಟ್ಟಿ: ಜಿಲ್ಲೆಯಲ್ಲಿ ರೈತರಿಗೆ ಮೊದಲಿನಂತೆ ರಾತ್ರಿ ವೇಳೆ ಸಮರ್ಪಕ ವಿದ್ಯುತ್ ಪೂರೈಸಬೇಕೆಂದು ರಾಜ್ಯ ರೈತ ಸಂ ಹಾಗೂ ಹಸಿರು ಸೇನೆ ಜಿಲ್ಲಾಧ್ಯ ಲಿಂಗರಾಜ ಆಲೂರು ಆಗ್ರಹಿಸಿದರು.
ಆಲಮಟ್ಟಿ ಸರ್ಕಾರಿ ನೌಕರರ ಸಂದ ಸಭಾಭವನದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಜಯಪುರ ಜಿಲ್ಲೆಯಲ್ಲಿ ಮೂರು ಲಕ್ಕೂ ಹೆಚ್ಚು ಹೆಕ್ಟೇರ್ ಪ್ರದೇಶದಲ್ಲಿ ಈರುಳ್ಳಿ, ಕಬ್ಬು, ಬಿತ್ತನೆ ಮಾಡಿದ್ದಾರೆ. ಸಮರ್ಪಕ ವಿದ್ಯುತ್ ಇಲ್ಲದೆ ಬೆಳೆಗಳು ಒಣಗುತ್ತಿವೆ. ಈ ಮೊದಲು ರಾತ್ರಿ ಆರು ತಾಸು ಸಮರ್ಪಕ ವಿದ್ಯುತ್ ನೀಡಲಾಗುತ್ತಿತ್ತು. ಈಗ ನಿಲ್ಲಿಸಲಾಗಿದೆ. ಹೀಗಾಗಿ ರೈತರ ಬೆಳೆಗಳಿಗೆ ನೀರಿಲ್ಲದೆ ಒಣಗುವ ಹಂತಕ್ಕೆ ತಲುಪಿದ್ದು, ರೈತರು ಆತಂಕದಲ್ಲಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ, ಸಚಿವ ಶಿವಾನಂದ ಪಾಟೀಲ ಮತ್ತು ಜಿಲ್ಲೆಯ ಎಲ್ಲ ಶಾಸಕರು ಈ ಕುರಿತು ಸೂಕ್ತ ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಿದರು.
ರೈತರ ಸಮಸ್ಯೆಗೆ ಸ್ಪಂದಿಸದಿದ್ದರೆ ನಿಡಗುಂದಿಯಿಂದ ಬೈಕ್ ಮತ್ತು ಟ್ರಾಕ್ಟರ್ ರ್ಯಾಲಿ ಮೂಲಕ ಎಂ.ಬಿ. ಪಾಟೀಲ ಹಾಗೂ ಶಿವಾನಂದ ಪಾಟೀಲ ಅವರ ಮನೆಗೆ ಮುತ್ತಿಗೆ ಹಾಕಲಾಗುವುದೆಂದು ಎಚ್ಚರಿಸಿದರು.
ನಿಡಗುಂದಿ ತಾಲೂಕು ಟಕದ ಅಧ್ಯ ಸೀತಪ್ಪ ಗಣಿ, ರವಿಶಂಕರ ಕೋತಿನ, ವೇಂಕಟೇಶ ವಡ್ಡರ, ಸಾಬಣ್ಣ ಅಂಗಡಿ, ಲಕ್ಷ$್ಮಣ ಬಿರಾದಾರ, ಸುಭಾಷ ಚೋಪಡೆ, ಮಲ್ಲಯ್ಯ ನಾಗೂರಮಠ, ರಾಜು ಯಲಗಾರ, ಸಂಜು ಚನಗೊಂಡ್, ಶಿವಪ್ಪ ಪಾಟೀಲ ಇದ್ದರು.