23ರಂದು ವಿಜಯಪುರಕ್ಕೆ ಪೇಜಾವರ ಶ್ರೀಗಳು

Pejawar Sris to Vijayapura on 23rd
ಪೇಜಾವರ ಶ್ರೀಗಳು
Published on

ವಿಜಯಪುರ : ಉಡುಪಿ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನತಿರ್ಥರು ೆ. 23ರಂದು ವಿಜಯಪುರಕ್ಕೆ ಆಗಮಿಸಲಿದ್ದು, 27ರ ವರೆಗೆ ನಗರದಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿಯಾಗಲಿದ್ದಾರೆ ಎಂದು ಕೃಷ್ಣ ವಾದಿರಾಜ ಮಠದ ಅಧ್ಯಕ್ಷ ಡಾ. ಕಿರಣ ಚುಳಕಿ ತಿಳಿಸಿದ್ದಾರೆ.

ನಗರದಲ್ಲಿನ ಅಖಿಲ ಭಾರತ ಮಧ್ವ ಮಹಾ ಮಂಡಳ ವಿದ್ಯಾರ್ಥಿ ವಸತಿ ನಿಲಯದ ನೂತನ ಕಟ್ಟಡ ನಿರ್ಮಾಣ ಕುರಿತು ಶ್ರೀಗಳು ಚರ್ಚಿಸಲಿದ್ದಾರೆ. 24ರಿಂದ 26ರ ವರಿಗೆ ಪ್ರತಿ ದಿನ ಸಂಜೆ 6ಕ್ಕೆ ಕೃಷ್ಣ ವಾದಿರಾಜ ಮಠದಲ್ಲಿ ವಿದ್ವಾಂಸರಿಂದ ಪ್ರವಚನ ನಂತರ ಶ್ರೀಪಾದಂಗಳವರು ಅಮೃತೋಪದೇಶ ನೀಡುವರು ಎಂದು ಅವರು ತಿಳಿಸಿದ್ದಾರೆ. ಗೌರವಾಧ್ಯಕ್ಷ ಗೋಪಾಲ ನಾಯಕ, ಕಾರ್ಯದರ್ಶಿ ಪ್ರಕಾಶ ಅಕ್ಕಲಕೋಟ, ವಿಕಾಸ ಪದಕಿ, ಪಂ. ವಾಸುದೇವಾಚಾರ್ಯ ಅಗ್ನಿಹೋತ್ರಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net