ಸರ್ಕಾರ ಮಾಡದ ಕಾರ್ಯ ಮಠಗಳು ಮಾಡುತ್ತಿವೆ

Mutts are doing what the government is not doing
ಆಲಮಟ್ಟಿ ಸಮೀಪದ ಚಿಮ್ಮಲಗಿ ಗ್ರಾಮ&2 ಅರಳಲೆ ಕಟ್ಟಿಮನಿ ಹಿರೇಮಠದಲ್ಲಿ ಹಮ್ಮಿಕೊಂಡಿದ್ದ ಧರ್ಮಸಭೆಯನ್ನು ಸಚಿವ ಶಿವಾನಂದ ಪಾಟೀಲ ಉದ್ಘಾಟಿಸಿದರು. ಜಯಶಾಂತಲಿಂಗ ಸ್ವಾಮೀಜಿ, ಕಲ್ಯಾಣ ಶ್ರೀಗಳು, ಬಸನಗೌಡ ನರಸನಗೌಡರ ಇತರರಿದ್ದರು.
Published on

ಆಲಮಟ್ಟಿ:  ಸರ್ಕಾರ ಮಾಡದ ಜನಪರ ಕಾರ್ಯ ವೀರಶೈವ ಲಿಂಗಾಯತ ಮಠಗಳು, ಮಠಾಧೀಶರು ಮಾಡುತ್ತಿದ್ದಾರೆ ಎಂದು ಕೃಷಿ ಮಾರುಕಟ್ಟೆ ಸಮಿತಿ ಸಚಿವ ಶಿವಾನಂದ ಪಾಟೀಲ ಹೇಳಿದರು.

ಚಿಮ್ಮಲಗಿ ಗ್ರಾಮ&2 ಅರಳಲೆ ಕಟ್ಟಿಮನಿ ಹಿರೇಮಠದಲ್ಲಿ ಲಿಂ.ನೀಲಕಂಠ ಶ್ರೀಗಳ ದ್ವೀತಿಯ ಪುಣ್ಯಸ್ಮರಣೆ, ಸಿದ್ಧ್ದರೇಣುಕ ಸ್ವಾಮೀಜಿ ಪ್ರಥಮ ಅನುಷ್ಠಾನ ಮಂಗಲೋತ್ಸವ ನಿಮಿತ್ತ ಹಮ್ಮಿಕೊಂಡಿದ್ದ ಧರ್ಮಸಭೆ ಹಾಗೂ ಸಾಮೂಹಿಕ ವಿವಾಹ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ವೀರಶೈವ ಲಿಂಗಾಯತ ಧರ್ಮ ಮಾನವೀಯ ಮೌಲ್ಯ ಬೋಧಿಸುತ್ತಿದೆ. ನಮ್ಮನ್ನು ನಾವು ಉಳಿಸಿಕೊಂಡು ಬೇರೆಯವರನ್ನು ಬೆಳೆಸಿದ ಪುಣ್ಯಭೂಮಿ ಈ ನಾಡಾಗಿದೆ ಎಂದರು.

ಜಾಲಹಳ್ಳಿಯ ಜಯಶಾಂತಲಿಂಗ ಸ್ವಾಮೀಜಿ ಮಾತನಾಡಿ, ಅನೇಕ ಧರ್ಮ,ಜಾತಿ, ಮತ, ಪಂಥಗಳ ಸಂಗಮವೇ ಭಾರತ. ಹೀಗಾಗಿ ಭಾರತ ಜಾತ್ಯತಿತ ರಾಷ್ಟ್ರವೆಂದು ಖ್ಯಾತಿ ಪಡೆದಿದೆ ಎಂದರು.

ಶ್ರೀಮಠದ ಸಿದ್ಧ್ಧರೇಣುಕ ಸ್ವಾಮೀಜಿ ನೇತೃತ್ವ ವಹಿಸಿದ್ದರು. ಬಳ್ಳಾರಿಯ ಕಲ್ಯಾಣ ಶ್ರೀಗಳು, ಬಸವನಬಾಗೇವಾಡಿಯ ಶಿವಪ್ರಕಾಶ ಶ್ರೀಗಳು, ಗುಂಡಕನಾಳದ ಗುರುಲಿಂಗ ಶ್ರೀಗಳು, ಗಿರಿಸಾಗರದ ರುದ್ರಮುನಿ ಶ್ರೀಗಳು, ಆಲಮೇಲದ ಚಂದ್ರಶೇಖರ ಶ್ರೀಗಳು, ಕನ್ನೂರಿನ ಸೋಮನಾಥ ಶ್ರೀಗಳು, ಮುತ್ತತ್ತಿಯ ಗುರುಲಿಂಗ ಶ್ರೀಗಳು, ಬಿಲ್​ಕೆರೂರಿನ ಸಿದ್ದಲಿಂಗ ಶ್ರೀಗಳು, ಮನಗೂಳಿಯ ಸಂಗನಬಸವ ಶ್ರೀಗಳು, ಇಟಗಿಯ ಗುರುಶಾಂತವೀರ ಶ್ರೀಗಳು ಸಾನ್ನಿಧ್ಯ ವಹಿಸಿದ್ದರು.

ಮುಖಂಡ ಬಸನಗೌಡ ನರಸನಗೌಡರ ಪ್ರಾಸ್ತಾವಿಕ ಮಾತನಾಡಿದರು. ಮಲ್ಲಿಕಾರ್ಜುನ ಬೆಳ್ಳುಬ್ಬಿ, ಡಾ.ವಿಜಯಕುಮಾರ ವಾರದ, ಶರಣಪ್ಪ ವಾರದ, ಎಸ್​.ಜಿ.ನಾಗಠಾಣ, ಶಿವಾನಂದ ಅವಟಿ, ಸಂಗಮೇಶ ಬಳಿಗಾರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net