

ಮುದ್ದೇಬಿಹಾಳ:ಮುಖ್ಯಮಂತ್ರಿ ಸಿದ್ದರಾಮಯ್ಯ ಮಹಿಳೆಯರ ಮತ ಸೆಳೆಯಲು ಗೃಹಲಕ್ಷಿ$್ಮ ಹೆಸರಿನಲ್ಲಿ ಮಹಿಳೆಯರಿಗೆ ಎರಡು ಸಾವಿರ ರೂ. ನೀಡುತ್ತಿದ್ದಾರೆ. ರಾಮಕಷ್ಣ ಹೆಗಡೆ, ಎಚ್.ಡಿ. ದೇವೇಗೌಡ ಅವರು ಮುಖ್ಯಮಂತ್ರಿಗಳಾಗಿದ್ದಾಗ ಜಾರಿಗೊಳಿಸಿದ್ದ ಯಾವ ಯೋಜನೆಗಳೂ ಮತಗಳಿಕೆಗೆ ಇರಲಿಲ್ಲ. ಜನರು ಹಣಕ್ಕಾಗಿ ಮತಗಳನ್ನು ಮಾರಿಕೊಳ್ಳಬಾರದೆಂದು ಮಾಜಿ ಸಚಿವ ಹನುಮಂತಪ್ಪ ಅಲ್ಕೋಡ ಹೇಳಿದರು.
ಇಲ್ಲಿನ ಎಪಿಎಂಸಿಯಲ್ಲಿರುವ ಸಭಾ ಭವನದಲ್ಲಿ ಗುರುವಾರ ಕರ್ನಾಟಕ ಮಾದಿಗ ಜನಸಂ ಹೋರಾಟ ಸಮಿತಿಯ ಮುದ್ದೇಬಿಹಾಳ ತಾಲೂಕು ಟಕದ ಪದಾಧಿಕಾರಿಗಳ ಪದಗ್ರಹಣ, ಜನಜಾಗೃತಿ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.
12ನೇ ಶತಮಾನದಲ್ಲಿ ಬಸವಣ್ಣನವರು ಶೋಷಿತ ವರ್ಗದವರ ಏಳಿಗೆಗೋಸ್ಕರ ಅನುಭವ ಮಂಟಪ ಎನ್ನುವ ಶರಣರ ಸಂಸತ್ತನ್ನು ರಚಿಸಿ ಶರಣರ ಸಂವಿಧಾನ ಜಾರಿಗೊಳಿಸಿದ್ದರು. ಇವತ್ತಿನ ಪರಿಸ್ಥಿತಿ ನೋಡಿದರೆ ಬಸವಣ್ಣನವರ ಅಂದಿನ ಸಂವಿಧಾನವೇ ಇಂದು ಇರಬೇಕಿತ್ತೇನೋ ಎಂದೆನಿಸುತ್ತಿದೆ ಎಂದರು.
ಮಾಜಿ ಶಾಸಕ ಹಾಲರವಿ ವೀರಭದ್ರಪ್ಪ ಮಾತನಾಡಿ, ಕಾಂಗ್ರೆಸ್ ಪ ಯಾವ ಸಮುದಾಯದವರ ಮತಗಳನ್ನು ಪಡೆದು ಅಧಿಕಾರಕ್ಕೆ ಬಂದಿದೆ ಅನ್ನೋದನ್ನು ನೆನಪಲ್ಲಿಟ್ಟುಕೊಳ್ಳಬೇಕು. ಅಧಿಕಾರಕ್ಕೆ ಬರುವುದಕ್ಕೂ ಮುನ್ನ ಶೋಷಿತ ಸಮಾಜಕ್ಕೆ ನೀಡಿದ ಭಾಷೆ ಮರೆತಿರುವ ಕಾಂಗ್ರೆಸ್ ಪಕ್ಕೆ ಶೋಷಿತ ಸಮುದಾಯದ ಋಣಭಾರ ಇದೆ ಎನ್ನುವುದನ್ನು ನಾಯಕತ್ವ ಹಿಡಿದವರು, ಸಿಎಂ ಖುರ್ಚಿಯಲ್ಲಿ ಕುಳಿತವರು ತಿಳಿದುಕೊಳ್ಳಬೇಕು ಎಂದರು.
ಸಮಿತಿ ಜಿಲ್ಲಾಧ್ಯ ಎಂ.ಆರ್. ದೊಡಮನಿ, ಡಿಎಸ್ಎಸ್ ಸಂಟನಾ ಸಂಚಾಲಕ ಹರೀಶ ನಾಟಿಕಾರ, ಮಾದಿಗ ಸಮಾಜದ ಹಿರಿಯ ಮುಖಂಡ ಹನಮಂತಗೌಡ ಬಿರಾದಾರ, ಸಮಿತಿ ಅಧ್ಯ ಪರಶುರಾಮ ರೋಣಿಹಾಳ ಮಾತನಾಡಿದರು.
ಡಿಎಸ್ಎಸ್ ರಾಜ್ಯ ಸಂಟನಾ ಸಂಚಾಲಕ ಡಿ.ಬಿ. ಮುದೂರ, ಎಪಿಎಂಸಿ ಮಾಜಿ ಉಪಾಧ್ಯ ಹಣಮಂತ ನಾಯಕಮಕ್ಕಳ, ಗಣ್ಯರಾದ ಸೋಮನಗೌಡ ಪಾಟೀಲ ನಡಹಳ್ಳಿ, ಸೋಮನಗೌಡ ಬಿರಾದಾರ ಕವಡಿಮಟ್ಟಿ, ಶಂಕರಗೌಡ ಶಿವಣಗಿ ಕಂದಗನೂರ, ರವಿ ನಾಯಕ, ಸುಭಾಸ ಕಟ್ಟಿಮನಿ, ಅಶೋಕ ಇರಕಲ್, ಪರಶುರಾಮ ನಾಲತವಾಡ, ರೇವಣೆಪ್ಪ ಅಜಮನಿ, ಭಗವಂತ ಕಬಾಡೆ ಉಪಸ್ಥಿತರಿದ್ದರು. ಜಿಲ್ಲಾ ಪರಿಶಿಷ್ಟ ಜಾತಿ ದೌರ್ಜನ್ಯ ನಿವಾರಣಾ ಸಮಿತಿ ಮಾಜಿ ಸದಸ್ಯ ಬಸವರಾಜ ಪೂಜಾರಿ ಸಿದ್ದಾಪುರ ಸ್ವಾಗತಿಸಿದರು. ಪರಶುರಾಮ ಕಪನೂರ ಕಾರ್ಯಕ್ರಮ ನಿರ್ವಹಿಸಿದರು.
ತಾಲೂಕು ಸಮಿತಿ ಅಧ್ಯ ಮುತ್ತಪ್ಪ ಮಾದರ, ಉಪಾಧ್ಯ ರಮೇಶ ದೊಡಮನಿ(ಕಂದಗನೂರ), ಪ್ರಧಾನ ಕಾರ್ಯದರ್ಶಿ ಲಕ್ಷ$್ಮಣ ಮಾದರ(ಕಾಳಗಿ), ಸಂಟನಾ ಕಾರ್ಯದರ್ಶಿ ಶಶಿಧರ ಹಳ್ಳೂರ, ಸಂಟನಾ ಸಂಚಾಲಕ ರಾವುತಪ್ಪ ಮಾದರ(ಕಾಳಗಿ), ಖಜಾಂಚಿ ದುರ್ಗಪ್ಪ ಮಾದರ(ಅಮರಗೋಳ), ಕಾರ್ಯದರ್ಶಿ ಶ್ರೀನಾಥ ಮಾದರ(ಅಮರಗೋಳ), ಸದಸ್ಯರಾದ ಹುಲಗಪ್ಪ ಮಾದರ(ಅಮರಗೋಳ), ಶ್ರೀಧರ ಮುದೂರ, ನಾಗರಾಜ ಸಂಗಮ, ಶಿವಪ್ಪ ಮಾದರ, ಪರಸಪ್ಪ ಮಾದರ, ಶಿವಪುತ್ರ ಪೂಜಾರಿ ಅವರಿಗೆ ಪದಗ್ರಹಣ ಮಾಡಲಾಯಿತು.