

ವಿಜಯಪುರ: ದೇವರು ಪ್ರತಿಯೊಂದು ಮಗುವಿನಲ್ಲಿ ಒಂದಿಲ್ಲೊಂದು ಕಲೆಯನ್ನು ಅಡಗಿಸಿಟ್ಟಿರುತ್ತಾನೆ. ಪೋಷಕರು ಮಕ್ಕಳಲ್ಲಿನ ಪ್ರತಿಭೆ ಗುರುತಿಸಲು ಮುಂದಾಗಬೇಕು ಎಂದು ಬ್ರಹ್ಮಕುಮಾರಿ ಶ್ರೀದೇವಿ ಅಕ್ಕನವರು ಹೇಳಿದರು.
ಗರದ ಪ್ರವಾಸೋದ್ಯಮ ಇಲಾಖೆ ಸರ್ಕಾರಿ ಆರ್ಟ್ ಗ್ಯಾಲರಿಯಲ್ಲಿ ಕರ್ನಾಟಕ ಲಲಿತಕಲಾ ಅಕಾಡೆಮಿ ಹಾಗೂ ಶ್ರೀ ರಾಜರಾಜೇಶ್ವರಿ ಮಹಿಳಾ ಕಲಾ ಸಂಗಳ ಸಂಯುಕ್ತಾಶ್ರಯದಲ್ಲಿ "ನಿಮ್ಮೊಂದಿಗೆ ನಾವು' ಶೀರ್ಷಿಕೆಯಡಿ ಇತ್ತೀಚೆಗೆ ಹಮ್ಮಿಕೊಂಡಿದ್ದ ಚಿತ್ರಕಲಾ ಪ್ರದರ್ಶನ ಮತ್ತು ಮಕ್ಕಳ ಶಿಬಿರ ಉದ್ಘಾಟಿಸಿ ಮಾತನಾಡಿದ ಅವರು, ಇಂತಹ ಕಾರ್ಯಕ್ರಮಗಳು ಹಮ್ಮಿಕೊಳ್ಳುವುದರಿಂದ ಕಲಾ ಲೋಕವು ಬೆಳೆಯಲಿದೆ ಎಂದರು.
ಮುಖ್ಯ ಅತಿಥಿ ಕಸಾಪ ಜಿಲ್ಲಾಧ್ಯಕ್ಷ ಹಾಸಿಂಪೀರ ವಾಲಿಕಾರ ಮಾತನಾಡಿ, ವಿಶ್ವಮಾನವರೆಲ್ಲ ಚಿತ್ರಕಲೆಯನ್ನು ಪ್ರೀತಿಸಿದ್ದರು. ರಾಜ ಮಹಾರಾಜರುಗಳೆಲ್ಲ ಚಿತ್ರಕಲೆಗೆ ಪ್ರಾಧಾನ್ಯತೆ ನೀಡಿದ್ದರು. ಸದ್ಯ ಶಾಲಾ&ಕಾಲೇಜುಗಳಲ್ಲಿ ಚಿತ್ರಕಲೆಯನ್ನು ರ್ನಿಲಸುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಕನ್ನಡ ಪ್ರಾಧಿಕಾರದ ಸದಸ್ಯೆ ದಾಾಯಿಣಿ ಹುಡೇದ ಮಾತನಾಡಿ, ಚಿತ್ರಕಲೆ ಮತ್ತು ಭಾಷೆ ಒಂದಕ್ಕೊಂದು ಪೂರಕವಾಗಿವೆ ಎಂದರು.
ಪ್ರವಾಸೋದ್ಯಮ ಇಲಾಖೆ ಉಪನಿರ್ದೇಶಕ ಮಲ್ಲಿಕಾರ್ಜುನ ಭಜಂತ್ರಿ. ಅಕಾಡೆಮಿಯ ಸದಸ್ಯ ಸಂಚಾಲಕಿ ರಾಜೇಶ್ವರಿ ಮೋಪಗಾರ ಮಾತನಾಡಿದರು. ಲಲಿತಾ ಬಳಗಾನೂರ, ಆನಂದ ಝಂಡೇ, ಬಸವರಾಜ ಪಾಟೀಲ ವೇದಿಕೆಯಲ್ಲಿದ್ದರು.
ಕನ್ನಡ ಮತ್ತು ಸಂಸತಿ ಇಲಾಖೆ ಸಹಾಯಕ ನಿರ್ದೇಶಕ ಸಂತೋಷ ಭೋವಿ, ಕರ್ನಾಟಕ ಲಲಿತಕಲಾ ಅಕಾಡೆಮಿ ಸದಸ್ಯ ಬಸವರಾಜ ಜಾನೆ ಮತ್ತು ವಿದ್ಯಾಧರ್ ಸಾಲಿ ಮಕ್ಕಳು ಮತ್ತು ಕಲಾವಿದರಿಗೆ ಪ್ರಮಾಣ ಪತ್ರ, ನೆನಪಿನ ಕಾಣಿಕೆ ನೀಡಿದರು. ಮಂಜುಳಾ ಜಾನಿ ಸ್ವಾಗತಿಸಿದರು. ಶಾಂತಾ ನೂಲವಿ ಪ್ರಾರ್ಥಿಸಿದರು. ಮಹಾದೇವಪ್ಪ ಮೋಪಗಾರ ನಿರೂಪಿಸಿದರು. ಶಬ್ಬೀರ ನದಾಫ ವಂದಿಸಿದರು.
ಅಮಿತ್ ಕಮ್ಮಾರ, ಶ್ರೀಶೈಲ ಹೂಗಾರ, ರವಿ ನಾಯಕ, ವಿಠಲ ಭೋವಿ, ಧನಲಕ್ಷಿ$್ಮ ದೊಡಮನಿ, ದಾಾಯಿಣಿ ಇಮ್ನದ, ರಾಜೇಶ್ವರಿ ಕೌಲಗಿ, ಮಲ್ಲಪ್ಪ ನಾಟೀಕಾರ, ವಿಜಯ ನಾಯಕ, ಸಿದ್ದು ಬಳೋಲಗಿಡದ, ಪ್ರಶಾಂತ ಮನಗೂಳಿ ಮತ್ತಿತರರಿದ್ದರು.