ಅಯ್ಯನಗುಡಿ ರಥೋತ್ಸವಕ್ಕೆ ಚಾಲನೆ

https://cdn.vvimgs.com/wp-content/uploads/2025/02/Drive-to-Ayyanagudi-Rathotsav.webp
ಅಪಾರ ಭಕ್ತರ ಸಮ್ಮುಖದಲ್ಲಿ ಅದ್ಧೂರಿಯಾಗಿ ಜರುಗಿದ ಅಯ್ಯನಗುಡಿಯ ರಥೋತ್ಸವ.
Published on

ನಾಲತವಾಡ: ಉತ್ತರ ಕರ್ನಾಟಕ ಭಾಗದ ಪ್ರಮುಖ ಉತ್ಸವಗಳಲ್ಲಿ ಒಂದಾದ ಅಯ್ಯನಗುಡಿ ಉತ್ಸವದ ರಥೋತ್ಸವಕ್ಕೆ ಸಹಸ್ರಾರು ಭಕ್ತರು ಸಾಯಾದರು.

ಅಯ್ಯನಗುಡಿ ಗ್ರಾಮದ ಗಂಗಾಧರೇಶ್ವರ ದೇವಸ್ಥಾನದಲ್ಲಿ ಬಲದಿನ್ನಿ ಧಣಿಗಳು ಹಾಗೂ ಶಾಸಕ ಸಿ.ಎಸ್​.ನಾಡಗೌಡ, ಅವರ ಸಹೋದರರು ಗಂಗಾಧರೇಶ್ವರನಿಗೆ ಸಾಮೂಹಿಕ ಪೂಜೆ ಸಲ್ಲಿಸಿ ರಥೋಥ್ಸವಕ್ಕೆ ಚಾಲನೆ ನೀಡಿದರು.

ನಂತರ ದೇಗುಲದ ಆವರಣದ ಮುಂಭಾಗದಲ್ಲಿ ಸಂಗಣ್ಣ ಪತ್ತಾರ ನೇತೃತ್ವ್ವದಲ್ಲಿ ಪುರವಂತಿಕೆ ನೆರವೇರಿತು. ಸುಮಾರು ಅರ್ಧ ಕಿ.ಮೀ ದೂರದ ಪಾದಗಟ್ಟೆಯವರೆಗೆ ಅಪಾರ ಭಕ್ತರು ರಥವನ್ನು ಎಳೆದರು.

ಭಕ್ತರು ರಂಗು ರಂಗಿನ ಸಿಡಿಮದ್ದು ಸುಡುವ ಕಾರ್ಯಕ್ರಮ ನಡೆಸಿಕೊಟ್ಟರು. ಅಪಾರ ಸಂಖ್ಯೆಯ ಭಕ್ತರ ಆಗಮನದ ಹಿನ್ನಲೆ ಅವಡ ಸಂಭವಿಸದಂತೆ ನಾಲತವಾಡ, ಮುದ್ದೇಬಿಹಾಳ ಪೊಲೀಸರು ಸೂಕ್ತ ಬಂದೋಬಸ್ತ್​ ಏರ್ಪಡಿಸಿದ್ದರು.

ಶಾಸಕ ಸಿ.ಎಸ್​.ನಾಡಗೌಡ ದಂಪತಿ, ಸೋಮಶೇಖರರಾವ್​ ನಾಡಗೌಡ, ಮುನ್ನಾಧಣಿ ನಾಡಗೌಡ, ಪೃಥ್ವಿರಾಜ ನಾಡಗೌಡ, ರಾಹುಲ್​ ನಾಡಗೌಡ, ಬಸವರಾಜ ನಾಡಗೌಡ ಹಾಗೂ ಗಣ್ಯರು, ಅಪಾರ ಭಕ್ತರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net