ಡಾ. ಎಸ್​.ಕೆ.ಕೊಪ್ಪ್ಪ ಅವರ ಬದುಕು - ಬರಹ ಮಾದರಿ

https://cdn.vvimgs.com/wp-content/uploads/2025/02/Dr.-SK-Koppas-Life-Writing-Sample.webp
ವಿಜಯಪುರದ ಡಾ.ಹಳಕಟ್ಟಿ ಸಂಶೋಧನ ಕೇಂದ್ರದಲ್ಲಿ ಆಯೋಜಿಸಿದ್ದ ಡಾ.ಎಸ್​.ಕೆ.ಕೊಪ್ಪ್ಪ ಅವರ ಬದುಕು&ಬರಹ ಕುರಿತ ವಿಚಾರ ಸಂಕಿರಣವನ್ನು ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಡಾ.ಡಿ.ವಿ.ಪರಶಿವಮೂರ್ತಿ ಉದ್ಘಾಟಿಸಿದರು. ಡಾ.ಎಸ್​.ಕೆ.ಕೊಪ್ಪ್ಪ್ಪ,ಡಾ.ಗುರುಪಾದ ಮರಿಗುದ್ದಿ, ಡಾ.ಎಂ.ಎಂ.ಪಡಶೆಟ್ಟಿ, ಡಾ. ಕೃಷ್ಣ್ಣಾ ಕೊಲ್ಹಾರ ಕುಲಕರ್ಣಿ, ಡಾ.ರವೀಂದ್ರನಾಥ.ಕೆ.ಇದ್ದರು.
Published on

ವಿಜಯಪುರ:ಡಾ.ಎಸ್​.ಕೆ.ಕೊಪ್ಪ್ಪ ಅವರ ಬದುಕು& ಸಾಹಿತ್ಯವು ನಾಡಿನ ಜನತೆಗೆ ಸಂದೇಶ ನೀಡುವಂತಹದು. ಅವರ ಶೋಧಿತ ಕೃತಿಗಳು ಶಾಸನ, ಸಂಶೋಧನೆ, ಸಂಸತಿ ಮತ್ತು ಹೋರಾಟದ ಅಂಶಗಳನ್ನೊಳಗೊಂಡಿರುತ್ತವೆ ಎಂದು ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಡಾ.ಡಿ.ವಿ.ಪರಶಿವಮೂರ್ತಿ ಹೇಳಿದರು. ನಗರದ ಡಾ..ಗು.ಹಳಕಟ್ಟಿ ಸಂಶೋಧನ ಕೇಂದ್ರದಲ್ಲಿ ಆಯೋಜಿಸಿದ್ದ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದರು.

ಡಾ.ಎಸ್​.ಕೆ.ಕೊಪ್ಪ ಮಾತನಾಡಿ, ಡಾ.ಎಂ.ಎಂ.ಕಲಬುರಗಿ, ಪ್ರೊ. ಎ.ಎಸ್​.ಹಿಪ್ಪರಗಿ, ಪ್ರೊ. ಎನ್​.ಜಿ.ಕರೂರಂತವರಿಂದ ಹೆಚ್ಚು ಕಲಿಯಲು ಸಾಧ್ಯವಾಯಿತು. ಪರಿಸರವು ಕೂಡಾ ನನಗೆ ಅಧ್ಯಯನ ಮಾಡಲು ಅನುಕೂಲಕರವಾಗಿತ್ತು ಎಂದರು.

ಡಾ.ಗುರುಪಾದ ಮರಿಗುದ್ದಿ, ಡಾ.ಎಂ.ಎಂ.ಪಡಶೆಟ್ಟಿ, ಡಾ.ಕೃಷ್ಣ್ಣಾ ಕೊಲ್ಹಾರ ಕುಲಕರ್ಣಿ, ಡಾ.ರವೀಂದ್ರನಾಥ.ಕೆ.ಮಾತನಾಡಿದರು.

ಡಾ.ಸಿದ್ದಣ್ಣ ಉತ್ನಾಳ, ಡಾ.ಎಂ.ಎಸ್​.ಮಾಗಣಗೇರಿ, ಡಾ.ಉಷಾದೇವಿ ಹಿರೇಮಠ, ಡಾ.ವಿ.ಎಂ.ಬಾಗಾಯತ, ಡಾ.ಚೈತನಾ ಸಂಕೊಂಡ, ಶಾರದಾ ಐಹೊಳ್ಳಿ, ಡಾ.ವಿ.ಡಿ.ಐಹೊಳ್ಳಿ, ಪ್ರೊ. ಎನ್​.ಜಿ.ಕರೂರ, ವಿ.ಸಿ.ನಾಗಠಾಣ, ಸಹದೇವ ನಾಡಗೌಡ, ಪ್ರೊ. ಎನ್​.ಬಿ.ದೊಡಮನಿ, ಎಸ್​.ಎನ್​.ಶಿವಣಗಿ, ಎಸ್​.ವೈ.ಗದಗ, ಮಹಾದೇವ ಹಾಲಳ್ಳಿ, ಕೆ.ಎಸ್​.ಬಿರಾದಾರ, ಸುಭಾಷ್​ ಕನ್ನೂರ, ಕಣಬೂರ, ಸಕ್ರಿ, ಎನ್​.ಕೆ.ಕುಲಕರ್ಣಿ, ಪಿ.ಎಸ್​.ಕನಮಡಿ, ಡಾ. ಶಿರಹಟ್ಟಿ, ಎಸ್​.ಎಸ್​.ಮಜ್ಜಗಿ, ಎಂ.ಐ.ಮದಭಾವಿ, ಡಾ.ಎಸ್​.ಎಸ್​.ತರಡಿ ಉಪಸ್ಥಿತರಿದ್ದರು.

ಬಿ.ಎಂ.ಪಾಟೀಲ ವಚನಗಾಯನ ಮಾಡಿದರು. ಡಾ. ಎಂ.ಎಸ್​.ಮದಭಾವಿ ಪ್ರಾಸ್ತಾವಿಕ ಮಾತನಾಡಿದರು. ಮನು ಪತ್ತಾರ ವಂದಿಸಿದರು. ಪ್ರೊ. ಅಮರೇಶ ಸಾಲಕ್ಕಿ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net