

ಮುದ್ದೇಬಿಹಾಳ: ವಿಜಯಪುರದಲ್ಲಿ ಹಮ್ಮಿಕೊಂಡಿರುವ 20ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಆಮಂತ್ರಣ ಪತ್ರಿಕೆಯಲ್ಲಿ ಮುದ್ದೇಬಿಹಾಳ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯರ ಹೆಸರು ಹಾಕದೆ ಕಸಾಪ ಜಿಲ್ಲಾಧ್ಯ ಹಾಸಿಂಪೀರ ವಾಲೀಕಾರ ಸಣ್ಣತನ ತೋರಿದ್ದಾರೆ ಎಂದು ಮುದ್ದೇಬಿಹಾಳ ತಾಲೂಕಿನ ಸಾಹಿತಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಶನಿವಾರ ಸಭೆ ಸೇರಿದ್ದ ತಾಲೂಕಿನ ಸಾಹಿತಿಗಳು ಕಳೆದ ವಾರವಷ್ಟೆ ಇಡೀ ತಾಲೂಕು 5ನೇ ಕನ್ನಡ ಸಾಹಿತ್ಯ ಸಮ್ಮೇಳನ ಆಯೋಜಿಸಿ ಯಶಸ್ವಿಗೊಳಿಸಿದ ಅಧ್ಯ ಕಾಮರಾಜ ಬಿರಾದಾರ ಅವರ ಹೆಸರನ್ನು ತಾಲೂಕು ಸಾಹಿತ್ಯ ಪರಿಷತ್ ಅಧ್ಯರ ಯಾದಿಯಿಂದ ಹೊರಗಿಟ್ಟು ಜಿಲ್ಲಾಧ್ಯರು ಸಣ್ಣತನ ಮೆರೆದಿದ್ದಾರೆ. ಅಲ್ಲದೇ ಜಿಲ್ಲಾ ಸಮ್ಮೇಳನದ ಆಮಂತ್ರಣ ಪತ್ರಿಕೆಯಲ್ಲಿ ಮುದ್ದೇಬಿಹಾಳ ತಾಲೂಕಿನ ಸಾಹಿತಿಗಳು ಮತ್ತು ಸಂಟಕರ ಹೆಸರುಗಳನ್ನು ಪರಿಗಣಿಸುವಲ್ಲೂ ತಾಲೂಕು ಅಧ್ಯರ ಶಿಾರಸ್ಸುಗಳನ್ನು ಪಡೆಯದೇ ತಮಗೆ ಇಷ್ಟ ಬಂದವರಿಗೆ ಪದೇ ಪದೇ ಅವಕಾಶ ನೀಡಿ ಸ್ವಜನಪಪಾತ ತೋರಿ ನೈಜ ಪ್ರತಿಭಾವಂತ ಸಾಹಿತಿಗಳಿಗೆ ಅವಮಾನಿಸುತ್ತಿದ್ದಾರೆ ಎಂದು ಸಾಹಿತಿಗಳು ದೂರಿದರು.
ಹಿರಿಯ ಸಾಹಿತಿಗಳಾದ ಅಶೋಕಮಣಿ, ಅಬ್ದುಲ್ ರೆಹಮಾನ ನಾಯ್ಕೋಡಿ, ಐ.ಬಿ. ಹಿರೇಮಠ, ರುದ್ರೇಶ ಕಿತ್ತೂರ, ಎಂ.ಬಿ. ಗುಡಗುಂಟಿ, ಸಿದ್ದನಗೌಡ ಬಿಜ್ಜೂರ, ಹುಸೇನಮುಲ್ಲಾ ಕಾಳಗಿ, ಸಂಗಮೇಶ ಶಿವಣಗಿ, ಬಸವರಾಜ ನಾಲತವಾಡ, ವೈ.ಎಚ್. ವಿಜಯಕರ, ಜಹಾಂಗೀರ ಮುಲ್ಲಾ, ಸಿದ್ದಣ್ಣ ಹಡಲಗೇರಿ, ಶಿವಪುತ್ರ ಅಜಮನಿ ಇದ್ದರು