ಹಿರೇರೂಗಿ ಗ್ರಾ.ಪಂ.ಗೆ ಅತ್ಯುತ್ತಮ ಗ್ರಾಮ ಪಂಚಾಯಿತಿ ಪ್ರಶಸ್ತಿ

Best Gram Panchayat Award for Hirerugi Gram.Pt
ನರೇಗಾ ಯೋಜನೆಯ ರಾಜ್ಯ ಮಟ್ಟದ ಅತ್ಯುತ್ತಮ ಗ್ರಾಮ ಪಂಚಾಯಿತಿ ಪ್ರಶಸ್ತಿಯನ್ನು ಗ್ರಾ.ಪಂ ಅಧ್ಯೆ ಸೊಮವ್ವ ಯಶವಂತ ಹೊಸಮನಿ ಅವರಿಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್​ ರಾಜ್​ ಇಲಾಖೆ ಸಚಿವ ಪ್ರಿಯಾಂಕ್​ರ್ಖಗೆ ನೀಡಿದರು.
Published on

ಇಂಡಿ: ನರೇಗಾ ಯೋಜನೆಯಡಿ ಉತ್ತಮ ಕಾರ್ಯ ನಿರ್ವಹಿಸಿದಕ್ಕಾಗಿ ತಾಲೂಕಿನ ಹಿರೇರೂಗಿ ಗ್ರಾಮ ಪಂಚಾಯಿತಿ ಆಯ್ಕೆಯಾಗಿದೆ.

ಬೆಂಗಳೂರಿನ ಡಾ. ಬಿ.ಆರ್​.ಅಂಬೇಡ್ಕರ್​ ಭವನದಲ್ಲಿ ಬುಧವಾರ ಜರುಗಿದ ನರೇಗಾ ಹಬ್ಬ&2025 ಕಾರ್ಯಕ್ರಮದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್​ ರಾಜ್​ ಇಲಾಖೆ ಸಚಿವ ಪ್ರಿಯಾಂಕ್​ರ್ಖಗೆ ಅವರು ಗ್ರಾಪಂ ಅಧ್ಯೆ ಸೊಮವ್ವ ಯಶವಂತ ಹೊಸಮನಿ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿದರು.

ತಾಪಂ ಸಹಾಯಕ ನಿರ್ದೇಶಕ ಸಂಜಯ ಖಡಗೇಖರ, ಗ್ರಾ.ಪಂ. ಪಿಡಿಒ ಬಸವರಾಜ ಬಬಲಾದ, ಟಿಐಇಸಿ ರಾಮನಗೌಡ ಸರಬಡಗಿ, ತಾಂತ್ರಿಕ ಸಹಾಯಕ ಈರಣ್ಣ ಇಂಡಿ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net