

ಇಂಡಿ: ತಾಲೂಕಿನಲ್ಲಿ ಗ್ರಾಮೀಣ ಭಾಗದಲ್ಲಿ ಸಿಂಗಲ್ ೇಜ್ ವಿದ್ಯುತ್ ನೀಡುತ್ತಿದ್ದು, ಮನೆಗಳಲ್ಲಿ ಬಲ್ಬ್ ಕೂಡ ಹತ್ತುತ್ತಿಲ್ಲ. ಹೀಗಾಗಿ ತೊಂದರೆಯಾಗುತ್ತಿದೆ. ಸಮರ್ಪಕ ವಿದ್ಯುತತ ಕೊಡುವಂತೆ ಆಗ್ರಹಿಸಿ ರೈತರು ಹೆಸ್ಕಾ ಕಚೇರಿ ಎದುರು ಶುಕ್ರವಾರ ಪ್ರತಿಭಟನೆ ನಡೆಸಿ ಹೆಸ್ಕಾ ಎಇಇ ಸಂಗಮೇಶ ಮೆಂಡೆಗಾರಗೆ ಮನವಿ ಸಲ್ಲಿಸಿದರು.
ಮುಖಂಡ ಬಸವರಾಜ ಪಾಟೀಲ ಹಂಜಗಿ, ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳ ಪರೀೆಗಳು ಸಮೀಪಿಸುತ್ತಿರುವದರಿಂದ ಗ್ರಾಮೀಣ ಪ್ರದೇಶದಲ್ಲಿ ಮಕ್ಕಳು ದೀಪದ ಕೆಳಗೆ ಓದುವ ಪರಿಸ್ಥಿತಿ ಬಂದಿದೆ. ಹೀಗಾಗಿ ಶಾಲಾ ಮಕ್ಕಳಿಗೆ ತೊಂದರೆ ಯಾಗುತ್ತಿದೆ. ಸಮರ್ಪಕ ವಿದ್ಯುತ್ ನೀಡಬೇಕು ಎಂದು ಆಗ್ರಹಿಸಿದರು.
ಕೆಂಚಪ್ಪ ನಿಂಬಾಳ, ಸಂಗಮೇಶ ಮೆಂಡೆಗಾರ, ಜಟ್ಟೆಪ್ಪ ಸಾಲೋಟಗಿ, ಲಾಯಪ್ಪ ಉಪ್ಪಾರ, ಸುರೇಶ ಜೇವೂರ, ಹಣಮಂತ ಮಸಳಿ, ಶರಣಪ್ಪ ಗುಂದಗಿ, ಗುರಪ್ಪ ಅಗಸರ, ರಮೇಶ ದಳವಾಯಿ, ಬಾಳು ಕೊಟಗೊಂಡ, ಶ್ರೀಮಂತ ಉಪ್ಪಾರ, ಸಿದ್ದಪ್ಪ ಕರಂಡೆ, ದಯಾನಂದ ಕಂಟಗೊಂಡ, ಜಟ್ಟೆಪ್ಪ ತಳವಾರ ಸೇರಿದಂತೆ ಅಂಜುಟಗಿ, ಹಿರೇರೂಗಿ, ತಡವಲಗಾ, ಹಂಜಗಿ ಗ್ರಾಮದ ಗ್ರಾಮಸ್ಥರು ಹಾಗ ರೈತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.