ಕ್ಷೀಣಿಸುತ್ತಿರುವ ಸಾಮರಸ್ಯದ ಜೀವನ

A life of declining harmony
Published on

ತಾಳಿಕೋಟೆ: ಇಂದಿನ ವಿಷಮ ಸ್ಥಿತಿಯಲ್ಲಿ ಸಾಮರಸ್ಯದ ಜೀವನ ಣಿಸುತ್ತಿದೆ ಎಂದು ಸಕ್ಕರೆ, ಕಬ್ಬು ಅಭಿವೃದ್ಧಿ, ಕೃಷಿ ಉತ್ಪನ್ನ ಮಾರುಕಟ್ಟೆ ಹಾಗೂ ಜವಳಿ ಸಚಿವ ಶಿವಾನಂದ ಪಾಟೀಲ ಕಳವಳ ವ್ಯಕ್ತಪಡಿಸಿದರು.

ಪಟ್ಟಣದ ಶರಣಮುತ್ಯಾ ಮಂದಿರದ ಆವರಣದಲ್ಲಿ ಜಮಾತೆ ಇಸ್ಲಾಮಿ ಹಿಂದ್​ ಹಮ್ಮಿಕೊಂಡಿದ್ದ ಸಾರ್ವಜನಿಕ ಕುರಾನ್​ ಪ್ರವಚನದಲ್ಲಿ ಪಾಲ್ಗೊಂಡು ಮಾತನಾಡಿದ ಸಚಿವರು, ಭಾರತದಲ್ಲಿ ಸಾಕಷ್ಟು ಜಾತಿಗಳಿದ್ದರೂ ಪರಸ್ಪರ ಪ್ರೀತಿಯಿಂದ ಬಾಳುವ ಸಂಪ್ರದಾಯವಿತ್ತು. ಇತ್ತೀಚಿನ ದಿನಗಳಲ್ಲಿ ಸಾಮರಸ್ಯ ಜೀವನ ಕಣ್ಮರೆಯಾಗುತ್ತಿದೆ ಎಂದರು.

ಜಮಾತೆ ಇಸ್ಲಾಮಿ ಹಿಂದ್​ ರಾಜ್ಯ ಕಾರ್ಯದರ್ಶಿ,ಮಂಗಳೂರಿನ ಶಾಂತಿ ಪ್ರಕಾಶನದ ವ್ಯವಸ್ಥಾಪಕ ಮಹ್ಮದ್​ ಕುಂಞ ಅವರು ಕುರಾನ್​ ಪ್ರವಚನ ನೀಡಿ, ಕುಟುಂಬ ಚೆನ್ನಾಗಿದ್ದರೆ ಆರೋಗ್ಯಪೂರ್ಣ ಸಮಾಜ ನಿಮಾಣವಾಗುತ್ತದೆ. ಕುಟುಂಬದಲ್ಲಿ ಬಿರಕು ಬಿಟ್ಟರೆ ಸಮಾಜ ಒಡೆಯುತ್ತದೆ. ಸುಭದ್ರ ಕುಟುಂಬದಿಂದ ಸದೃಢ ಸಮಾಜ ಕಟ್ಟಬಹುದು ಎಂದರು.

ತಂದೆ&ತಾಯಿಯನ್ನು ಮನೆಯಿಂದ ಹೊರಹಾಕುವ ಮಕ್ಕಳ ಸಂಖ್ಯೆ ಬೆಳೆಯುತ್ತಿರುವುದು ಆತಂಕಕಾರಿ ಸಂಗತಿ. ಮಾನವನ ಇತಿಹಾಸ ಆರಂಭ ಕುಟುಂಬದೊಂದಿಗೆ ಆಗಿದೆ ಎಂದು ಕುರಾನ್​ ಉಲ್ಲೇಖಿಸುತ್ತದೆ ಎಂದರು.

ತಾಯಿ ಹಾಲಿಗಿಂತ ಶಕ್ತಿಶಾಲಿ ಆಹಾರ ಬೇರೊಂದಿಲ್ಲ. ದೇವರ ಮೇಲೆ ಭಕ್ತಿಯಿರಲಿ. ನಾವು ಮಾಡುವ ಕೆಲಸದಲ್ಲಿ ಶ್ರದ್ಧೆ ಇರಲಿ, ತಂದೆ, ತಾಯಿ, ಗುರು ಹಿರಿಯರನ್ನು ಗೌರವಿಸುವ ಸಂಸತಿ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಖಾಸ್ಗತೇಶ್ವರ ಮಠದ ಬಾಲ ಶಿವಯೋಗಿ ಸಿದ್ದಲಿಂಗ ದೇವರು ಮಾತನಾಡಿ, ಜಗತ್ತಿನಲ್ಲಿ ಪ್ರೀತಿ ಹಂಚಿದವರು ದೊಡ್ಡವರಾಗಿದ್ದಾರೆ ಎಂದರು.

ನಾವದಗಿಯ ರಾಜೇಂದ್ರ ಒಡೆಯರ ಶಿವಾಚಾರ್ಯ ಸ್ವಾಮಿಗಳು, ಚಬನೂರ ರಾಮಲಿಂಗಯ್ಯ ಶ್ರೀಗಳು ಮಾತನಾಡಿದರು. ಜಮಾತೆ ಇಸ್ಲಾಮಿ ಹಿಂದ್​ ಜಿಲ್ಲಾ ಸಂಚಾಲಕ ಮೌಲಾನಾ ಅಬ್ದುಲ್​ಖಾದರ ಅಧ್ಯತೆ ವಹಿಸಿದ್ದರು.

ಸಾಂಬ ಪ್ರಭು ಶರಣಮುತ್ಯಾ ದೇವಸ್ಥಾನದ ಶರಣಪ್ಪ ಮುತ್ಯಾ ಶರಣರು, ಮುಸ್ಲಿಂ ಧಾರ್ಮಿಕ ಮುಖಂಡ ಸೈಯದ್​ ಶಕೀಲ ಅಹ್ಮದ ಖಾಜಿ, ಪುರಸಭೆ ಅಧ್ಯೆ ಜುಬೇದಾ ಜಮಾದಾರ, ಕೆಪಿಸಿಸಿ ಸದಸ್ಯ ಬಿ.ಎಸ್​.ಪಾಟೀಲ(ಯಾಳಗಿ), ಎಂ.ಕೆ.ಚೋರಗಸ್ತಿ, ಸಿದ್ದನಗೌಡ ಪಾಟೀಲ, ವಿಜಯಸಿಂಗ್​ ಹಜೇರಿ, ವಿ.ಸಿ.ಹಿರೇಮಠ, ಕಾಶಿನಾಥ ಮುರಾಳ, ಎಂ.ಕೆ.ಪಟ್ಟಣಶೆಟ್ಟಿ, ಪರಶುರಾಮ ತಂಗಡಗಿ, ಅರವಿಂದ ಹಂಚಾಟೆ, ಅಸ್ಕಿ ಫೌಂಡೇಷನ್​ ಅಧ್ಯ ಸಿ.ಬಿ.ಅಸ್ಕಿ, ಇಬ್ರಾಹಿಂ ಮನ್ಸೂರ, ಅಬ್ದುಲ್​ರಜಾಕ ಮನಗೂಳಿ, ಅಬ್ದುಲ್​ರಜಾಕ ನಾಲತವಾಡ, ಡಾ.ನಜೀರ ಕೊಳ್ಯಾಳ, ಅಬ್ದುಲ್​ಗನಿ ಲಾಹೋರಿ, ಕಾಶಿಮ ಪಟೇಲ ಪಾಟೀಲ, ಕಾಶಿಮ ಅಲಿ ಮನ್ಸೂರ, ಹಸನಸಾಬ ಮನಗೂಳಿ, ಮುನ್ನಾ ಬಾಗವಾನ, ಸೈಯದ್​ ಇಾರ್ನ ಖಾಜಿ, ಹುಸೇನ ಪಟೇಲ ಉಪಸ್ಥಿತರಿದ್ದರು.

ಹಾಪೀಜ್​ಮುನ್ನಾ ಬಾಗವಾನ ಕುರಾನ್​ ಪಠಿಸಿದರು. ಶೋಯಬ್​ ಕೊರ್ತಿ ಸ್ವಾಗತಿಸಿದರು. ಜಮಾತೆ ಇಸ್ಲಾಮಿ ಹಿಂದ್​ ತಾಲೂಕು ಅಧ್ಯ ಮುಜಾಹಿದ್​ ನಮಾಜಕಟ್ಟಿ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net