ಓದು ನಿಂತ ನೀರಲ್ಲ, ಹರಿಯುವ ಸಾಗರ

Reading is not a stagnant water, but a flowing ocean
ವಿಜಯಪುರ ಸದಾಶಿವ ನಗರದಲ್ಲಿನ ಕಿತ್ತೂರು ರಾಣಿ ಚನ್ನಮ್ಮ ಸಭಾಭವನದಲ್ಲಿ ವಿಜಯವಾಣಿ ಹಮ್ಮಿಕೊಂಡಿದ್ದ ಎಜುಕೇಷನ್​ ಎಕ್ಸಪೋ ದಲ್ಲಿ ಎಕ್ಸೆಲ್​ ಅಕಾಡೆಮಿಯ ಅಕಾಡೆಮಿಕ ಕೋ ಆರ್ಡಿನೇಟರ್​ ದಯಾನಂದ ಎ.ಆರ್​ ಮಾತನಾಡಿದರು.
Published on

ವಿಜಯಪುರ: ಓದು ನಿಂತ ನೀರಾಗಬಾರದು, ಹರಿಯುವ ಸಾಗರವಾಗಬೇಕು ಎಂದು ಎಕ್ಸೆಲ್​ ಅಕಾಡೆಮಿ ಕೋ&ಆರ್ಡಿನೇಟರ್​ ದಯಾನಂದ ಎ.ಆರ್​. ಹೇಳಿದರು.

ನಗರದ ಸದಾಶಿವ ನಗರದಲ್ಲಿನ ಕಿತ್ತೂರು ರಾಣಿ ಚನ್ನಮ್ಮ ಸಭಾಭವನದಲ್ಲಿ ವಿಜಯಪುರದ ಎಕ್ಸಲೆಂಟ್​ ಸಮೂಹ ಸಂಸ್ಥೆ ಪ್ರಮುಖ ಪ್ರಾಯೋಜಕತ್ವ ಹಾಗೂ ಧಾರವಾಡದ ಕರ್ನಾಟಕ ಬಾಲ ವಿಕಾಸ ಅಕಾಡೆಮಿ ಸಹಯೋಗದಲ್ಲಿ ವಿಜಯವಾಣಿ ಎರಡು ದಿನ ಹಮ್ಮಿಕೊಂಡಿರುವ ಎಜುಕೇಶನ್​ ಎಕ್ಸ್​ಪೋದಲ್ಲಿ ಮೊದಲ ದಿನ ಬುಧವಾರ ನಡೆದ ಎಸ್​ಎಸ್​ಎಎಲ್​ಸಿ ವಿದ್ಯಾರ್ಥಿಗಳಿಗೆ ವಿಶೇಷ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ಪರೀೆ ಬರೆಯಲು ಭಯಪಡಬಾರದು.

ಪರೀೆಯನ್ನು ಹಬ್ಬದಂತೆ ಸಂಭ್ರಮಿಸಬೇಕು. ಹಾಗೆ ಸಂಭ್ರಮಿಸಬೇಕಾದರೆ ಪೂರ್ವ ಸಿದ್ಧತೆ ಮಾಡಿಕೊಳ್ಳುವುದು ಅಗತ್ಯ ಎಂದರು.

ಜಾತ್ರೆ, ಹಬ್ಬ ಆಚರಿಸಬೇಕಾದರೆ ಸವಿಯಾದ ಅಡುಗೆ ಸಿದ್ಧಪಡಿಸುವುದು ಅಗತ್ಯ. ಹಾಗೆಯೇ ಪರೀೆ ಎಂಬ ಹಬ್ಬದಲ್ಲಿ ಸಂಭ್ರಮಿಸಬೇಕಾದರೆ ಪೂರ್ವ ಸಿದ್ಧತೆ ಮಾಡಿಕೊಳ್ಳುವುದು ಅಷ್ಟೇ ಅಗತ್ಯವಾಗಿದೆ. ತಯಾರಿ ಇಲ್ಲದ ಪರೀೆ ಅಡುಗೆ ಇಲ್ಲದ ಹಬ್ಬದಂತೆ ಎಂದರು.

ಕುದುರೆ ರೇಸ್​ ಕಥೆ ಹೇಳಿದ ಅವರು, ವಿಶ್ವ ರೇಸ್​ ಸ್ಪರ್ಧೆಯಲ್ಲಿ ಒಂದು ಕುದುರೆ ಚಾಂಪಿಯನ್​ ಆಯಿತು. ಮತ್ತೆ ಎರಡು ವರ್ಷದ ನಂತರ ಮತ್ತೊಂದು ರೇಸ್​ ಸ್ಪರ್ಧೆ ಬಂದಿತು. ವಿಶ್ವ ಚಾಂಪಿಯನ್​ ಪಡೆದ ಕುದುರೆ ಈ ಸಲ ಕೊನೆ ಸ್ಥಾನದಲ್ಲಿತ್ತು. ಯಾಕೆ ಹೀಗಾಯಿತು ಎಂದು ಕುದುರೆ ಆರೋಗ್ಯ ತಪಾಸಿಸಿದಾಗ ಆರೋಗ್ಯ ಸ್ಥಿರವಿರುವುದು ಕಂಡು ಬಂದಿತು. ಹಿನ್ನಡೆಗೆ ಕಾರಣ ಹುಡುಕುತ್ತ ಹೋದಾಗ ಪ್ರಮುಖ ಅಂಶ ಗೊತ್ತಾಯಿತು. ಅದೇನೆಂದರೆ ಕುದುರೆಗೆ ಕೋಚ್​ ಇರಲಿಲ್ಲ. ಅದರ ಸುತ್ತ ಬರೀ ಕ್ಯಾಮರಾಮನ್​ಗಳಿದ್ದರು. ಎಷ್ಟೇ ಎತ್ತರಕ್ಕೆ ಬೆಳೆದರೂ ಜ್ಞಾನ ಸಂಪಾದನೆ ನಿಲ್ಲಿಸಬಾರದು ಎಂಬುದು ಈ ಕಥೆ ಸಾರಾಂಶ ಎಂದರು.

ವಿದ್ಯಾರ್ಥಿಗಳು ಹತ್ತನೇ ತರಗತಿಯಲ್ಲಿ ಟಾಪ್​ ಬಂದಾಗ ಓದು ನಿಲ್ಲಿಸಿದರೆ ಮುಂದೆ ಪಿಯುಸಿಯಲ್ಲಿ ೇಲಾಗಬೇಕಾಗುತ್ತದೆ. ಓದು ನಿರಂತರವಾಗಿರಬೇಕು. ಕುದುರೆಗೆ ಕೋಚ್​ ಇದ್ದಂತೆ ವಿದ್ಯಾರ್ಥಿಗಳಿಗೆ ಶಿಕ್ಷಕರ ಅಗತ್ಯವಿದೆ. ನಾನು ಟಾಪರ್​ ಆಗಿರುವೆ. ನನಗೆ ಶಿಕ್ಷಕರ ಅಗತ್ಯವಿಲ್ಲ ಎಂದು ಭಾವಿಸಿದರೆ ೇಲಾಗಬೇಕಾಗುತ್ತದೆ. ವಿದ್ಯಾರ್ಥಿಗಳಿಗೆ ಶಿಕ್ಷಕರ ಮಾರ್ಗದರ್ಶನ ಅಗತ್ಯ ಮತ್ತು ಅನಿವಾರ್ಯ ಎಂದು ಕಿವಿಮಾತು ಹೇಳಿದರು.

ಕಠಿಣ ಪರಿಶ್ರಮ ಒಂದೇ ಸಾಧನೆಗೆ ಪ್ರಮುಖವಲ್ಲ. ಅದರ ಜತೆಗೆ ಬುದ್ಧಿವಂತಿಕೆ ಕೂಡ ಬೇಕು. ಶಾಲೆಯಲ್ಲಿ ಟಾಪರ್​ಗಿಂತ ನನ್ನ ಅರ ಶುದ್ಧವಿದೆ. ಗಣಿತದಲ್ಲಿ ನಾನೇ ಲೇಸು, ವ್ಯಾಕರಣದಲ್ಲಿ ಆತನಿಗಿಂತ ನಾನೇ ಉತ್ತಮ, ಆದರೂ ನಾನು ಟಾಪರ್​ ಆಗುತ್ತಿಲ್ಲ ಎಂದು ಎಷ್ಟೋ ವಿದ್ಯಾರ್ಥಿಗಳು ಚಿಂತಿಸುತ್ತಿರುತ್ತಾರೆ.

ಎಲ್ಲದರಲ್ಲೂ ಮುಂದೆ ಇದ್ದು ಓದದಿದ್ದರೆ ಪ್ರಯೋಜನವಿಲ್ಲ. ನಾನು ದಡ್ಡ ಎಂದು ನಮ್ಮ ಬಗ್ಗೆ ನಮಗೆ ಕೀಳರಿಮೆ ಇರಬಾರದು. ನಾನು ಯಾರಿಗೂ ಕಡಿಮೆ ಇಲ್ಲ ಎಂಬ ಭಾವನೆ ಬರಬೇಕು ಎಂದು ಸಲಹೆ ನೀಡಿದರು. ಮಕ್ಕಳಲ್ಲಿ ಸಾಧಿಸುವ ಛಲವಿರಬೇಕು. ಉತ್ತಮ ಕನಸು ಕಾಣಬೇಕು. ಬರೀ ಕನಸು ಕಾಣುತ್ತ ಮಲಗಿದರೆ ಸಾಲದು, ಕಂಡ ಕನಸು ನನಸಾಗಿಸಲು ನಿರಂತರ ಪ್ರಯತ್ನಿಸಬೇಕು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net