ಅವಕಾಶ ನಮಗಾಗಿ ಕಾಯುವುದಿಲ್ಲ

Opportunity does not wait for us
ವಿಜಯಪುರದ ಪಿಡಿಜೆ ಕಾಲೇಜಿನಲ್ಲಿ ಶುಕ್ರವಾರ ಆಯೋಜಿಸಿದ್ದ ಮಾಧ್ಯಮಿಕ ಶಾಲೆ ವಾಷಿಕೋತ್ಸವದಲ್ಲಿ ಹೆಚ್ಚು ಅಂಕ ಪಡೆದ
Published on

ವಿಜಯಪುರ: ಅವಕಾಶಕ್ಕಾಗಿ ನಾವು ಕಾಯಬೇಕೆ ವಿನ: ಅದು ನಮಗಾಗಿ ಕಾಯುವುದಿಲ್ಲ. ಸಾಕಷ್ಟು ಸಮಯ ಕಾಯ್ದ ನಂತರ ಸಿಗುವ ಅವಕಾಶವನ್ನು ಚೆನ್ನಾಗಿ ಬಳಸಿಕೊಳ್ಳಬೇಕು ಎಂದು ೇತ್ರ ಶಿಣಾಧಿಕಾರಿ ಬಸವರಾಜ ತಳವಾರ ಸಲಹೆ ನೀಡಿದರು.

ಶುಕ್ರವಾರ ಬಿಡಿಈ ಸಂಸ್ಥೆಯ ಪಿಡಿಜೆ ಪದವಿಪೂರ್ವ ಕಾಲೇಜಿನ ಮಾಧ್ಯಮಿಕ ವಿಭಾಗದ ವಾರ್ಷಿಕ ಸ್ನೇಹ ಸಮ್ಮೇಳನ ಹಾಗೂ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ನಗದು ಪುರಸ್ಕಾರ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಮಕ್ಕಳೆ ದೇಶದ ಆಸ್ತಿ. ಉತ್ತಮ ಜ್ಞಾನ ಸಂಪಾದಿಸುವ ಮೂಲಕ ದೇಶದ ಬೆಳವಣಿಗೆಗೆ ಶ್ರಮಿಸಬೇಕು. ವಿದ್ಯಾರ್ಥಿಗಳು ಅಗತ್ಯವಿರುವ ಕೆಲಸ ಮಾಡುವುದನ್ನು ಬಿಟ್ಟು ಬೇಡವಾದ ಕೆಲಸ ಮಾಡುತ್ತಿದ್ದಾರೆ. ಇದು ಉತ್ತಮ ಬೆಳವಣಿಗೆಯಲ್ಲ ಎಂದರು.

ವಿದ್ಯಾರ್ಥಿಗಳು ಆತ್ಮಾವಲೋಕನ ಮಾಡಿಕೊಳ್ಳಬೇಕು. ಶುದ್ಧ ಬರವಣಿಗೆ ಅಗತ್ಯ. ವಿದ್ಯಾರ್ಥಿಗಳಿಗೆ ಪ್ರಾಥಮಿಕ ಹಂತದಲ್ಲೆ ಉತ್ತಮ ತಳಪಾಯ ಹಾಕುವ ಜವ್ದಾರಿ ಶಿಕರ ಮೇಲಿದೆ. ಶಿಕ್ಷಕರು ಭವ್ಯ ಭಾರತ ನಿರ್ಮಾಣದ ಶಿಲ್ಪಿಗಳಾಗಬೇಕು. ಮಕ್ಕಳಿಗೆ ಗುಣಮಟ್ಟದ ಶಿಕ್ಷಣದ ಜತೆ ಉತ್ತಮ ಸಂಸ್ಕಾರ, ಮಾನವೀಯ ಮೌಲ್ಯ ಕಲಿಸಿಕೊಡಬೇಕು ಎಂದು ಶಿಕ್ಷಕರಿಗೆ ಮಾರ್ಗದರ್ಶನ ಮಾಡಿದರು.

ಭಗವಂತ ಕೊಟ್ಟ ಅವಕಾಶ ಬಳಸಿಕೊಳ್ಳದೇ ಕಳೆದುಕೊಳ್ಳುತ್ತಿರುವ ಪ್ರವೃತ್ತಿ ಮಕ್ಕಳಲ್ಲಿ ಹೆಚ್ಚಾಗಿ ಕಂಡು ಬರುತ್ತಿರುವುದು ವಿಷಾದಕರ ಸಂಗತಿ. ಸರ್ಕಾರ ಶಿಣ ಕ್ಷೇತ್ರಕ್ಕೆ ಸಾಕಷ್ಟು ಸೌಕರ್ಯ ನೀಡುತ್ತಿದೆ. ಇದರ ಪ್ರಯೋಜನ ಪಡೆದುಕೊಂಡು ಮಕ್ಕಳು ಉತ್ತಮ ಅಭ್ಯಾಸ ಮಾಡಬೇಕು ಎಂದು ಕಿವಿಮಾತು ಹೇಳಿದರು.

ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ನಗದು ಬಹುಮಾನ ನೀಡಿ ಪುರಸ್ಕರಿಸಲಾಯಿತು.ಪ್ರಾಚಾಯೆರ್ ಡಿ.ಕೆ. ಕುಲಕರ್ಣಿಅವರು ಸೇವೆಯಿಂದ ನಿವೃತ್ತರಾದ ಪ್ರಯುಕ್ತ ಸಂಸ್ಥೆ ವತಿಯಿಂದ ಅವರನ್ನು ಸನ್ಮಾನಿಸಲಾಯಿತು.

ಬಿಡಿಈ ಸಂಸ್ಥೆ ಉಪಾಧ್ಯ ಎ.ಡಿ. ದೇಶಪಾಂಡೆ, ಗೌರವ ಕಾರ್ಯದರ್ಶಿ ಎಂ.ಕೆ. ಕುಲಕರ್ಣಿ, ಜಂಟಿ ಕಾರ್ಯದರ್ಶಿ ಆರ್​.ಪಿ. ಚಿಕ್ಕಲಗಿ, ಪ್ರಾಚಾಯೆರ್ ಡಿ.ಕೆ. ಕುಲಕರ್ಣಿ, ಪಂ. ಪ್ರದ್ಯುಮ್ನಾಚಾರ್ಯ ಪೂಜಾರಿ, ಎ.ಎಸ್​. ಕುಲಕರ್ಣಿ, ಎಂ.ಎ. ಆಲೂರ, ರಣವೀರ ರಜಪೂತ, ವಾಣಿಶ್ರೀ ಕಂಬಾರ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net