ಪಿಎಲ್‌ಡಿ ಬ್ಯಾಂಕ್‌ಗೆ ಲಕ್ಷ್ಮಣ್ ಅಧ್ಯಕ್ಷ

HRS 1
Published on

ಹೊಳೆನರಸೀಪುರ : ತಾಲೂಕು ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ದಿ ಬ್ಯಾಂಕ್ (ಪಿಎಲ್‌ಡಿ ಬ್ಯಾಂಕ್) ಅಧ್ಯಕ್ಷರಾಗಿ ಹಂಗರಹಳ್ಳಿ ಎಚ್.ಕೆ.ಲಕ್ಷ್ಮಣ್ ಮತ್ತು ಉಪಾಧ್ಯಕ್ಷರಾಗಿ ಎಚ್.ಎನ್. ಪ್ರೇಮ್ ಆಯ್ಕೆಯಾದರು.ಬ್ಯಾಂಕ್ ಆವರಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಅಭ್ಯರ್ಥಿಯಾಗಿ ಜೆಡಿಎಸ್‌ನ ಬೆಂಬಲಿತ ಲಕ್ಷ್ಮಣ್ , ಕಾಂಗ್ರೆಸ್‌ನ ಬೆಂಬಲಿತ ಹೂವಿನಹಳ್ಳಿ ಶಶಿಕುಮಾರ್,

ಉಪಾಧ್ಯಕ್ಷ ಸ್ಥಾನಕ್ಕೆ ಜೆಡಿಎಸ್ ಬೆಂಬಲಿತ ಪ್ರೇಮ್ ಮತ್ತು ಕಾಂಗ್ರೆಸ್ ಬೆಂಬಲಿತ ಸೋಮೇಗೌಡ ಸ್ಪರ್ಧಿಸಿದ್ದರು. ಸಾಲಗಾರರ ಕ್ಷೇತ್ರದಿಂದ 14 ಮತ್ತು ಸಾಲಗಾರರಲ್ಲದ ಕ್ಷೇತ್ರದಿಂದ 1 ಸೇರಿ ಒಟ್ಟು 15 ಸದಸ್ಯರು ಮತ ಚಲಾಯಿಸಿದರು. ಅಧ್ಯಕ್ಷ ಹಾಗೂ ಉಪಾಧ್ಯಕ್ಷರಾಗಿ ಆಯ್ಕೆಯಾದವರಿಗೆ ತಲಾ 8 ಮತಗಳು ಚಲಾವಣೆಯಾದವು. ಹಾಸನ ಸಹಕಾರಿ ಸಂಘದ ನಿಬಂಧಕ ಬಾಲಚಂದರ್ ಚುನಾವಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದರು. ಅಧ್ಯಕ್ಷ ಮತ್ತು ಉಪಾಧ್ಯಕ್ಷರಿಗೆ ಜೆಡಿಎಸ್‌ನ ಮುಖಂಡ ಹಾಗೂ ಪಟ್ಟಣದ ಸಹಕಾರಿ ಬ್ಯಾಂಕ್ ಅಧ್ಯಕ್ಷ ರಘು, ತಾಪಂ ಮಾಜಿ ಉಪಾಧ್ಯಕ್ಷ ಜವರೇಗೌಡ, ಕಾಂಗ್ರೆಸ್‌ನ ಶಿವಶಂಕರ್ ಇತರರು ಅಭಿನಂದಿಸಿದರು. ಬ್ಯಾಂಕ್‌ನ ಆಡಳಿತ ಮಂಡಳಿಯ ಸದಸ್ಯರು ಮತ್ತು ಅಭಿಮಾನಿಗಳು ಗಾಂಧೀವೃತ್ತದಲ್ಲಿ ಪಟಾಕಿ ಸಿಡಿಸಿ, ಸಹಿ ಹಂಚಿ ಸಂಭ್ರಮಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net