Jailer 2 - ಮತ್ತಷ್ಟು ಹಿಗ್ಗಿತು ಜೈಲರ್​ 2

ಜೈಲರ್ 2
ಜೈಲರ್ 2
Published on
Jailer 2 -
ಯಾವುದೇ ಚಿತ್ರದ ಸೀಕ್ವೆಲ್​, ಮೊದಲ ಭಾಗಕ್ಕಿಂತ ದೊಡ್ಡ ಬಜೆಟ್​, ತಾರಾಗಣದಲ್ಲಿ ಮೂಡಿಬರುವುದು, ಮೊದಲ ಸಿನಿಮಾ ಹಿಟ್​ ಆದ ಖುಷಿಯಲ್ಲಿ ಚಿತ್ರತಂಡ ಎರಡನೇ ಭಾಗದ ಅದ್ಧೂರಿತನ ಇನ್ನಷ್ಟು ಹೆಚ್ಚಿಸಲು ಮುಂದಾಗುವುದು ಸಾಮಾನ್ಯ. ಅದಕ್ಕೆ "ಕೆಜಿಎ್​', "ಕಾಂತಾರ', "ಪುಷ್ಪ' ಸರಣಿಗಳು ಉದಾಹರಣೆ. ಇದೀಗ ಈ ಸಾಲಿಗೆ ರಜಿನಿಕಾಂತ್​ ಮತ್ತು ನೆಲ್ಸನ್​ ದಿಲೀಪ್​ ಕುಮಾರ್​ ಕಾಂಬಿನೇಷನ್​ನಲ್ಲಿ ಮೂಡಿಬರುತ್ತಿರುವ "ಜೈಲರ್​' ಕೂಡ ಸೇರಿದೆ. 2023ರಲ್ಲಿ ತೆರೆಗೆ ಬಂದ "ಜೈಲರ್​' ದೊಡ್ಡ ಮಟ್ಟದಲ್ಲಿ ಯಶಸ್ಸಾಗಿತ್ತು. ರಜಿನಿ ಜತೆ ಶಿವರಾಜಕುಮಾರ್​, ಮೋಹನ್​ ಲಾಲ್​, ಜಾಕಿ ಶ್ರಾಫ್​, ಕಿಶೋರ್​, ನಾಗ ಬಾಬು ವಿಶೇಷ ಪಾತ್ರಗಳಲ್ಲಿ ಮಿಂಚಿದ್ದರು. ವಿಶೇಷ ಅಂದರೆ ರಜಿನಿಗೆ ಬಿದ್ದಷ್ಟೇ ಚಪ್ಪಾಳೆ ಈ ಅತಿಥಿ ಪಾತ್ರಧಾರಿಗಳಿಗೂ ಸಿಕ್ಕಿತ್ತು. ಅದರ ಬೆನ್ನಲ್ಲೇ "ಜೈಲರ್​ 2'ನಲ್ಲಿ ನಿರ್ದೇಶಕ ನೆಲ್ಸನ್​ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿದ್ದಾರೆ. ಈ ನಟರ ಜತೆಗೆ ಇನ್ನೂ ಕೆಲ ವಿಶೇಷ ಅತಿಥಿಗಳನ್ನು ಚಿತ್ರದಲ್ಲಿ ಸೇರಿಸಿಕೊಂಡಿದ್ದಾರೆ.

ಮೇಘನಾ ಕಮ್​ಬ್ಯಾಕ್​

ಕನ್ನಡತಿ ಮೇಘನಾ ರಾಜ್​ ಸರ್ಜಾ "ಜೈಲರ್​ 2'ನಲ್ಲಿ ನಟಿಸುತ್ತಿರುವ ಬಗ್ಗೆ ಕೆಲ ದಿನಗಳ ಹಿಂದೆ ಅಧಿಕೃತವಾಗಿ ಘೋಷಿಸಿಕೊಂಡಿದ್ದರು. ವಿಶೇಷ ಅಂದರೆ, ಬರೋಬ್ಬರಿ 14 ವರ್ಷಗಳ ನಂತರ ಮೇನಾ "ಜೈಲರ್​' ಸೀಕ್ವೆಲ್​ ಮೂಲಕ ಮತ್ತೆ ತಮಿಳಿಗೆ ಕಮ್​ಬ್ಯಾಕ್​ ಮಾಡಿದ್ದಾರೆ. 2010ರಲ್ಲಿ "ಕಾದಲ್​ ಸೊಲ್ಲ ವಂದೆನ್​' ಮೂಲಕ ಕಾಲಿವುಡ್​ಗೆ ಎಂಟ್ರಿ ಕೊಟ್ಟಿದ್ದ ಅವರು, ನಂತರ "ವುಯರ್ತಿರು 420' (2011) ಮತ್ತು "ನಂದ ನಂದಿತಾ' (2012) ಚಿತ್ರಗಳಲ್ಲಿ ನಟಿಸಿದ್ದರು. ಆ ಬಳಿಕ ಮೇಘನಾ ಮಲಯಾಳಂ ಮತ್ತು ಕನ್ನಡದಲ್ಲೇ ಹೆಚ್ಚು ಬಿಜಿಯಾದ ಕಾರಣ, ಮತ್ತೆ ಕಾಲಿವುಡ್​ನತ್ತ ಗಮನ ಹರಿಸಿರಲಿಲ್ಲ. ಇದೀಗ 14 ವರ್ಷಗಳ ನಂತರ ಪತಿ ಚಿರು ಸರ್ಜಾ ನೆಚ್ಚಿನ ನಟ ರಜಿನಿಕಾಂತ್​ ಚಿತ್ರದಲ್ಲಿ ನಟಿಸುವ ಮೂಲಕ, ಪತಿಯ ಕನಸನ್ನು ಮೇಘನಾ ನನಸು ಮಾಡಿದ್ದಾರೆ. ಈ ಬಗ್ಗೆ ಖುದ್ದು ಅವರೇ ಮದುವೆ ವಾರ್ಷಿಕೋತ್ಸವದಂದು ಹೇಳಿ, ಸಂಭ್ರಮಿಸಿದ್ದರು. ಇನ್ನು ಚಿತ್ರದ ಬಗ್ಗೆ ಮೇಘನಾ, ""ಜೈಲರ್​ 2' ಶೂಟಿಂಗ್​ ಹಲವು ದಿನಗಳ ಕಾಲ ನಡೆಯಿತು. ತುಂಬ ಲಾಂಗ್​ ಶೆಡ್ಯೂಲ್​ ಪ್ಲಾ$್ಯನ್​ ಮಾಡಿಕೊಂಡಿದ್ದರು. ಸುಮಾರು ಆರು ತಿಂಗಳ ಸಮಯ ನಾನು ಆ ಚಿತ್ರಕ್ಕೆ ನೀಡಿದ್ದೆ. ಆದರೆ, ಪಾತ್ರದ ಬಗ್ಗೆ ಈಗಲೇ ಏನೂ ಹೇಳಲಾರೆ' ಎಂದು ಮಾಹಿತಿ ನೀಡುತ್ತಾರೆ.

ಶಾರುಖ್​ ಅಲ್ಲ ಹೃತಿಕ್​

ಇನ್ನು "ಜೈಲರ್​ 2'ನಲ್ಲಿ ಶಾರುಖ್​ ಖಾನ್​ ಅತಿಥಿ ಪಾತ್ರದಲ್ಲಿ ನಟಿಸಲಿದ್ದಾರೆ ಎಂಬ ಸುದ್ದಿಯೂ ಕೆಲ ತಿಂಗಳಿನಿಂದ ಕಾಲಿವುಡ್​ ಅಂಗಳದಲ್ಲಿ ಹರಿದಾಡುತ್ತಿತ್ತು. ಆದರೆ, ಆ ಸುದ್ದಿಗೆ ಕೆಲ ದಿನಗಳ ಹಿಂದೆ ಬ್ರೇಕ್​ ಬಿದ್ದಿದ್ದು, ನಟ ಹೃತಿಕ್​ ರೋಷನ್​ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳುವುದು ಪಕ್ಕಾ ಎನ್ನಲಾಗಿದೆ. ಈಗಾಗಲೇ ಅವರ ಭಾಗದ ಶೂಟಿಂಗ್​ ಕೂಡ ಪೂರ್ಣಗೊಂಡಿದೆ ಎಂದು ಹೇಳಲಾಗುತ್ತಿದ್ದು, ಹೃತಿಕ್​ ಪಾತ್ರದ ಬಗ್ಗೆ ಕುತೂಹಲ ಉಂಟು ಮಾಡಿದೆ. ಹಾಗೇ ರಜಿನಿ ಜತೆ ಶಿವಣ್ಣ, ಮೋಹನ್​ ಲಾಲ್​ ಈ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದು, ಮೇನಾ ರಾಜ್​, ಹೃತಿಕ್​ ರೋಷನ್​ ಜತೆಜತೆಗೆ ಎಸ್​.ಜೆ.ಸೂರ್ಯ, ಮಿಥುನ್​ ಚಕ್ರವರ್ತಿ, ವಿಜಯ್​ ಸೇತುಪತಿ ಕೂಡ ತಾರಾಗಣ ಸೇರಿಕೊಂಡಿದ್ದಾರೆ ಎನ್ನಲಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net