ಸಂಭ್ರಮಾಚರಣೆ ಮಾಡದಂತೆ ಎಚ್.ಡಿ.ರೇವಣ್ಣ ಮನವಿ

HD Revanna
Published on

ಬೆಂಗಳೂರು:
ಜಾಮೀನು ಸಿಕ್ಕಿದೆ ಎನ್ನುವ ಕಾರಣಕ್ಕಾಗಿ ಯಾವುದೇ ಸಂಭ್ರಮಾಚರಣೆ ಮಾಡದಂತೆ ಜೆಡಿಎಸ್ ಕಾರ್ಯಕರ್ತರು ಮತ್ತು ಮುಖಂಡರಲ್ಲಿ ಶಾಸಕ ಎಚ್.ಡಿ.ರೇವಣ್ಣ ಮನವಿ ಮಾಡಿಕೊಂಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಟಾಕಿ ಸಿಡಿಸಿ, ೋಷಣೆ ಕೂಗುವುದು, ಮೆರವಣಿಗೆ ಮಾಡುವುದನ್ನು ಯಾರು ಮಾಡಬಾರದು. ಈಗಿನ ಪರಿಸ್ಥಿತಿಯಲ್ಲಿ ಸಂಯಮದಿಂದ ಸಹಕಾರ ನೀಡುವಂತೆ ತಮ್ಮ ಅಭಿಮಾನಿಗಳಲ್ಲಿ ವಿನಂತಿಸಿಕೊಂಡರು.
ನನ್ನ ತಂದೆ ತಾಯಿಯ ಆರ್ಶೀವಾದ, ದೇವರ ಕೃಪೆ ಮತ್ತು ಕಾರ್ಯಕರ್ತರು ಶುಭ ಹಾರೈಕೆಗಳಿಂದ ನನಗೆ ಜಾಮೀನು ಸಿಕ್ಕಿದೆ. ನಿಮ್ಮೆಲ್ಲರ ಪ್ರೀತಿ, ವಿಶ್ವಾಸದ ಹಾರೈಕೆಯೇ ಸಾಕು ಎಂದು ಕೇಳಿಕೊಂಡಿದ್ದಾರೆ.
ನನ್ನ 40 ವರ್ಷದ ರಾಜಕೀಯ ಜೀವನದಲ್ಲಿ ಎಂದೂ ಇಂಥಹ ಸ್ಥಿತಿ ಎದುರಿಸಿರಲಿಲ್ಲ. ಇದೊಂದು ಸಂಕಷ್ಟದ ಕಾಲ. ಎಲ್ಲದರಿಂದ ಪಾರಾಗಿ, ಆರೋಪದಿಂದ ಋಣ ಮುಕ್ತನಾಗುವ ವಿಶ್ವಾಸವಿದೆ. ನ್ಯಾಯಾಲಯದ ಮೇಲೆ ನಂಬಿಕೆ ಇದೆ. ನ್ಯಾಯಾಲಯಕ್ಕೆ ನಾನು ತಲೆಬಾಗುತ್ತೇನೆ ಎಂದರು.
ನಾನು ಎಲ್ಲಿಯೂ ಹೋಗುವುದಿಲ್ಲ. ನಿಮ್ಮ ಜೊತೆಗೆ ಇರುತ್ತೇನೆ. ದೇವರ ಮೇಲೆ ನಂಬಿಕೆ ಇದೆ. ಈ ಆರೋಪದಿಂದ ಹೊರ ಬಂದ ಮೇಲೆ ಮಾತನಾಡೋಣ ಎಂದು ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net