10 ಲಕ್ಷ ರೂ.ಗೆ ಗಂಡನ ಕಿಡ್ನಿ ಮಾರಿಸಿದ ಪತ್ನಿ ಇನ್ನೊಬ್ಬನ ಜತೆ ಎಸ್ಕೇಪ್​​! Woman Forces Husband To Sell Kidney

Money Earning
Published on

ಪಶ್ಚಿಮ ಬಂಗಾಳ: ( Woman Forces Husband To Sell Kidney ) 10  ಲಕ್ಷ ರೂ. ಗಂಡನ ಕಿಡ್ನಿ ಮಾರಿಸಿದ ಪತ್ನಿ, ಹಣ ತೆಗೆದುಕೊಂಡು ತನ್ನ ಬಾಯ್​ಫ್ರೆಂಡ್ ಜೊತೆ ಓಡಿ ಹೋಗಿದ್ದಾಳೆ. ಹೌರಾ ಜಿಲ್ಲೆಯ ಸಂಕ್ರೈಲ್​ನಲ್ಲಿ ನಡೆದಿದೆ.

ನಡೆದಿದ್ದೇನು:

ಮಗಳು ಶಿಕ್ಷಣಕ್ಕಾಗಿ ಹಣ ಬೇಕು ಎಂದು ಹಠ ಹಿಡಿದು ಗಂಡನ ಕಿಡ್ನಿಯನ್ನು ಮಾರಟ ಮಾಡಲು ಪತ್ನಿ ಸಿದ್ಧವಾಗಿದ್ದಳು. ಇದನ್ನು ನಂಬಿದ ಪತಿ ಕಿಡ್ನಿ ಕೊಳ್ಳುವವರನ್ನು ಹುಡುಕಿದ್ದಾನೆ. ನಂತರ ತನ್ನ ಕಿಡ್ನಿಯನ್ನು ಮಾರಿದ್ದಾನೆ.ಇದರಿಂದ ತನ್ನ ಮನೆಯ ಹಣಕಾಸಿನ ತೊಂದರೆ ಉತ್ತಮ ಸ್ಥಿತಿಗೆ ಬರಬಹುದು ಎಂದು ನಂಬಿದ್ದ.

ಪೇಂಟ್​ ಮಾರುತ್ತಿದ್ದ ರವಿ ದಾಸ್ ಎಂಬುವವನ ಜತೆ  ಪತ್ನಿ ಲವ್ವಿಡವ್ವಿ ಶುರುವಿಟ್ಟುಕೊಂಡಿದ್ದಳು. ಪತಿ ಕಿಡ್ನಿ ಮಾರಿ ಅದರಿಂದ ಬಂದ 10 ಲಕ್ಷ ರೂಪಾಯಿ ಹಣವನ್ನು ಪತ್ನಿಯ ಕೈಗೆ ಕೊಟ್ಟಿದ್ದೆ ತಡ ಆಕೆ ರವಿದಾಸ್ ಜತೆ ಹಣದೊಂದಿಗೆ ಎಸ್ಕೇಪ್​​ ಆಗಿದ್ದಾಳೆ. ಪತ್ನಿಯ ಅಸಲಿ ರೂಪ ಗೊತ್ತಾದಾಗ ಗಂಡ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾನೆ.

ಆ ಜೋಡಿ ಇದ್ದ ಮನೆಗೆ ಹೋಗಿ ತನ್ನ ಮಗಳನ್ನು ಕರೆದುಕೊಂಡು ಬರಬೇಕೆಂದು ಹೋಗಿದ್ದಾನೆ. ಆದ್ರೆ ಆತನ ಹೆಂಡತಿ ಮತ್ತು ರವಿದಾಸ್ ಬಾಗಿಲನ್ನೇ ತೆಗೆದಿಲ್ಲ. ನೀ ಏನು ಬೇಕಾದರು ಮಾಡಿಕೋ ನಾನು ನಿನಗೆ ಡಿವೋರ್ಸ್​ ಲೆಟರ್​ ಕಳಿಸುತ್ತೇನೆ ಎಂದು ಹೇಳಿ ಮನೆಯಿಂದ ಆಚೆ ಒಂದು ಹೆಜ್ಜೆಯನ್ನು ಇಡದೇ ಆತನಿಗೆ ಆವಾಜ್ ಹಾಕಿದ್ದಾರೆ. ವೈದ್ಯರು ಕೂಡಲೇ ಆತನಿಗೆ ಕಿಡ್ನಿಯನ್ನು ನೀಡುವಂತೆ ಹೇಳಿದ್ದಾರೆ.

1994ರಲ್ಲಿಯೇ ಭಾರತದಲ್ಲಿ ಮಾನವ ಅಂಗಗಳ ವ್ಯಾಪಾರವನ್ನು ನಿಷೇಧ ಮಾಡಲಾಗಿದೆ. ಆದರೂ ಕೂಡ ವೈದ್ಯರು ಕಿಡ್ನಿ ನೀಡಬೇಕು ಕಸಿಗಾಗಿ ರೋಗಿ ಮತ್ತು ಆತನ ಮನೆಯವರು ಕಾಯುತ್ತಿದ್ದಾರೆ ಎಂದು ಒತ್ತಾಯ ಮಾಡುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net