ಆನ್‌ಲೈನ್‌ನಲ್ಲಿ ಪಿಎಫ್ ಹಣ ಪಡೆಯುವುದು ಹೇಗೆ? ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ | PF Money

ವಿಜಯವಾಣಿ (27)
Published on

PF Money: ಪಿಎಫ್ ಖಾತೆದಾರರಿಗೆ ನಿವೃತ್ತಿಗೂ ಮುನ್ನವೇ ಪೂರ್ಣ ಹಣ ಪಡೆಯುವ ಸೌಲಭ್ಯವನ್ನು ಒದಗಿಸಲು ಇದೀಗ ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ. ಉದ್ಯೋಗಿಗಳ ಭವಿಷ್ಯ ನಿಧಿ (ಪಿಎಫ್) ಹೊಸ ನಿಯಮಗಳನ್ನು ಪರಿಚಯಿಸಲು ಸಜ್ಜಾಗಿದೆ. ಪಿಎಫ್ ಖಾತೆ ಹಿಂಪಡೆಯುವಿಕೆಗೆ ಸಂಬಂಧಿಸಿದಂತೆ ಹೊಸ ನಿಯಮಗಳನ್ನು ಜಾರಿಗೊಳಿಸಲು ಹಲವು ಸಿದ್ಧತೆಗಳು ನಡೆಯುತ್ತಿವೆ.

ಪ್ರಸ್ತುತ, ಅನಾರೋಗ್ಯ, ಮನೆ ಖರೀದಿ, ಮಕ್ಕಳ ಶಿಕ್ಷಣ ಅಥವಾ ಮದುವೆಯಂತಹ ಕೆಲವು ಕಾರಣಗಳಿಗಾಗಿ ಮಾತ್ರ ಪಿಎಫ್‌ನಿಂದ ಹಣ ಹಿಂಪಡೆಯಲು ಸಾಧ್ಯವಿದೆ. ಅಂದರೆ, ನೀವು ನಿಮ್ಮ ಪಿಎಫ್ ಖಾತೆಯಿಂದ ನಿರ್ದಿಷ್ಟ ಮಿತಿಗಿಂತ ಹೆಚ್ಚು ಹಣವನ್ನು ಬೇಕಾದ ಸಮಯದಲ್ಲಿ ತೆಗೆದುಕೊಳ್ಳಲು ಸಾಧ್ಯವಿಲ್ಲ. 10 ವರ್ಷಗಳ ನಿರಂತರ ಸೇವೆಯ ಬಳಿಕ, ನಿಮ್ಮ ಪಿಎಫ್ ಖಾತೆಯಲ್ಲಿರುವ ಸಂಪೂರ್ಣ ಮೊತ್ತವನ್ನು ಪಿಂಚಣಿ ರೂಪದಲ್ಲಿ ಪಡೆಯಬಹುದಾಗಿದೆ. ಇನ್ನೂ ಆನ್​ಲೈನ್​ನಲ್ಲಿ ಪಿಎಫ್​ ಹಣ ಬಿಡಿಸಿಕೊಳ್ಳುವುದು ಹೇಗೆ? ಎಂಬ ನಿಮ್ಮ ಪ್ರಶ್ನೆಗೆ ಇಲ್ಲಿದೆ ನೋಡಿ ಉತ್ತರ.

ಈ ರೀತಿ ಮಾಡಿ...

  • ಮೊದಲು EPFO ಅಧಿಕೃತ ವೆಬ್‌ಸೈಟ್‌ಗೆ ಲಾಗಿನ್ ಮಾಡಿ www.epfindia.gov.in/
  • ನಿಮ್ಮ UAN (ಯುನಿವರ್ಸಲ್ ಖಾತೆ ಸಂಖ್ಯೆ) ಪಾಸ್‌ವರ್ಡ್ ನಮೂದಿಸಿ, ಲಾಗಿನ್ ಮಾಡಿ.
  • KYC ನವೀಕರಿಸಿ: ನಿಮ್ಮ ಆಧಾರ್, ಪ್ಯಾನ್ ಕಾರ್ಡ್, ಬ್ಯಾಂಕ್ ಖಾತೆ ವಿವರಗಳನ್ನು ಯುಎಎನ್​ನೊಂದಿಗೆ ಲಿಂಕ್ ಮಾಡಬೇಕು ಮತ್ತು ಪರಿಶೀಲಿಸಬೇಕು.
  • ಫಾರ್ಮ್ ಆಯ್ಕೆಮಾಡಿ: ಆನ್‌ಲೈನ್ ಸೇವೆಗಳ ವಿಭಾಗಕ್ಕೆ ಹೋಗಿ ಸರಿಯಾದ ಫಾರ್ಮ್ ಆಯ್ಕೆ ಮಾಡಿ (ಫಾರ್ಮ್ 31, ಭಾಗಶಃ ಹಿಂಪಡೆಯುವಿಕೆಗೆ ಮತ್ತು ಫಾರ್ಮ್ 19 ಪೂರ್ಣ ಹಿಂಪಡೆಯುವಿಕೆಗೆ).
  • ವಿವರಗಳನ್ನು ಭರ್ತಿ ಮಾಡಿ: ಈ ಫಾರ್ಮ್‌ನಲ್ಲಿ ಹಿಂಪಡೆಯುವಿಕೆಗೆ ಕಾರಣ ಮತ್ತು ಮೊತ್ತವನ್ನು (ಫಾರ್ಮ್ 31ಗಾಗಿ) ನಮೂದಿಸಿ.
  • ಸಲ್ಲಿಸಿ: 'ಅರ್ಜಿ ಸಲ್ಲಿಸಿ' ಮೇಲೆ ಕ್ಲಿಕ್ ಮಾಡಿ. ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಗೆ ಒಂದು ಸಂದೇಶ ಬರಲಿದೆ.
  • ನಗದು ಕ್ರೆಡಿಟ್ ಸಮಯ: ನಿಮ್ಮ ಹಣ ಲಿಂಕ್ ಮಾಡಲಾದ ಬ್ಯಾಂಕ್ ಖಾತೆಗೆ 15ರಿಂದ 20 ಕೆಲಸದ ದಿನಗಳಲ್ಲಿ ಜಮಾ ಆಗಲಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net