

ನವದೆಹಲಿ: ರಾಮ ಮಂದಿರದಉದ್ಘಾಟನಾ ಕಾರ್ಯಕ್ರಮ ಹಾಗೂ ಪ್ರಾಣ ಪ್ರತಿಷ್ಠೆ ಜನವರಿ 22ರಂದು ನಡೆಯಲಿದೆ. ಈ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಲು ಬಯಸಿದರೆ, ರಾಮ ಮಂದಿರದಲ್ಲಿ ಪ್ರಾಣ ಪ್ರತಿಷ್ಠೆ ಕಾರ್ಯಕ್ರಮದ ಲೈವ್ ಸ್ಟ್ರೀಮಿಂಗ್ ಅನ್ನು ನಿಮ್ಮ ಮನೆಯಿಂದಲೆ ವೀಕ್ಷಿಸಬಹುದು.
ನಿಮ್ಮ ಫೋನ್ನಲ್ಲಿ ಜಿಯೋ ಸಿನಿಮಾ ಅಪ್ಲಿಕೇಷನ್ ಡೌನ್ಲೋಡ್ ಮಾಡಿ ಅದರಲ್ಲಿ ಪ್ರಾಣಪ್ರತಿಷ್ಠೆ ಎಂಬುದನ್ನು ಕ್ಲಿಕ್ ಮಾಡಿ ವೀಕ್ಷಿಸಬಹುದು. ಇಲ್ಲವಾದಲ್ಲಿ ಎಕ್ಸ್ನಲ್ಲಿ ಅಥವಾ ಫೇಸ್ಬುಕ್ನಲ್ಲಿ ರಾಮಜನ್ಮಭೂಮಿ ಟ್ರಸ್ಟ್ ಹೆಸರಿನ ಖಾತೆಯಲ್ಲಿ ಕೂಡ ವೀಕ್ಷಿಸಬಹುದು.
ನೀವು ದೂರದರ್ಶನದ ಎಲ್ಲಾ ಚಾನೆಲ್ಗಳಲ್ಲಿ ನೇರಪ್ರಸಾರವಿರಲಿದೆ. ರಾಮಮಂದಿರದ ಮೆಗಾ ಕವರೇಜ್ ಡಿಡಿ ನ್ಯಾಷನಲ್ ಹಾಗೂ ಡಿಡಿ ನ್ಯೂಸ್ನಲ್ಲಿ ಪ್ರಸಾರವಾಗಲಿದೆ. ಹಾಗೆಯೇ ಜನವರಿ 23ರಂದು ದೂರದರ್ಶನದಲ್ಲಿ ಶ್ರೀರಾಮ ದೇವಸ್ಥಾನದ ಆರತಿ ಕೂಡ ನೇರಪ್ರಸಾರವಾಗಲಿದೆ. ದೂರದರ್ಶನದ ಯೂಟ್ಯೂಬ್ ಲಿಂಕ್ನಲ್ಲಿಯೂ ನೇರಪ್ರಸಾರ ವೀಕ್ಷಿಸಬಹುದು. ಭಾರತೀಯ ರಾಯಭಾರ ಕಚೇರಿಗಳು ಕೂಡ ಲೈವ್ ತೋರಿಸಲಿವೆ.
ಪ್ರಾಣ ಪ್ರತಿಷ್ಠೆ ಜನವರಿ 22ರಂದು ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವು ಗಣ್ಯರು ಪಾಲ್ಗೊಳ್ಳಲಿದ್ದಾರೆ.ಹೀಗಾಗಿ ಬಿಗಿ ಭದ್ರತೆ ಕಲ್ಪಿಸಲಾಗಿದೆ. ರಾಮ ಮಂದಿರ ಉದ್ಘಾಟನಾ ಕಾರ್ಯಕ್ರಮಕ್ಕೆ ಹಲವು ನಾಯಕರು, ನಟರು ಆಗಮಿಸಲಿದ್ದಾರೆ.