More

    ನಗುಮೊಗದ ರಾಮಲಲ್ಲಾ; ಉದ್ಘಾಟನೆಗೂ ಮುನ್ನ ಅನಾವರಣಗೊಂಡ ಶ್ರೀರಾಮ ವಿಗ್ರಹದ ಮುಖ

    ನವದೆಹಲಿ: ಅಯೋಧ್ಯೆ ಶ್ರೀರಾಮ ವಿಗ್ರಹ ಪ್ರಾಣ ಪ್ರತಿಷ್ಠಾಪನೆಗೆ ಇನ್ನೇನು ಕೆಲವು ದಿನಗಳು ಮಾತ್ರ ಬಾಲಿ ಉಳಿದಿವೆ.  ಮಂದಸ್ಮಿತ ರಾಮಲಲ್ಲಾನ ಫೋಟೋ ಸೋಶಿಯಲ್​​ ಮೀಡಿಯಾದಲ್ಲಿ ವೈರಲ್​​ ಆಗುತ್ತಿದೆ. ರಾಮನನ್ನು ನೋಡಿದ ಜನರ ಮನದುಂಬಿ ಬಂದಿದೆ.

    ರಾಮ್ ಲಲ್ಲಾನ ವಿಗ್ರಹವನ್ನು ಮೈಸೂರಿನ ಖ್ಯಾತ ಶಿಲ್ಪಿ ಅರುಣ್ ಯೋಗಿರಾಜ್ ಕೆತ್ತಿದ್ದಾರೆ. 51 ಇಂಚಿನ ರಾಮ್ ಲಲ್ಲಾ ವಿಗ್ರಹವು 150 ಕೆಜಿಗಿಂತ ಹೆಚ್ಚು ತೂಕವಿದ್ದು, ಶಾಲಿಗ್ರಾಮ್ ಕಲ್ಲಿನಿಂದ ಮಾಡಲಾಗಿದೆ. ಬಾಲ ರಾಮನು ಕಾಲಿಗೆ ಗೆಜ್ಜೆ, ಹೊಯ್ಸಳ ಶೈಲಿಯ ಆಭರಣ ಕೆತ್ತನೆ ಉತ್ತರ ಭಾರತ ಶೈಲಿಯಲ್ಲಿ ಧೋತಿ ತೊಟ್ಟಿದ್ದಾನೆ.

    ಐದು ವರ್ಷ ಬಾಲಕನ ಮಂದಸ್ಮಿತ ಮುಖ ಹೊಂದಿರುವ ರಾಮನ ಮೂರ್ತಿ ಪ್ರತಿಮೆಯ ಎತ್ತರ 51 ಇಂಚು. ಅಂದರೆ ಸುಮಾರು 4 ಅಡಿ. ಕೈಯಲ್ಲಿ ಬಲಗೈಯಲ್ಲಿ ಬಾಣ, ಎಡಗೈಯಲ್ಲಿ ಬಿಲ್ಲು ಹಿಡಿದಿರುವ ಭಂಗಿಯಲ್ಲಿದ್ದಾನೆ. ರಾಮನ ಬಲಭಾಗದಲ್ಲಿ ನಿಂತಿರುವ ಹನುಮಂತ, ಮತ್ಸ್ಯ, ಕೂರ್ಮಾ, ನರಸಿಂಹ,ವಾಮನ, ಭ್ರಹ್ಮ, ಓಂ, ಆದಿಶೇಷ, ಚಕ್ರ, ಈಶ್ವರ ಬಲಭಾಗದಲ್ಲಿ ಗರುಡ ಪ್ರಭಾವಳಿಯಲ್ಲಿ ವಿಷ್ಣುವಿನ ದಶಾವತಾರ ಬಿಂಬಿಸುವ ಕೆತ್ತನೆ ಇದೆ. ಬಾಲರಾಮನ ಎಡಗಡೆ ಮೇಲ್ಗಡೆ ಶಂಕ,ಗಧೆ, ಸ್ವಸ್ತಿಕ್​​, ವಿಷ್ಣು, ಪರಶುರಾಮ, ರಾಮ, ಕೃಷ್ಣ, ಬುದ್ಧ, ಕಲ್ಕಿ, ನೆತ್ತಿಯ ಮೇಲೆ ಸೂರ್ಯನಿದ್ದಾನೆ.

    ನಗುಮೊಗದ ರಾಮಲಲ್ಲಾ; ಉದ್ಘಾಟನೆಗೂ ಮುನ್ನ ಅನಾವರಣಗೊಂಡ ಶ್ರೀರಾಮ ವಿಗ್ರಹದ ಮುಖ

    ರಾಮಮಂದಿರದ ಗರ್ಭಗುಡಿಯಲ್ಲಿ ಶುಕ್ರವಾರ ರಾಮಲಲ್ಲಾ ಮೂರ್ತಿಗೆ ವಿಶೇಷ ಪೂಜೆ ಮಾಡಲಾಗಿದೆ. ಇದಾದ ಬಳಿಕ ಅಗ್ನಿ ಸ್ಥಾಪನೆ, ನವಗ್ರಹ ಸ್ಥಾಪನೆ ನಡೆದಿದೆ.. ಹಾಗೆಯೇ, ವಿಶೇಷ ಹವನವನ್ನೂ ಮಾಡಲಾಗಿದೆ. ವೈದಿಕ ಮಂತ್ರಗಳನ್ನು ಪಠಿಸುವ ಮೂಲಕ ವಿಶೇಷ ಹವನ ನೆರವೇರಿಸಲಾಗಿದೆ.

    ನಗುಮೊಗದ ರಾಮಲಲ್ಲಾ; ಉದ್ಘಾಟನೆಗೂ ಮುನ್ನ ಅನಾವರಣಗೊಂಡ ಶ್ರೀರಾಮ ವಿಗ್ರಹದ ಮುಖ

    ರಾಮಮಂದಿರ ಲೋಕಾರ್ಪಣೆಯ ದಿನ ಉತ್ತರ ಪ್ರದೇಶ ಪೊಲೀಸರು ಹಾಗೂ ಪ್ಯಾರಾ ಮಿಲಿಟರಿ ಸಿಬ್ಬಂದಿ ಸೇರಿ ಒಟ್ಟು 11 ಸಾವಿರ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗುತ್ತದೆ. ಇದರ ಜತೆಗೆ ಹೆಚ್ಚಿನ ನಿಗಾ ಇರಿಸಲು, ಪ್ರತಿಯೊಂದು ಚಲನವಲನಗಳನ್ನು ಗಮನಿಸಲು ಕೃತಕ ಬುದ್ಧಿಮತ್ತೆ ತಂತ್ರಜ್ಞಾನವನ್ನು ಬಳಸಿಕೊಳ್ಳಲಾಗುತ್ತದೆ.

    ಶ್ರೀರಾಮೋತ್ಸವ; ರಾಮಲಲ್ಲಾನ ವಿಗ್ರಹದಲ್ಲಿವೆ ಸಹಸ್ರಾರು ದೇವತೆಗಳು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts