More

    ಕಾದಾಟದಲ್ಲಿ ಗಾಯಗೊಂಡಿದ್ದ ಗಂಡುಹುಲಿ ದರ್ಶನ

    ಗುಂಡ್ಲುಪೇಟೆ: ಬಂಡೀಪುರದಲ್ಲಿ ಟೆರಿಟರಿಗಾಗಿ ಎರಡು ಹುಲಿಗಳ ನಡುವೆ ನಡೆದ ಕಾದಾಟದಲ್ಲಿ ತೀವ್ರ ಗಾಯಗೊಂಡಿದ್ದ ಬೋಳುಗುಡ್ಡ ಮೇಲ್ ಎಂದು ಕರೆಯಲಾಗುವ ಗಂಡುಹುಲಿ ಮತ್ತೆ ದರ್ಶನ ನೀಡಿದ್ದರಿಂದ ಸಫಾರಿಗೆ ಹೋಗಿದ್ದ ಪ್ರವಾಸಿಗರು ಫುಲ್ ಖುಷ್ ಆಗಿದ್ದಾರೆ.

    ಮಂಗಳವಾರ ಬೆಳಗ್ಗೆ ಬಂಡೀಪುರದ ಸಫಾರಿಗೆ ತೆರಳಿದ್ದ ಪ್ರವಾಸಿ ವಾಹನಗಳ ಎದುರು ಬೋಳುಗುಡ್ಡ ಮೇಲ್ ಗಾಂಭೀರ್ಯದಿಂದ ಹಾದುಹೋಗಿದ್ದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡಿ ಹರ್ಷ ವ್ಯಕ್ತಪಡಿಸಿದ್ದಾರೆ.

    ಕಳೆದ ತಿಂಗಳು ಬಂಡೀಪುರದಲ್ಲಿ ಬೇರೆ ಹುಲಿಗಳ ಜತೆ ನಡೆದ ಕಾದಾಟದಲ್ಲಿ ಬೋಳುಗುಡ್ಡ ಮೇಲ್ ಎಂದು ಕರೆಯಲಾಗುವ ಗಂಡುಹುಲಿ, ಮೂರುಕೆರೆ ಫೀಮೇಲ್ ಎಂದು ಕರೆಯಲಾಗುವ ಹೆಣ್ಣು ಹುಲಿಗಳಿಗೆ ಗಂಭೀರ ಪ್ರಮಾಣದಲ್ಲಿ ಗಾಯಗಳಾಗಿದ್ದವು. ಮುಖ ಮತ್ತು ಕಾಲುಗಳಿಗೆ ಆಗಿದ್ದ ಗಾಯಗಳ ನೋವಿನಿಂದ ಸದಾ ಕಾಲ ಕೆರೆಯ ನೀರಿನಲ್ಲಿ ಅರ್ಧ ದೇಹ ಮುಳುಗಿಸಿ ಮಲಗಿರುತ್ತಿದ್ದ ಹುಲಿಗಳು ಬೇಟೆಯಾಡಲು ಸಾಧ್ಯವಾಗದೆ ಸೊರಗಿದ್ದವು.

    ಇದರಿಂದ ಪ್ರವಾಸಿಗಳು ಹುಲಿಗಳ ಆರೋಗ್ಯದ ಬಗ್ಗೆ ಆತಂಕಕ್ಕೊಳಲಾಗಿದ್ದರು. ಈ ಬಗ್ಗೆ ಎಚ್ಚೆತ್ತ ಅರಣ್ಯ ಇಲಾಖೆ ಎರಡೂ ಹುಲಿಗಳ ಆರೋಗ್ಯದ ಬಗ್ಗೆ ಕಣ್ಣಿಟ್ಟಿತ್ತು. ತಮ್ಮ ಮೈಮೇಲೆ ಆಗಿದ್ದ ಗಾಯಗಳನ್ನು ನೆಕ್ಕುತ್ತಾ ನಿಧಾನಕ್ಕೆ ಗುಣಪಡಿಸಿಕೊಳ್ಳುತ್ತಿರುವ ಬಗ್ಗೆ ಅರಣ್ಯ ಇಲಾಖೆ ಪಶುವೈದ್ಯರು ಗಮನಹರಿಸಿದ್ದರು.
    ಯಾವಾಗಲೂ ಕೆರೆಗಳ ಬಳಿಯೇ ಕಾಣಿಸಿಕೊಳ್ಳುತ್ತಿದ್ದ ಬೋಳುಗುಡ್ಡ ಮೇಲ್ ಮಂಗಳವಾರ ಬೆಳಗ್ಗೆ ವೆಸ್ಲಿ ರಸ್ತೆಯಲ್ಲಿ ರಾಜ ಗಾಂಭೀರ್ಯದಿಂದ ಸಾಗಿ ಮರವೊಂದರ ಬಳಿ ನಿಂತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts