ಮನೆಯಲ್ಲಿಯೇ ಸುಲಭವಾಗಿ ತಯಾರಿಸಿ ಬಾಯಲ್ಲಿ ನಿರೂರಿಸುವ ತಮಿಳು ಸಾಂಬಾರ್: ಒಮ್ಮೆ ಹೀಗೆ ಟ್ರೈ ಮಾಡಿ ನೋಡಿ | Recipe

recipe 11
Published on

Recipe: ದಕ್ಷಿಣ ಭಾರತದ ಉಪಹಾರಗಳು ಬಹಳಷ್ಟು ಜನರಿಗೆ ಇಷ್ಟವಾಗುತ್ತವೆ. ಇಡ್ಲಿ, ಗರಿಗರಿಯಾದ ಬಿಸಿ ದೋಸೆಗಳು ಮತ್ತು ಬಾಯಲ್ಲಿ ಕರಗುವ ಉಪ್ಪಿಟ್ಟು ಸೇರಿದಂತೆ ಇನ್ನಿತರ ಖಾದ್ಯಗಳನ್ನು ಸವಿಯಲು ಆಹಾರ ಪ್ರಿಯರು ಇಷ್ಟಪಡುತ್ತಾರೆ.ಈ ಆಹಾರಗಳು ಅದ್ಭುತವಾದ ರುಚಿಯನ್ನು ಮಾತ್ರವಲ್ಲದೆ ಅಧಿಕ ಪೌಷ್ಟಿಕಾಂಶವನ್ನು ಹೊಂದಿರುತ್ತದೆ.

ಈ ಖಾದ್ಯಗಳೊಂದಿಗೆ ವಿವಿಧ ರೀತಿಯ ಚಟ್ನಿಗಳನ್ನು ತಯಾರಿಸಲಾಗುತ್ತದೆ. ಎಲ್ಲರಿಗೂ ಗೊತ್ತಿರುವ ಹಾಗೆ ತೆಂಗಿನಕಾಯಿ ಚಟ್ನಿಯಿಂದ ಹಿಡಿದು ವಿಭಿನ್ನ ರೀತಿಯ ಚಟ್ನಿಗಳು ಪ್ರಸಿದ್ದಿ ಪಡೆದಿದೆ. ಆದರೆ, ಇದರ ಜತೆ ಸಾಮಾನ್ಯವಾಗಿ ಸಾಂಬಾರ್​ ಒಂದೇ ಆಗಿರುತ್ತದೆ. ಇಡ್ಲಿ, ದೋಸೆ, ವಡಾ, ಉತ್ತಪಮ್​ ಸೇರಿ ಇತರ ಖಾದ್ಯಗಳಿಗೆ ಕೂಡ ಸರಿ ಹೊಂದುವ ಸವಿರುಚಿಯ ಅದ್ಭುತ ಸಾಂಬಾರ್​ ಒಂದಿದೆ ಅದುವೇ ಈ ತಮಿಳು​ ಸಾಂಬಾರ್​.

ಹೌದು, ಮನೆಯಲ್ಲಿಯೇ ತಯಾರಿಸಬಹುದಾದ ಸುಲಭವಾದ ಈ ತಮಿಳು ಸಾಂಬಾರ್ ಮಾಡುವುದುಹೇಗೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.

ಬೇಕಾಗುವ ಪದಾರ್ಥಗಳು

*1 ಕಪ್ ತೊಗರಿ ಬೇಳೆ

*1-2 ಕ್ಯಾರೆಟ್‌ಗಳು

*1 ಆಲೂಗಡ್ಡೆ

*1 ಸಣ್ಣ ನುಗ್ಗೆಕಾಯಿ

*1 ಟೊಮೆಟೊ

* 1 ಈರುಳ್ಳಿ

*1 ಹಸಿರು ಮೆಣಸಿನಕಾಯಿ

*1 ಚಮಚ ಸಾಂಬಾರ್ ಪುಡಿ

*1/2 ಚಮಚ ಅರಿಶಿನ ಪುಡಿ

*1 ಚಮಚ ಸಾಸಿವೆ

*1 ಚಮಚ ಜೀರಿಗೆ

*1 ಚಿಗುರು ಕರಿಬೇವು ಎಲೆಗಳು

*1-2 ಒಣಗಿದ ಕೆಂಪು ಮೆಣಸಿನಕಾಯಿಗಳು

*2 ಚಮಚ ಹುಣಸೆ ರಸ

*ಉಪ್ಪು, ರುಚಿಗೆ ತಕ್ಕಷ್ಟು

*2 ಚಮಚ ಎಣ್ಣೆ

ಸಾಂಬಾರ್​ ಮಾಡುವ ವಿಧಾನ

ಮೊದಲು ತೊಗರಿಬೇಳೆಯನ್ನು ಚೆನ್ನಾಗಿ ತೊಳೆದು ಕುಕ್ಕರ್​ನಲ್ಲಿ ನೀರು ಹಾಕಿ 3 ಸೀಟಿ ಬರುವವರೆಗೆ ಬೇಯಿಸಿ, ತಣ್ಣಗಾದ ನಂತರ ಬೇಳೆಯನ್ನು ಮ್ಯಾಶ್(ಪುಡಿ ಅಥವಾ ಮಿಶ್ರಣ)​ ಮಾಡಿ. ಒಂದು ಬಾಣಲೆಗೆ ಸ್ವಲ್ಪ ಎಣ್ಣೆ ಹಾಕಿ ಬಿಸಿ ಮಾಡಿ, ಅದಕ್ಕೆ ಈರುಳ್ಳಿ, ಟೊಮೆಟೋ, ಕ್ಯಾರೆಟ್​, ಆಲೂಗಡ್ಡೆ, ಮತ್ತು ನುಗ್ಗೇಕಾಯಿಗಳನ್ನು ಹಾಕಿ ಹುರಿಯಬೇಕು. ಬಳಿಕ ಇದಕ್ಕೆ ಸಾಂಬಾರ್​ ಪುಡಿ, ಅರಿಶಿಣ ಪುಡಿ ಹಾಗೂ ಉಪ್ಪು ಸೇರಿಸಿ ಒಂದು ನಿಮಿಷ ಚೆನ್ನಾಗಿ ಬೆರಸಬೇಕು.

ನಂತರ 1/2 ಕಪ್​ ನೀರಿನೊಂದಿಗೆ ಬೆರೆಸಿದ ಹುಣಸೆ ರಸ ​ ಸೇರಿಸಿ 5 ನಿಮಿಷ ಬೇಯಲು ಬಿಡಬೇಕು. ಬೇಯಿಸಿದ ಬೇಳೆಯನ್ನು ತರಕಾರಿಗಳೊಂದಿಗೆ ಬಾಣಲೆಗೆ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ ಆ ಮಿಶ್ರಣಕ್ಕೆ ಬೇಕಾದಷ್ಟು ನೀರನ್ನು ಸೇರಿಸಿ 10 ನಿಮಿಷಗಳ ಕಾಲ ಕುದಿಸಬೇಕು.

ಮತ್ತೊಂದು ಬಾಣಲೆಯನ್ನು ತೆಗೆದುಕೊಂಡು ಎಣ್ಣೆ ಬಿಸಿ ಮಾಡಿ ಅದಕ್ಕೆ ಸಾಸಿವೆ, ಜೀರಿಗೆ, ಒಣ ಮೆಣಸಿನಕಾಯಿ, ಮತ್ತು ಕರಿಬೇವು ಸೇರಿಸಿ ಒಗ್ಗರಣೆ ತಯಾರಿಸಿ, ಸಾಂಬಾರ್​ ಮೇಲೆ ಸೇರಿಸಿ, ಕೆಲ ಸಮಯಗಳ ನಂತರ ಆ ಸಾಂಬಾರ್ ಅ​ನ್ನು ಹಾಗೆಯೇ ಬಿಡಬೇಕು ಬಳಿಕ ಇಡ್ಲಿ, ದೋಸೆಯೊಂದಿಗೆ ಸವಿರುಚಿಯಾದ ಈ ತಮಿಳು ಸಾಂಬಾರ್​​ ಸವಿಯಲು ಸಿದ್ಧ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net