

ಬೆಂಗಳೂರು: ಮಳೆಗಾಲ ಬಂತೆಂದರೆ ನೊಣಗಳ ಸಂತಾನಾಭಿವೃದ್ಧಿ ಶುರುವಾಗುತ್ತದೆ. ಅಡುಗೆ ಮನೆಯಿಂದ ಶುರು ಮಾಡಿ.. ಎಲ್ಲೆಂದರಲ್ಲಿ ಬಂದು ತೊಂದರೆ ಕೊಡುತ್ತವೆ. ರಾಸಾಯನಿಕ ಪದಾರ್ಥಗಳನ್ನು ಬಳಸದೆ ನೊಣಗಳನ್ನು ಓಡಿಸಬೇಕು ಎಂದು ಯೋಚಿಸುವ ನಿಮಗೆ ಸುಲಭವಾಗಿ ಮತ್ತು ನೈಸರ್ಗಿಕವಾಗಿ ತೊಡೆದುಹಾಕಲು ಕೆಲವು ಟೀಪ್ಸ್ ನೀಡುತ್ತಿದ್ದೇವೆ.
ಮಳೆಗಾಲದಲ್ಲಿ ನೊಣದ ಕಾಟ ಹೆಚ್ಚು: ಮಳೆಗಾಲದಲ್ಲಿ ಮನೆಯಲ್ಲಿ ನೊಣಗಳ ಸಂಖ್ಯೆ ಹೆಚ್ಚಾಗುತ್ತದೆ. ಕಸ ವಿಲೇವಾರಿ ಬಗ್ಗೆ ಸೂಕ್ತ ಕಾಳಜಿ ವಹಿಸದಿದ್ದರೆ ನಿಮ್ಮ ಅಡುಗೆ ಮನೆಯಲ್ಲಿ ಸೂಕ್ಷ್ಮಜೀವಿಗಳನ್ನು ಸಾಗಿಸುವ ಮೂಲಕ ಸಂತಾನೋತ್ಪತ್ತಿ ಮಾಡುತ್ತವೆ. ಟೈಫಾಯಿಡ್, ಹೆಪಟೈಟಿಸ್ ಎ, ಅತಿಸಾರದಂತಹ ಇತರ ಕಾಯಿಲೆಗಳಿಗೆ ಕಾರಣವಾಗುತ್ತದೆ.
ಆಪಲ್ ವಿನೆಗರ್ : ಒಂದು ಲೋಟ ಆಪಲ್ ವಿನೆಗರ್ ಅನ್ನು ತೆಗೆದುಕೊಂಡು ಅದಕ್ಕೆ ಕೆಲವು ಹನಿ ಡಿಶ್ ವಾಷಿಂಗ್ ಲಿಕ್ವಿಡ್ ಸೇರಿಸಿ. ನಂತರ ಈ ಗಾಜಿನ ಮೇಲೆ ರಬ್ಬರ್ ಹಾಕಿ ಚೆನ್ನಾಗಿ ಕವರ್ ಮಾಡಿ. ಅದರಲ್ಲಿ ಸಣ್ಣ ರಂಧ್ರಗಳನ್ನು ಮಾಡಿ. ನಂತರ ನೊಣಗಳು ಹೆಚ್ಚಾಗಿ ಬರುವ ಜಾಗದಲ್ಲಿ ಇಡಬೇಕು. ಹೀಗೆ ಮಾಡುವುದರಿಂದ ಗಾಜಿನೊಳಗೆ ನೊಣ ಬಂದು ಸಿಕ್ಕಿ ಹಾಕಿಕೊಳ್ಳುತ್ತವೆ.
ಉಪ್ಪು ನೀರು : ಒಂದು ಲೋಟದಲ್ಲಿ ನೀರು ತೆಗೆದುಕೊಳ್ಳಿ, ಅದಕ್ಕೆ 2 ಚಮಚ ಉಪ್ಪನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಈ ಉಪ್ಪು ನೀರನ್ನು ಯಾವುದೇ ಸ್ಪ್ರೇ ಬಾಟಲಿಗೆ ಸುರಿಯಿರಿ ಮತ್ತು ನಂತರ ಅದನ್ನು ನೊಣಗಳ ಮೇಲೆ ಸಿಂಪಡಿಸಿ. ಇದರಿಂದ ನೊಣಗಳು ಮನೆಯಿಂದ ಓಡಿ ಹೋಗುತ್ತವೆ.
ಪುದೀನಾ, ತುಳಸಿ : ಮೊದಲು ಪುದೀನಾ, ತುಳಸಿ ನೀರನ್ನು ಸೇರಿಸಿ ಪೇಸ್ಟ್ ಮಾಡಿ. ಈ ಪೇಸ್ಟ್ ಅನ್ನು ಅವುಗಳ ಮೇಲೆ ಸಿಂಪಡಿಸುವ ಮೂಲಕ ನೊಣಗಳನ್ನು ಮನೆಯಿಂದ ಓಡಿಸಬಹುದು.
ಹಾಲು, ಮೆಣಸು : ಒಂದು ಲೋಟ ಹಾಲಿಗೆ ಒಂದು ಚಮಚ ಕರಿಮೆಣಸಿನ ಪುಡಿಯನ್ನು ಮಿಶ್ರಣ ಮಾಡಿ. ಇದಕ್ಕೆ 3 ಚಮಚ ಸಕ್ಕರೆ ಸೇರಿಸಿ. ನೀವು ಬಹಳಷ್ಟು ನೊಣಗಳನ್ನು ಕಂಡಲ್ಲೆಲ್ಲಾ ಈ ಹಾಲನ್ನು ಇರಿಸಿ. ನೊಣಗಳು ಅದರ ಕಡೆಗೆ ಬಂದು ಅಂಟಿಕೊಂಡು ಮುಳುಗುತ್ತವೆ.