

Premanand Ji Maharaj: ಪ್ರೇಮಾನಂದ್ ಜಿ ಮಹಾರಾಜ್ ಒಬ್ಬ ಆಧ್ಯಾತ್ಮಿಕ ಗುರು. ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಮಾಧ್ಯಮಗಳಲ್ಲಿ ಕಾಣಸಿಕೊಳ್ಳುವ ಅವರ ಮಾತುಗಳು ಎಂತವರನ್ನೂ ಹಿಡಿದಿಟ್ಟುಕೊಳ್ಳುತ್ತವೆ. ಪ್ರೇಮಾನಂದ್ ಜಿ ಅವರ ಅಮೂಲ್ಯವಾದ ಆಲೋಚನೆಗಳು ಜೀವನವನ್ನು ಸುಧಾರಿಸಲು ಮತ್ತು ಸಮತೋಲನ ಕಾಪಡಿಕೊಳ್ಳಲು ನಮಗೆ ಮಾರ್ಗ ದರ್ಶನ ನೀಡುತ್ತವೆ ಎಂದು ಹೇಳಬಹುದು.
ಕೆಲ ಕಾರಣಗಳಿಂದ ನಮ್ಮ ಮನಸ್ಸಿನಲ್ಲಿ ಕೆಟ್ಟ ಮತ್ತು ಒಳ್ಳೆಯ ಭಾವನೆಗಳು ಉಂಟಾಗುತ್ತವೆ. ಹೀಗಾಗಿ, ನಮ್ಮ ಮನಸ್ಸಿನ ಆಲೋಚನೆಗಳನ್ನು ಹಿಡಿದಿಟ್ಟುಕೊಳ್ಳುವುದೇಗೆ ಎಂದು ಪ್ರೇಮಾನಂದ್ ಜಿ ಮಹಾರಾಜ್ ಸಲಹೆ ಇಲ್ಲಿದೆ..
ನೀವು ಎಲ್ಲಿ ಕುಳಿತ್ತಿದ್ದಿರಿ?, ಎಲ್ಲಿ ನಿಂತಿರುವಿರಿ? ಮತ್ತು ಎಲ್ಲಿ ಉಳಿದುಕೊಂಡಿದ್ದಿರಿ ಎಂದು ಮೊದಲು ಅರಿತುಕೊಳ್ಳಬೇಕು. ನಿಮ್ಮ ಸ್ಥಾನಕ್ಕೆ ಅನುಸರವಾಗಿ ವರ್ತಿಸಬೇಕು ಎನ್ನುತ್ತಾರೆ ಪ್ರೇಮಾನಂದ್ ಜಿ. ಅಲ್ಲದೆ, ನಿಮ್ಮ ವರ್ತನೆ ಆ ಸ್ಥಾನದ ಅನುಸಾರವಾಗಿ ಇಲ್ಲದಿದ್ದರೆ, ನಿಮ್ಮ ನಡುವಳಿಕೆಯಿಂದ ನಿಮ್ಮ ವೈಯಕ್ತಿಕ ಚಾರಿತ್ರ್ಯಕ್ಕೆ ಧಕ್ಕೆ ಬರುತ್ತದೆ. ಹೀಗಾಗಿ, ನಮ್ಮ ಸ್ಥಾನಕ್ಕಾನುಸರವಾಗಿ ನಮ್ಮ ನಡುವಳಿಕೆ ಇರುತ್ತದೆ. ಕೆಟ್ಟ ಆಲೋಚನೆಯುಳ್ಳ ಮನುಷ್ಯರಿಂದ ದೂರವಿರಬೇಕು ಎಂದು ಪ್ರೇಮಾನಂದ್ ಜಿ ಹೇಳುತ್ತಾರೆ.
ನಾವು ಪ್ರತಿ ದಿನ ಸೇವಿಸುವ ಆಹಾರ ನಮ್ಮ ನಡುವಳಿಕೆ ಮೇಲೆ ಪ್ರಭಾವ ಬಿರುತ್ತದೆ ಎಂದು ಹೇಳುತ್ತಾರೆ. ಅಲ್ಲದೆ, ನಮ್ಮ ವೇದಾ- ಪುರಾಣಗಳಲ್ಲಿ ಕೂಡ ಉಲ್ಲೇಖಿಸಲಾಗಿದೆ. ಅಡಿಗೆ ತಯಾರು ಮಾಡುವಾಗ ಮತ್ತು ಊಟ ಮಾಡುವಾಗ ನಮ್ಮ ಮನಸ್ಸು ಏನು ಆಲೋಚನೆ ಮಾಡುತ್ತದೆಯೇ ಅದೇ ನಮ್ಮ ಮೇಲೆ ದೊಡ್ಡ ಪರಿಣಾಮ ಬಿರುತ್ತದೆ ಎಂದು ಪ್ರೇಮಾನಂದ್ ಜಿ ಹೇಳುತ್ತಾರೆ. ಈ ದಿನನಿತ್ಯ ಕಾರ್ಯಗಳು ಮಾಡುವಾಗ ದೇವರ ನಾಮಸ್ಮರಣೆ ಮಾಡುವುದು ಒಳಿತು. ಇದರಿಂದ ನಮ್ಮ ಮನಸ್ಸು ದಿನವಿಡೀ ಉಲ್ಲಾಸದಿಂದ ಇರುತ್ತದೆ ಎಂಬುವುದು ಪ್ರೇಮಾನಂದ್ ಜಿ ಅಭಿಪ್ರಾಯ.
ನೀರು ಸೇವನೆ ಕೂಡ ನಮ್ಮ ಮೇಲೆ ದೊಡ್ಡ ಪ್ರಭಾವ ಬೀರುತ್ತದೆ. ನೀರನ್ನು ಯಾರು ತುಂಬಿದರು, ಯಾರು ತಂದರು ಎಂದು ನಮಗೆ ತಿಳಿಯದು. ಅಲ್ಲದೆ, ದಿನನಿತ್ಯ ನಲ್ಲಿ, ಕೊಳಯಿ ಮತ್ತು ಫಿಲ್ಟರ್ ವಾಟರ್ ಹೀಗೆ ಅನೇಕ ಕಡೆಗಳಿಂದ ನಮ್ಮ ಮನೆಗೆ ನೀರು ಬರುತ್ತವೆ. ಹೀಗಾಗಿ, ನೀರು ಕೂಡ ಮಲಿನವಾಗಿವೆ. ಇದರಿಂದ ನಾವು ಒಳ್ಳೆಯ ನೀರು (ನದಿ ನೀರು, ಹರಿಯುವ ನೀರು) ಸೇವನೆ ಒಳ್ಳೆಯದು. ಇದರಿಂದ ನಮ್ಮ ದೇಹ ಮತ್ತು ಮನಸ್ಸು ಪರಿಶುದ್ಧವಾಗರುತ್ತದೆ ಎಂದು ಪ್ರೇಮಾನಂದ್ ಗುರುಜಿ ಹೇಳುತ್ತಾರೆ.(ಏಜೆನ್ಸೀಸ್)