

ಧ್ಯಾನ್ ಆಶ್ರಮದ ಅಶ್ವಿನಿ ಗುರೂಜಿ: ಭಾರತೀಯ ವೈದ್ಯಕೀಯ ಸಂಘದ ಮುಂಬೈ ಶಾಖೆಯ 192 ವೈದ್ಯರ ಸಮಾವೇಶ ನಡೆದಿತ್ತು. ಈ ಸಮಾವೇಶದಲ್ಲಿ ಒಬ್ಬ ಮಹಾನ್ ಯೋಗಿಗಳು ಮಾತನಾಡುವುದಿತ್ತು. ಅವರು ಮುಂಚೆಯೇ, ರೋಗಿಗಳ ಯಾವುದೇ ರೋಗದ ಬಗ್ಗೆ ತಿಳಿಸದೆ, ಏಳು ವಿವಿಧ ರೋಗಿಗಳ ಭಾವಚಿತ್ರಗಳನ್ನು ತರುವಂತೆ ವೈದ್ಯರಿಗೆ ಸೂಚಿಸಿದರು. ಹಾಗೆಯೇ ಅವರು ಏಳು ಭಾವಚಿತ್ರಗಳನ್ನು ಗುರುಗಳಿಗೆ ತಂದು ಒಪ್ಪಿಸಿದರು. ಆ ಭಾವಚಿತ್ರಗಳನ್ನು ಸೂಕ್ಷ್ಮವಾಗಿ ಗಮನಿಸಿದ ಗುರುಗಳು ಅವರಿಗಿರುವ ಕಾಯಿಲೆಗಳನ್ನು ಒಂದೊಂದಾಗಿ ವಿವರಿಸಿದರು. ಈ ಏಳೂ ರೋಗಿಗಳು, ಗುರುಗಳು ಹೇಳಿದ ಆಯಾ ಕಾಯಿಲೆಯಿಂದಲೇ ಬಳಲುತ್ತಿದ್ದರು. ಇದು ಅತಿಂದ್ರಿಯ ದೃಷ್ಟಿ ವಿದ್ಯೆಯ ಒಂದು ಭಾಗ. ಗುರುಗಳ ಈ ವಿಶ್ಲೇಷಣೆಯಿಂದ ಇಡೀ ವೈದ್ಯತಂಡವೇ ಮೂಕವಿಸ್ಮಿತವಾಯಿತು. ಇವರೇ ಧ್ಯಾನ್ ಆಶ್ರಮದ ಅಶ್ವಿನಿ ಗುರೂಜಿ. ಧ್ಯಾನ್ ಆಶ್ರಮವು ಯೋಗಪ್ರಸಾರದೊಂದಿಗೆ ಹಲವು ಸಮಾಜಮುಖಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದೆ. ಕರ್ನಾಟಕದಲ್ಲಿ ಮಂಡ್ಯ, ತುಮಕೂರು ಜಿಲ್ಲೆ ಹಾಗೂ ಹುಬ್ಬಳ್ಳಿಯಲ್ಲಿ 1800 ಗೋವುಗಳು ಸೇರಿದಂತೆ ರಾಷ್ಟ್ರಾದ್ಯಂತ 50 ಸಾವಿರಕ್ಕೂ ಅಧಿಕ ಗೋವುಗಳ ಸಂರಕ್ಷಣೆ ಕಾರ್ಯ ನಡೆದಿದೆ. ಆಶ್ರಮದಲ್ಲಿ ಅಷ್ಟಾಂಗ ಯೋಗ ಕಲಿಕೆಯ ರೀತಿಯೂ ವಿಭಿನ್ನ. ಉಚಿತ ಯೋಗ ತರಗತಿಗೆ ಬರುವ ಪ್ರತಿ ವ್ಯಕ್ತಿಯನ್ನೂ ಸ್ಕಾ್ಯನ್ ಮಾಡಿ ಆ ವ್ಯಕ್ತಿಯ ಮನೋಧರ್ಮ ಮತ್ತು ದೇಹದಲ್ಲಿರಬಹುದಾದ ಮತ್ತು ಮುಂದೆ ಬರಬಹುದಾದ ದೈಹಿಕ ತೊಂದರೆಗಳ ತಡೆ ಅಥವಾ ನಿವಾರಣೆಗೆ ಅಗತ್ಯವಾದ ರೀತಿಯ ಯೋಗ ಹೇಳಿಕೊಡುವುದು ಅಶ್ವಿನಿ ಗುರುಗಳ ವಿಶೇಷ.
ಬೆಂಗ್ಳೂರಲ್ಲಿ ಪ್ರವಚನ: ಧ್ಯಾನ್ ಆಶ್ರಮದ ಅಶ್ವಿನಿ ಗುರೂಜಿ ನಾಳೆ (ಜ.12) ಬೆಂಗಳೂರಿ ನಲ್ಲಿ ವಾಸ್ತವ್ಯ ಇದ್ದು, ಸಾರ್ವಜನಿಕರು ಭೇಟಿ ಮಾಡಬಹು ದಾಗಿದೆ. ಸಂಜೆ 5.30ರಿಂದ 8ರವರೆಗೆ ಗಾಂಧಿನಗರದ ತೇರಾಪಂಥ್ ಭವನದಲ್ಲಿ ಪ್ರವಚನ ನಡೆಯಲಿದೆ. ಹೆಚ್ಚಿನ ಮಾಹಿತಿಗೆ 94483-35830, 87225-55573.
(ಲೇಖಕರು ಹಿರಿಯ ಪತ್ರಕರ್ತರು)